ಬದುಕೆಂದರೆ ಕೇವಲ ಮೋಜು–ಮಸ್ತಿಯಲ್ಲ, ಅದೊಂದು ಕರ್ತವ್ಯ ಎಂಬ ಪ್ರಜ್ಞೆಯನ್ನು ನಾವು ಮರೆತಿಲ್ಲವಾದರೆ ಅದನ್ನು ಮರೆಯುವಂತೆ ಮಕ್ಕಳನ್ನೇಕೆ ರೂಪಿಸಬೇಕು? ಪೋಷಕರು ಹೊರೆಯಲ್ಲ ಎಂಬ ಅರಿವು ನಮಗೆ ಇದ್ದುದೇ ಹೌದಾದರೆ ಅದೇ ಮನಃಸ್ಥಿತಿಯನ್ನು ನಮ್ಮ ಮಕ್ಕಳಲ್ಲೂ ಅರಳಿಸಬೇಕಾಗಿರುವುದು ಇಂದಿನ ಅಗತ್ಯವೇ ಹೌದು. ಮನೆಯೆಂದರೆ ಕೇವಲ ಗಂಡ–ಹೆಂಡತಿಯಲ್ಲ; ಅಜ್ಜಿ–ಅಜ್ಜ, ಅಪ್ಪ–ಅಮ್ಮ–ಮಕ್ಕಳಿಂದ ಕೂಡಿದ ಬಂಧ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಈ ಬಗ್ಗೆ ನಾವೇ ಹಿಮ್ಮೆಟ್ಟಿದರೆ ಮಕ್ಕಳಿಗೆ ಕಲಿಸುವವರಾರು? ಮನೆಯೆಂದರೆ ನೀರು, ನೆರಳು, ಹಣ್ಣುಗಳನ್ನೊದಗಿಸುವ ಒಂದು ಸುಂದರ ಮರವೇ ಹೌದಲ್ಲ, ಅಲ್ಲಿ ಹಳೆಯಬೇರುಗಳು, […]











