ಜರ್ಮನಿಯ ಜನ ಸಮಯಕ್ಕೆ ಕೊಡುವ ಬೆಲೆ, ಪರಿಸರವನ್ನು ಕಾಯ್ದುಕೊಳ್ಳುವ ರೀತಿ, ಅಲ್ಲಿನ ರಸ್ತೆಗಳು, ಸಾರಿಗೆ ವ್ಯವಸ್ಥೆ, ಸಾರಿಗೆ ನಿಯಮಗಳು, ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನ ಕಾಯ್ದುಕೊಳ್ಳುವ ರೀತಿ ಎಲ್ಲದರ ಬಗ್ಗೆಯೂ ಹರಿಗಿರುವಷ್ಟೇ ಖುಷಿ, ಸಹಮತ ಮಣಿಕರ್ಣಿಕಾಗೂ ಇದೆ. ಆದರೆ ಕೆಲವೊಮ್ಮೆ ಅಲ್ಲಿನ ನಿಯಮಗಳು ಉಸಿರುಗಟ್ಟಿಸಿದ ಹಾಗೂ ಅನ್ನಿಸುತ್ತದೆ. ಮದ್ಯಪಾನ, ಧೂಮಪಾನವನ್ನು ರಾಜಾರೋಷವಾಗಿ ಮಾಡಿದರೂ ಕೇಳುವವರಿಲ್ಲ, ಅಲ್ಲಿ ಎಲ್ಲದಕ್ಕೂ ಅವಕಾಶ. ಮುಕ್ತ ಲೈಂಗಿಕತೆಗೂ! ಬಸ್ಸ್ಟಾಪಿನಲ್ಲಿ ಪಕ್ಕವೇ ಕೂತು ಯಾರೋ ಒಬ್ಬ ಸಿಗರೇಟ್ ಸೇದುತ್ತಿದ್ದರೂ ಹೊಗೆ ಕುಡಿದುಕೊಂಡು ಪ್ಯಾಸಿವ್ […]











