ನಮ್ಮ ನಾಡಿನ ಭಾಷೆ – ಕನ್ನಡ, ಇತ್ತೀಚೆಗೆ ಕಲಿಕೆಯ ಭಾಷಾಮಾಧ್ಯಮಕ್ಕಾಗಿ ಬಹಳ ಸುದ್ದಿಯಲ್ಲಿದೆ. ಅದೇ ಕಾರಣಕ್ಕಾಗಿ ಆತಂಕವನ್ನು ಉಂಟುಮಾಡುತ್ತಿದೆ. ಕನ್ನಡ ಭಾಷೆ ಸಾಹಿತ್ಯಿಕವಾಗಿ, ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುವ ಶ್ರೇಣಿಗೆ ಬೆಳೆದು ಎಂಟು ಜ್ಞಾನಪೀಠ ಪ್ರಶಸ್ತ್ತಿಗಳನ್ನು ಸಂಪಾದಿಸಿಕೊಂಡಿದೆ; ಇದರ ಹೆಗ್ಗಳಿಕೆ ಸಾಹಿತಿಗಳಿಗೆ ಮಾತ್ರವೇ ಸಲ್ಲುವುದಾಗಿದೆ. ಸರಕಾರ ಮತ್ತು ಸಾರ್ವಜನಿಕ ವಲಯಗಳಲ್ಲಿ ಸಹಜವಾಗಿ ಬಳಕೆಯಾಗಿ ಬೇರೂರಬೇಕಾಗಿದ್ದ ಭಾಷೆ ಮಾತ್ರ ತಳಮಟ್ಟದಲ್ಲಿಯೇ ಸೊರಗುತ್ತಿದೆ; ಮಾತ್ರವಲ್ಲ ಮೂಲೆ ಗುಂಪಾಗುವ ಪರಿಸ್ಥಿತಿಯನ್ನೂ ಕಾಣುತ್ತಿದೆ.
ಭಾಷಾವಾರು ಪ್ರಾಂತ್ಯರಚನೆಯ ಮೂಲ ಉದ್ದೇಶಾನುಗುಣವಾಗಿ, ಕನ್ನಡಕ್ಕೆ ಆದ್ಯತೆ-ಪ್ರಾಧಾನ್ಯತೆಗಳು ದೊರೆಯಬೇಕಾಗಿತ್ತು, ದೊರೆಯದಿರುವುದಕ್ಕೆ ಸರಕಾರದ ಇಚ್ಛಾಶಕ್ತಿಯ ಕೊರತೆಯೂ ಸೇರಿದಂತೆ ಪೆಷಕವರ್ಗದ ನಿರಭಿಮಾನವೂ ಸೇರಿದೆ. ಭಾಷೆಯ ಆದ್ಯತೆ-ಪ್ರಾಧಾನ್ಯತೆಗಳ ಓಂಕಾರ ಶಾಲಾಶಿಕ್ಷಣದಲ್ಲಿ (ತರಗತಿ ೧ ರಿಂದ ೧೦) ಪ್ರಾರಂಭವಾಗಬೇಕು ಎಂಬುದನ್ನು ಅಲ್ಲಗಳೆಯುವಂತಿಲ್ಲ. (ವರ್ತಮಾನದಲ್ಲಿ, ೫-೬ ಪ್ರಥಮಭಾಷೆಗಳಲ್ಲಿ ಕನ್ನಡವೂ ಒಂದು, ಹಾಗೆಯೇ ೪-೫ ಮಾಧ್ಯಮಗಳಲ್ಲಿ ಕನ್ನಡ ಮಾಧ್ಯಮವೂ ಒಂದು).
ಬದಲಾಗುತ್ತಿರುವ ಈ ದಿನಮಾನಗಳಲ್ಲ್ಲಿ ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್ ಮೂಲಕವೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂಬ ಆಶಯ, ಭ್ರ್ರಮೆ ಹೊತ್ತಿರುತ್ತಾರೆ. ಪೆಷಕವರ್ಗದ ಈ ಆಶಯಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ, ಪೆಷಕ ಕಪಾಪೆಷಿತ ವಿದ್ಯಾಸಂಸ್ಥೆಗಳು ಸೊಂಟಕಟ್ಟಿ ನಿಂತಿವೆ, ಹುಲುಸಾಗಿಯೂ ಬೆಳೆಯುತ್ತಿವೆ. ಈ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಒಂದು ಸುವರ್ಣ ಮಾರ್ಗವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ. ಆ ಸುವರ್ಣ ಮಾರ್ಗ/ಸೂತ್ರ ಹೀಗಿರಬಹುದಾಗಿದೆ:
ಶಾಲಾಶಿಕ್ಷಣದ ಐದನೇ ತರಗತಿಯಿಂದಾಚೆಗೆ –
ಪ್ರಥಮಭಾಷೆಯಾಗಿ | ಮಾಧ್ಯಮವಾಗಿ | ದ್ವ್ವಿತೀಯಭಾಷೆಯಾಗಿ | |
೧. ಕನ್ನಡ | ಕನ್ನಡ | ಇಂಗ್ಲಿಷ್ | |
೨. ಕನ್ನಡ | ಇಂಗ್ಲಿಷ್+ | ಕನ್ನಡ/ಇಂಗ್ಲಿಷ್ | |
೩. ಇಂಗ್ಲಿಷ್++ | ಕನ್ನಡ | ಕನ್ನಡ/ಇಂಗ್ಲಿಷ್ | |
೧. ಬಹಳ ಮಟ್ಟಿಗೆ ಗ್ರ್ರಾಮಾಂತರದ ಎಲ್ಲ ಶಾಲೆಗಳಲ್ಲಿ ರೂಢಿಯಲ್ಲಿದೆ. | ೨. + ಇಂಗ್ಲಿಷ್ಗೆ ಬದಲಾಗಿ ಬೇರೆ ಅವಕಾಶವಿದ್ದರೆ ಭಾಷಾಮಾಧ್ಯಮದ ಉಪಯೋಗಪಡೆಯಹುದು. | ೩. ++ ಬೇರೆ ಭಾಷೆಯನ್ನು ಪ್ರಥಮಭಾಷೆಯಾಗಿ ಓದಬಹುದು – ಅಗತ್ಯವೆನಿಸಿದರೆ. |
ಒಟ್ಟಿನಲ್ಲಿ, ಹತ್ತನೆಯ ತರಗತಿಯಲ್ಲಿ – (ಎಸ್.ಎಸ್.ಎಲ್.ಸಿ) ತೇರ್ಗಡೆಯಾಗುವ ವಿದ್ಯಾರ್ಥಿ ಕನ್ನಡವನ್ನು ಪ್ರಥಮಭಾಷೆಯಾಗಿ ಅಥವಾ ಕನ್ನಡ ಮಾಧ್ಯಮವಾಗಿ ವ್ಯಾಸಂಗಮಾಡುವುದು ಅನಿವಾರ್ಯವಾಗಿರಬೇಕು. ಇದರಿಂದ ಪೆಷಕವರ್ಗಕ್ಕೂ ಆಯ್ಕೆಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿದಂತಾಗುವುದು. ಮೊದಲನೇ ವರ್ಗದವರಿಗೆ ಉದ್ಯೋಗ ಮತ್ತು ವೃತ್ತಿ ಶಿಕ್ಷಣಗಳಲ್ಲ್ಲಿ ಉತ್ತೇಜನಾರ್ಹ ಮೀಸಲಾತಿ ಇರಿಸಬೇಕು, ಆಗ ನಾಡಿನ ಭಾಷೆಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂಬುದು ನನ್ನ ಅಭಿಪ್ರಾಯ.