
ಅರ್ಧನಾವಾಸನ, ನಾವಾಸನ ಹಾಗೂ ಪರಿಪೂರ್ಣನಾವಾಸನ – ಹೀಗೆ ನಾವಾಸನದ ಮೂರೂ ವಿಧಗಳನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಹೊಟ್ಟೆಯ ಭಾಗದಲ್ಲಿ ಶೇಖರವಾಗಿರುವ ಕೊಬ್ಬನ್ನು ಬಹುಬೇಗ ಕರಗಿಸಿಕೊಳ್ಳಲು ಮತ್ತು ಉದರಭಾಗದಲ್ಲಿರುವ ಎಲ್ಲ ಜೀವಾಧಾರಕ ಅಂಗಾಂಗಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
Month : March-2016 Episode : Author : ಕೇಬಿ
Month : February-2016 Episode : Author : ಕೇಬಿ
ತನ್ನ ಅಮ್ಮನಿಗೆ ಅತಿ ಪ್ರೀತಿಯ ಮುದ್ದಿನ ಮಗನೊಬ್ಬ ಇದ್ದ. ಆ ಅಮ್ಮ ಬಡವಳಾದರೂ ತುಂಬ ದಯಾಳುವಾಗಿದ್ದಳು. ತನ್ನ ಮಗನಿಗೂ ಕೂಡ ಅವಳು ತನ್ನ ಗುಣವನ್ನೇ ಕಲಿಸಿಕೊಡುತ್ತಿದ್ದಳು: ನೋಡು ಮಗ, ಬಡವರನ್ನು ಯಾವತ್ತೂ ಕೀಳಾಗಿ ಕಾಣಬಾರದು. ಅವರನ್ನು ಯಾವತ್ತೂ ಪೀಡಿಸಬಾರದು. ನಿನ್ನ ಜತೆಗೆ ಯಾರು ಬಡವರಿದ್ದಾರೋ ಅವರಿಗೆ ಕೈಲಾದ ಸಹಾಯವನ್ನು ಮಾಡು. ಅವರನ್ನು ಗೆಳೆಯರನ್ನಾಗಿ ಮಾಡಿಕೋ. ಅವರೂ ಕೂಡ ನಿನ್ನನ್ನು ಪ್ರೀತಿ ಮಾಡುವರು ಮತ್ತು ನಿನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದವನ್ನು ಮಾಡುವರು. ಅದರಿಂದ ದೇವರಿಗೆ ಕೂಡ ತುಂಬ ಸಂತೋಷವಾಗುತ್ತದೆ. […]
Month : December-2015 Episode : Author : ಕೇಬಿ
Month : September-2015 Episode : Author : ಕೇಬಿ
ಬಡ ರೈತರ ಮತ್ತು ಮಹಿಳೆಯರ ಜೀವನವನ್ನು ಸುಸ್ಥಿರ ಕೃಷಿ ಮತ್ತು ಆರ್ಥಿಕಸೇರ್ಪಡೆಯ ಮೂಲಕ ಉತ್ತಮಪಡಿಸುವ ದಿಶೆಯಲ್ಲಿ ಐ.ಡಿ.ಎಫ್. ಸಂಸ್ಥೆ ೨೦೦೯ರಲ್ಲಿ ‘ಸುಜೀವನ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ತನ್ನ ಚಟುವಟಿಕೆಯನ್ನು ಪ್ರಾರಂಭಿಸಿತು. ಪ್ರಾರಂಭದಲ್ಲಿ ೧೩ ಹಳ್ಳಿಗಳಲ್ಲಿ ಪ್ರಾರಂಭವಾದ ಚಟುವಟಿಕೆ, ಅನಂತರ ತಾಲ್ಲೂಕಿನ ಎಲ್ಲ ೬ ಹೋಬಳಿಗೂ ವಿಸ್ತರಿಸಿತು. ಇದೀಗ ೨೦೧೦ರಿಂದ ಐ.ಡಿ.ಎಫ್. ಸಂಸ್ಥೆಯ ಪ್ರೇರಣೆಯಿಂದ ಜನ್ಮತಾಳಿದ ಕುಣಿಗಲ್ ‘ಐ.ಡಿ.ಎಫ್. ಸುಜೀವನ ಒಕ್ಕೂಟ’ ಕಾರ್ಯಕ್ರಮದ ಜವಾಬ್ದಾರಿಯನ್ನು, ಹಂತಹಂತವಾಗಿ ಹೊತ್ತುಕೊಂಡು, ತಾನೇ ನಿರ್ವಹಿಸುತ್ತಿದೆ. ಸುಜೀವನ ಒಕ್ಕೂಟ […]
Month : August-2015 Episode : Author : ಕೇಬಿ
ಹಿಂದಿನ ಸಂಚಿಕೆಗಳಲ್ಲಿ ಸೊಂಟ ಮತ್ತು ಪಕ್ಕೆಯ ಬೊಜ್ಜನ್ನು ಕರಗಿಸುವ ಆಸನಗಳನ್ನು ಕಲಿತಿದ್ದೇವೆ. ಈಗ ಸೊಂಟ ಮತ್ತು ಹೊಟ್ಟೆಯ ಬೊಜ್ಜನ್ನು ಕರಗಿಸುವ ಕೆಲವು ಆಸನಗಳು ಕಲಿಯೋಣ. ಇವುಗಳು ದೇಹವನ್ನು ತಿರುಚಿ ಮಾಡುವ ಆಸನಗಳಾದ್ದರಿಂದ, ಮೊದಲನೆಯದಾಗಿ – ಈ ಎಲ್ಲ ಆಸನಗಳ ಅಭ್ಯಾಸದಲ್ಲಿ ಸ್ಥಿತಿಗೆ ಹೋಗುವಾಗ ಉಸಿರನ್ನು ಬಿಡುತ್ತಾ ಹೋಗಬೇಕು ಮತ್ತು ಸ್ಥಿತಿಗೆ ಮರಳುವಾಗ ಉಸಿರನ್ನು ತೆಗೆದುಕೊಳ್ಳುತ್ತಾ ಬರಬೇಕು. ಆಸನದ ಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸುವಾಗ ಉಸಿರನ್ನು ಬಿಡುತ್ತಾ ತಿದ್ದಿಕೊಳ್ಳಬೇಕು. ಎರಡನೆಯದಾಗಿ – ಈ ಎಲ್ಲ ಆಸನಗಳ ಅಭ್ಯಾಸದಲ್ಲಿ ಸೊಂಟ ಮತ್ತು […]
ದೈಹಿಕ ಸೌಂದರ್ಯಪ್ರಜ್ಞೆಯುಳ್ಳ ಪ್ರತಿಯೊಬ್ಬರನ್ನೂ ಕಾಡುವ ಒಂದು ಸಮಸ್ಯೆ ಎಂದರೆ ಪಕ್ಕೆ ಮತ್ತು ಸೊಂಟದ ಬೊಜ್ಜಿನದು. ದೇಹದ ಈ ಭಾಗದಲ್ಲಿ ಶೇಖರಣೆಯಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಿ, ಸೌದರ್ಯವನ್ನು ಪನರ್ಸ್ಥಾಪಿಸಲು ಮೊದಲು ತಿಳಿಸಿರುವ (ನೋಡಿ: ‘ಉತ್ಥಾನ, ಮೇ ೨೦೧೫) ಕೆಲವು ಆಸನಗಳ ಜೊತೆಗೆ – ತ್ರಿಕೋನಾಸನ ಪ್ರಕಾರ ಎರಡು, ಪರಿಘಾಸನ ಪ್ರಕಾರ ಒಂದು ಮತ್ತು ಎರಡು – ಇವುಗಳನ್ನೂ ಅಳವಡಿಸಿಕೊಂಡು, ನಿಯಮಿತವಾಗಿ ಆಸ್ಥೆಯಿಂದ ಮಾಡುವುದರಿಂದ ಸಾಧ್ಯವಾಗುತ್ತದೆ.
Month : March-2015 Episode : Author : ಕೇಬಿ
೧. ಖಿಲ (ಕಾದಂಬರಿ) ಲೇಖಕರು: ಶಶಿಧರ ವಿಶ್ವಾಮಿತ್ರ ಪ್ರಕಾಶಕರು: ಸಾಹಿತ್ಯ ಭಂಡಾರ, ಜಂಗಮಮೇಸ್ತ್ರಿ ಗಲ್ಲಿ, ಬಳೇಪೇಟೆ, ಬೆಂಗಳೂರು – ೫೬೦ ೦೫೩ ಬೆಲೆ ರೂ. ೨೧೦. ಭೂಮಿಯಲ್ಲಿ ದೊರಕುವ ಸಂಪನ್ಮೂಲಗಳಿಗೆ ಮಿತಿಯುಂಟು; ಇವು ಅಮಿತ ಎನ್ನುವಂತೆ ಯಂತ್ರಸಂಸ್ಕೃತಿ ಬಳಸಿಕೊಂಡು ಸಂವರ್ಧಿಸುತ್ತಿದೆ. ಪರಿಣಾಮವಾಗಿ ತ್ಯಾಜ್ಯ ಮತ್ತು ವಿಷಪೂರಿತ ಮಾಲಿನ್ಯಗಳ ಪರಿಣಾಮಗಳು ಹೆಚ್ಚುತ್ತಿವೆ. ನೆಲ, ನೀರು ಮತ್ತು ಗಾಳಿಯ ಜೀವಸೆಲೆಯಾಸರೆಗಳು ಕ್ಷೆಭೆಗೊಂಡಿವೆ. ಮನುಷ್ಯನ ಶಾಂತಿ ನೆಮ್ಮದಿಗಳು ಕಳೆಗುಂದಿವೆ ಎನ್ನುವ ಆತಂಕ ಹುಟ್ಟಿಸುವ ತಿಳಿವಳಿಕೆ ಹುಟ್ಟಿದ ಮೇಲೂ ಮನುಷ್ಯನ ಚರ್ಯೆ ಹೆಚ್ಚು […]