
“ಗೌರಿ, ಈ ಕರಿಮಣಿಸರಾನ ತೆಗೆದುಬಿಡೆ, ಒಂದು ಕರಿಮಣಿಗುಂಡು ತಾಗಿದ್ರು ನೋವು ಹೆಚ್ಚಾಗಿ ಕರ್ಳು ಕಿವಿಚಿದ್ಹಂಗೆ ಆಗ್ತು.’’ ಮಲಗಿಕೊಂಡಿದ್ದ ಅಕ್ಕ ನಾನವಳ ಹಾಸಿಗೆ ಪಕ್ಕ ಕುಳಿತುಕೊಳ್ಳುತ್ತಿದ್ದಂತೆಯೇ ಹೇಳಿದಾಗ ದಂಗಾಗಿಬಿಟ್ಟೆ. ನಾನು ಬಾಲ್ಯದಿಂದ ಕಂಡ ಅಕ್ಕ ಇವಳಲ್ಲವೇ ಅಲ್ಲ ಅನ್ನಿಸುವಂತಿತ್ತು ಅಕ್ಕನ ಮಾತು. ಕರಿಮಣಿಸರದ ಒಂದು ಎಳೆ ತುಂಡಾದರೂ ಮನೆಯ ಹೊಸಿಲ ಹೊರಗೇ ಕೂತು, ಮತ್ತೆ ಪೋಣಿಸಿಕೊಂಡು, ಸರ ಹಾಕಿಕೊಂಡೇ ಮನೆಯೊಳಗೇ ಬರುತ್ತಿದ್ದ ಅಕ್ಕ ಇವಳೇನಾ? ಎನ್ನಿಸಿತು. ಅಕ್ಕ ಇಷ್ಟು ನೆಲ ಕಚ್ಚಿದ್ದಾಳೆಂದು ನಾನು ಊಹಿಸಿರಲೂ ಇಲ್ಲ. ‘ಚಿಕ್ಕಿ, ಅಮ್ಮ […]