
ಸದಾ ನಗುವ ಮುಖ. ಒಟ್ಟಿನಲ್ಲಿ ಬಲೇ ಶೋಕಿಲಾಲ. ಏನೂ ಕೆಲಸ ಮಾಡದಿದ್ದರೂ ಸರಿ, ಬೆಳಗಾಗೆದ್ದು ಸ್ನಾನ ಮಾಡಿ ನೀಟಾಗಿ ಬಿಳಿ ಪಂಚೆ, ಮೇಲೊಂದು ಬಿಳಿಯ ಷರಟು. ಮನೆಯಿಂದ ಹೊರಟು ಆಂಜನೇಯನಿಗೊAದು ನಮಸ್ಕಾರ ಸಲ್ಲಿಸಿ ಊರ ಮಧ್ಯದ ಅರಳೀಕಟ್ಟೆಯ ಬಳಿ ಬಂದರೆ ಸಾಕು ಯಾರಾದರೊಬ್ಬರು ಮಿಕ ಬಲೆಗೆ ಬೀಳುವುದು ಗ್ಯಾರಂಟಿ. ಊರಿನಲ್ಲಿದ್ದವರಿಗೆಲ್ಲ ಇವನ ಸ್ವಭಾವ ಗೊತ್ತಿದ್ದರೂ ಒಬ್ಬರಲ್ಲ ಒಬ್ಬರು ಖೆಡ್ಡಾಕ್ಕೆ ಬೀಳಿಸುವ ಇವನ ಪರಿಗೆ ತಲೆಬಾಗುತ್ತಿದ್ದರೆಂಬುದರಲ್ಲಿ ಆಶ್ಚರ್ಯವಿಲ್ಲ. ಊರು-ಕೇರಿ ಎಂದ ಮೇಲೆ ಎಲ್ಲ ಸ್ವಭಾವಗಳ ಜನರನ್ನು ಕಾಣಬಹುದು. ಹುಟ್ಟಿನಿಂದಲೇ […]