ಅದು ೨೦೧೩, ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ. ದಕ್ಷಿಣ ಮುಂಬೈನ ತುದಿಯಲ್ಲಿ ಸಮುದ್ರಕ್ಕೆ ಚಾಚಿಕೊಂಡಿರುವ ಕೊಲಾಬಾ ಪ್ರದೇಶದಲ್ಲಿ ಭಯಂಕರ ಆಸ್ಫೋಟ ಕೇಳಿಸಿತು ಮತ್ತು ಭೂಮ್ಯಾಕಾಶಗಳನ್ನು ಒಂದಾಗಿಸುವಂತಹ ಅಗ್ನಿಜ್ವಾಲೆ ಎದ್ದಿತು. ಅನೇಕ ಗಂಟೆಗಳ ಕಾಲ ಉರಿಯುತ್ತಿದ್ದ ಈ ಅಗ್ನಿಜ್ವಾಲೆ, ಹಲವು ಕಿ.ಮೀ.ಗಳಷ್ಟು ದೂರದಿಂದಲೂ ಕಾಣುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾಗಿದ್ದರಿಂದ, ಅದು ಭಯೋತ್ಪಾದಕರ ಕೃತ್ಯವಿರಬೇಕೆಂದು ಅನೇಕರು ಶಂಕಿಸುವ ಸಾಧ್ಯತೆಯೂ ಇದ್ದಿತು. ಘಟನೆ ಸಂಭವಿಸಿದ ಕೆಲ ನಿಮಿಷಗಳಲ್ಲೇ ಸುದ್ದಿವಾಹಿನಿಗಳಲ್ಲಿ ಈ ಸುದ್ದಿಯ ಪ್ರಸಾರವಾಗಿ ಜನರ ಮನಸ್ಸಿನಲ್ಲಿದ್ದ ಅನುಮಾನಗಳಿಗೆ ಅಂತ್ಯ ಹಾಡಿತು. […]
ಲೆಫ್ಟಿನೆಂಟ್ ಕಮಾಂಡರ್ ಕಪೀಶ್ಸಿಂಗ್ ಮುವಾಲ್ ಮತ್ತು ಲೆಫ್ಟಿನೆಂಟ್ ಕಮಾಂಡರ್ ಮನೋರಂಜನ್ಕುಮಾರ್
Month : March-2023 Episode : ಯೋಧರ ವೀರಗಾಥೆಗಳು Author : ಎಸ್. ಎಸ್. ನರೇಂದ್ರಕುಮಾರ್