ಹೊರಗಿನಿಂದ ಬಂದ ಬ್ರಿಟಿಷರು ಭಾರತದ ಕುರಿತು ಹೇಳುತ್ತಿದ್ದ ಮಾತುಗಳನ್ನು ಅಕ್ಷರಶಃ ನಂಬಿದವರು ಭಾರತ ಆಧುನಿಕವಾಗಬೇಕು ಎಂದರು. ಹೊಸತು ಎನ್ನುವುದು ಹಳತರ ಮುಂದುವರಿದ ಭಾಗ ಅಥವಾ ಹಳೆಯ ಬೇರಿನಿಂದ ಸತ್ತ್ವವನ್ನು ಹೀರಿ ಬೆಳೆದ ಹೊಸ ಚಿಗುರು ಎನ್ನಿಸಬೇಕಿತ್ತು. ಆದರೆ ಆಧುನಿಕ ಎನ್ನುವುದಕ್ಕೆ ಹಳತರ ಹಂಗೇ ಇಲ್ಲ ಎನ್ನುವ ನಿರ್ಣಯ ತೆಗೆದುಕೊಂಡಿದ್ದರಿಂದ ಬೆಳವಣಿಗೆಯ ನಡೆಯಲ್ಲಿ ಭಾರತದ ಸ್ಪರ್ಶವೇ ಉಳಿಯಲಿಲ್ಲ. ಭಾರತ ಕತ್ತಲೆಯ ಯುಗದಿಂದ ಬೆಳಕಿಗೆ ತೆರೆದುಕೊಂಡಿತು ಎಂದು ಮಂಡಿಸಿ ಇತಿಹಾಸವನ್ನೇ ಕತ್ತಲೆಗೆ ದೂಡಲಾಯಿತು. ಕಾಲ ಎನ್ನುವುದು ನೇರ ರೇಖೆಯಲ್ಲಿ ಚಲಿಸುತ್ತದೆ, […]













