
ಕೆರೆಗಳನ್ನು ಕಟ್ಟಿಸುವುದು, ಬೇಸಾಯಕ್ಕೆ ನೀರೊದಗಿಸುವುದು ಇಹಪರಗಳಲ್ಲಿ ಒಳ್ಳೆಯ ಸ್ಥಾನ, ಸದ್ಗತಿಗಳನ್ನು ನೀಡುವ ಕಾರ್ಯ ಎಂದು ನಮ್ಮ ಪೂರ್ವಿಕರು ನಂಬಿದ್ದರಿಂದ ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪುರಾತನವಾದ ಕೆರೆಗಳು ಕಂಡುಬರುತ್ತವೆ. ವಿಜಯನಗರ ರಾಜರ ಆಳ್ವಿಕೆಯ ಕಾಲದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆ, ಹೆಚ್ಚಾಗುತ್ತಿದ್ದ ಕೃಷಿಭೂಮಿಗೆ ಅನುಗುಣವಾಗಿ ಕೆರೆ, ಕುಂಟೆ ಇತ್ಯಾದಿ ಜಲಸಂಗ್ರಾಹಕಗಳನ್ನು, ಕಾಲುವೆಗಳನ್ನು ಅಧಿಕ ಸಂಖ್ಯೆಯಲ್ಲಿ ನಿರ್ಮಿಸಲಾಯಿತು. ಮಾನವ ಜಗತ್ತಿನ ಅತಿ ಮುಖ್ಯ ಮತ್ತು ಅನಿವಾರ್ಯ ಚಟುವಟಿಕೆ ಕೃಷಿ ಕಾರ್ಯ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬುದು ಜನಜನಿತ ನುಡಿ. ಬಹುಶಃ […]