ಎಳೆಬಿಸಿಲು ಮೈತಾಗಿ ಹೊಳೆವ ಕನ್ನಡಿಯಾಗೆ ನನ್ನೊಳಗೆ ಮುಖ ನೋಡಿ ನಗುವ ದಿವಾಕರನು ಮತ್ತೆ ಕೆಂಪಾಗಿ ರಂಗೇರಿ ಮರೆಯಾಗುತ್ತಿದ್ದುದು ನನ್ನಾ ತೀರದಂಚಲ್ಲಿ. ಕಂಕುಳಲಿ ಕೂತು ಬಂದ ಮಗುವೂ, ತಲೆಯಲಿ ಹೊತ್ತು ತಂದ ವಸ್ತ್ರವೂ ಹೊಳೆಯುತ್ತಿದ್ದುದು ನನ್ನೊಳಗೆ ಮುಳುಗಿ ಎದ್ದಾಗಲೇ. ಮೈ ಕೈ ತುಂಬಿದ ಹೆಣ್ಣಾಗಿಸಿದ ವರುಣನ ಮಿಲನದ ಸಂಭ್ರಮವ ನೋಡಿ ನನ್ನೆಡೆಗೆ ನಗು ಚೆಲ್ಲುತ್ತಿದ್ದವನು ಆ ನೇಗಿಲಯೋಗಿಯೇ. ಗಟ್ಟಿಗಿತ್ತಿಯಂತೆ ಮೈ ಚಾಚಿ ನಿಂತಾಗ ನನ್ನ ಸೆರಗಲ್ಲಿ ಆಡಿ ನಲಿದ ಪುಟ್ಟ ಮಕ್ಕಳೆಲ್ಲ ಖುಷಿಪಟ್ಟದ್ದು ನಾ ಶಾಂತೆಯಾಗಿ, ಮೌನವಾದಾಗಲೇ. ಅಗೋ, […]
ಕೆರೆಯ ಕರೆ
Month : January-2018 Episode : Author : ಸಹನಾ ಪುಂಡಿಕಾಯಿ