ಉಗಾದಿ ಕಳೆದು ಭರಣಿ ಹೋದರು
ಉದುರಲಿಲ್ಲ ನಾಕು ಹನಿ
ಊರಾಗಿನ ಕೆರೆ ಬಾಯಿಕಳೆದು ಕುಂತರು
ತಾರಸಿ ಆಗ್ಯಾವು ಹುಲ್ಲು ಮನಿ
ಇನ್ನೂ ಹೆಚ್ಚಾಗ್ಯಾವೂ ಆರ್ದ್ರೆ ಮಳಿ ಹಬ್ಬದ ಕುರಿ ಬಲಿ.
ಹಳ್ಳಿ ಕೇರಿಗಳೆಲ್ಲ ಆ ಪಕ್ಷ ಈ ಪಕ್ಷ ಆಗಿ ಒಡೆದಾವೂ
ಕೆರೆ ಕೊಡಿ ಮಾತ್ರ ಒಡಿಲಿಲ್ಲ
ಮಾಯಗಾರ ಮಳಿರಾಯ ಉದ್ರಸಾನ
ಹೊಟ್ಟೆಕಿಚ್ಚಿಗೆ ನಾಕು ಹನಿ
ಕೇಳೋರ್ಯಾರು ನನ್ನ ದನಿ.
ಊರ ಓಣಿಗಳೆಲ್ಲ ಕಾಂಕ್ರೀಟ್ ಹೊದ್ದಾವು
ಉದ್ಯೋಗ ಖಾತ್ರ್ಯಾಗ ನನ್ನ ಮೈ ಪರಚಿ
ಕೇಕೆ ಹಾಕ್ಯಾನೋ ಗುತ್ತೆದಾರ…
ನಾಲ್ಕು ಹನಿ ಮಳೆ ಬರದೆ ನನ್ನೊಡಲು ತುಂಬೀತೇ
ಮಳೆ ಕರೆಸಿ ಕೆರೆಯವ್ವನ ಉಸಿರಾ ಉಳಿಸಿರೋ…
ಮೈದುಂಬಲಿ ಕೆರಿಯಮ್ಮ
ಬಾಗಿನ ನೀಡಾನ
ಕೆರೆ ಜಾತ್ರೆ ಮಾಡಿರೋ ಹನಿ ಹನಿಯ ಸೇರಿಸಿ.