
ಕರಮಚಂದನಲ್ಲಿ ನಾನು ವಕೀಲಗಿರಿ ಮಾಡಲು ಸೇರಿಕೊಂಡ ಮೊದಲ ವರ್ಷದಲ್ಲೇ ನಡೆದ ಒಂದು ಪ್ರಕರಣ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಅಡ್ಡಂಡ ಕರಮಚಂದನ ಪತ್ತೆದಾರಿಕೆಯ ಕೌಶಲಕ್ಕೆ ಅದೊಂದು ಅಪೂರ್ವ ಉದಾಹರಣೆ ಎಂಬುದು ನನ್ನ ಭಾವನೆ. ವಕೀಲಗಿರಿಯ ಜೊತೆಗೆ ಪತ್ತೆದಾರಿಕೆ ಕರಮಚಂದನ ಹವ್ಯಾಸ. ಅದು ಬಹುಶಃ ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಆರಂಭದ ದಿನಗಳಲ್ಲಿ ನಡೆದ ಪ್ರಕರಣ. ಒಂದು ದಿನ ಸಂಜೆ ಐದರ ವೇಳೆಗೆ ಸುಮಾರು ಮೂವತ್ತರ ಹರೆಯದ ಮಹಿಳೆಯೊಬ್ಬಳು ನಮ್ಮನ್ನು ವಿಚಾರಿಸಿಕೊಂಡು ಆಗಮಿಸಿದಳು. ನಾಪೋಕ್ಲು ಸಮೀಪದ […]