
text ರೂಪದಲ್ಲಿ ಇಲ್ಲಿ ಓದಬಹುದು:
Month : February-2023 Episode : Author : ಎನ್. ರಂಗನಾಥಶರ್ಮಾ
Month : February-2023 Episode : Author : ಸಿ.ಎ. ವಿಲಾಸ ಹುದ್ದಾರ
“ಬೇಕುಗಳು” ನಮ್ಮ ಮನಃಶಾಂತಿಯನ್ನು ಭಂಗಮಾಡುವ ಸಾಮರ್ಥ್ಯ ಹೊಂದಿವೆ. ಇಂತಹ ಬೇಕುಗಳು ಫಲಿಸದಿದ್ದರೂ ನಾವು ನಮ್ಮ ಮನಸ್ಸಿನ ಸ್ತಿಮಿತ ಕಳೆದುಕೊಳ್ಳಬಾರದು. ನಾವು ಯಾವುದೇ “ಬೇಕುಗಳು” ಗುಲಾಮನಾಗದೇ ಅವುಗಳನ್ನು ನಮ್ಮ ಗುಲಾಮನಾಗಿ ಮಾಡಿಕೊಳ್ಳುವ ಮನಃಸ್ಥಿತಿ ತಲಪಲು ಪ್ರಯತ್ನಿಸಬೇಕು. “ಬೇಕುಗಳು” ಬೇಕು; ಆದರೆ ಅವು ನಮ್ಮ ಮೇಲೆ ಸವಾರಿ ಮಾಡಲು ಅನುವು ಮಾಡಿಕೊಡಬಾರದು. ಹೌದೋ ಅಲ್ಲವೋ? ನೀವು ಪ್ರತಿದಿನ ಮುಂಜಾನೆ ವಾಕಿಂಗ್ ಹೋಗುವದು ನೀವು ಆರೋಗ್ಯದಿಂದ ಇರಲು. ಅಲ್ಲದೇ ನಿಮ್ಮ ಸ್ನೇಹಿತರ ಜೊತೆ ಸ್ವಲ್ಪ ಸಮಯ ಕಳೆದು, ಹರಟೆ ಹೊಡೆದು ಸಾಧ್ಯವಾದರೆ […]
Month : February-2023 Episode : ಮನೆ-ಮಾನಿನಿ Author : ಆರತಿ ಪಟ್ರಮೆ
ಸಮಾಜದ ಭಯಕ್ಕೋ, ಪೋಷಕರ ಒತ್ತಡಕ್ಕೋ ‘ಈಗ ನಾವು ಚೆನ್ನಾಗಿದ್ದೇವೆ’ ಎಂಬAತೆ ಬಿಂಬಿಸಿದರೂ ಅದು ಕೇವಲ ಮುಖವಾಡ ಮಾತ್ರವೇ ಆಗಿರುತ್ತದೆ. ಯಾಕೆಂದರೆ ಓರ್ವ ವ್ಯಕ್ತಿ ಯಾರನ್ನಾದರೂ ಒಮ್ಮೆ ನೋಯಿಸಿದ್ದಲ್ಲಿ ಅದು ಅವರ ಮನದಲ್ಲಿ ಸದಾ ಉಳಿದೇ ಇರುತ್ತದೆ, ಮುಖದ ಮೇಲೆ ಅದೆಷ್ಟು ನಗುವಿದ್ದರೂ. ಹರಿದ ಬಟ್ಟೆಯನ್ನು ಮತ್ತೆ ಒಂದಾಗಿಸಿ ಹೊಲಿದಲ್ಲಿ ಸೂಜಿಯ, ನೂಲಿನ ಗುರುತಿದ್ದಂತೆ ಮನದೊಳಗೂ ಅಂಥದ್ದೊಂದು ತೇಪೆ ಉಳಿದುಕೊಂಡಿರುತ್ತದೆ. ಅಷ್ಟಕ್ಕೂ ಪ್ರತಿಯೊಬ್ಬರೂ ತನ್ನ ಬದುಕಿನಲ್ಲಿ ಬಯಸುವುದೇನನ್ನು? ಇಡಿಯ ಜಗತ್ತಿನಲ್ಲಿ ನಮ್ಮನ್ನು ಅತ್ಯಂತ ನೋಯಿಸುವುದು ನಾವು ಅತಿಹೆಚ್ಚು ಪ್ರೀತಿಸುವವರಂತೆ! […]
Month : February-2023 Episode : Author : ಸುಭಾಷಿಣಿ ಹಿರಣ್ಯ
ಒಂದು ಮುಂಜಾನೆ ತುಂಟಿಗೆ ಚಪಾತಿ ಹಾಕೋಣ ಅಂತ ಹೊರ ಬಂದ್ರೆ ನಾಯಿ ಕಾಣಿಸದು. ಪಕ್ಕದ ಮನೆ ಹೇಮಕ್ಕ ಅಂದಿದ್ದು ನೆನಪಾಯ್ತು, “ದಿನಾ ಬೆಳಗ್ಗೆ ನಮ್ಮ ಮನೆಗೆ ಬರುತ್ತೆ, ನಾನೂ ಬಿಸ್ಕತ್ ಕೊಡುವುದಿದೆ..” ಹೆಚ್ಚೇನೂ ಚಿಂತಿಸದೆ ನನ್ನ ಇನ್ನಿತರ ಮನೆಕಲಸಗಳ ಬಗ್ಗೆ ಗಮನ ಹರಿಸಿದೆ. ಮಧ್ಯಾಹ್ನ ಆದ್ರೂ ತುಂಟಿ ನಾಪತ್ತೆ. “ನಾಯಿ ಎಲ್ಹೋಯ್ತು? ಸ್ವಲ್ಪ ನೋಡ್ತೀರಾ…” ಎಂದು ನಮ್ಮವರ ಮುಂದೆ ಒದರಿದ್ದು ಗೋರ್ಕಲ್ಲ ಮೇಲೆ ನೀರೆರೆದ ಹಾಗಾಯ್ತು. “ಅದು ನಾಯಿಯಲ್ಲವೇ, ಎಲ್ಲೋ ತಿರುಗಾಟಕ್ಕೆ ಹೋಗಿರಬೇಕು.” ಒಂದು ನಾಯಿ ಇರಲೇ […]
Month : February-2023 Episode : Author :
ಸರ್ ಎಲ್ಲಕ್ಕಿಂತಲೂ ಗಟ್ಟಿ ವಿಷಯ ಅಂದ್ರ ಜಂಬುಕೇಸ ತಾತ ನಿಮ್ಮ ಧರ್ಮ ಭಾಳ ಚಂದ ಐತಲೇ ಶಂಕ್ರ ಮನುಷ್ಯತ್ವ ಅಂದ್ರ ಅಲ್ಲಿ ಅದ ನೋಡು ಎಂದು ಹೊಗುಳತಾ ಇದ್ದ ಅಂದ. ಫಾದರ್ಗೆ ಇನ್ನೊಂದು ಕಾಫಿ ಬೇಕೆನಿಸಿತು, ಕಾಫಿ ಕುಡಿಯುತ್ತಲೇ ಜಂಬುಕೇಶನೆAಬ ಪಾತ್ರದ ಬಗ್ಗೆ ಕೇಳಲು ಕಿವಿಯಾಗಹತ್ತಿದರು. ಫಾದರ್ ಕ್ಷಣ ಮೌನವಾದರು, ಏನು ಮಾತಾಡಬೇಕೆಂಬುವದು ತಿಳಿಯದಾಯಿತು. ಯಾವುದೋ ಸಂತಸದ ಗಳಿಗೆಯನು ಆಸ್ವಾದಿಸಲು ಕೆಲಹೊತ್ತು ಮೌನ ಬೇಕೆನಿಸಿತು, ಫಿಲಿಪ್, ನೀನೇ ಹೇಳು ಏನಾಯಿತು? ಜಂಬುಕೇಶನ ಪ್ರಸಂಗ? – ಎಂದು ಕೇಳಲು […]
Month : February-2023 Episode : Author : ಅಣಕು ರಾಮನಾಥ್
ಮಡಿಟೂರ್ ಮುಗಿದ ಹದಿನೈದು ದಿನಗಳಾದರೂ ಒಬ್ಬ ದೂರುದಾರನೂ ಪತ್ತೆ ಇರಲಿಲ್ಲ! ಏತನ್ಮಧ್ಯೆ ಕಿಟ್ಟಂಭಟ್ಟ ತನ್ನ ಗೈಡಾವತಾರವನ್ನು cacophonic ಕಂಠದಲ್ಲಿ ಬಿತ್ತರಿಸಿದ್ದೇ ಬಿತ್ತರಿಸಿದ್ದು. ‘Innocent till proved guilty’ ಆಧಾರದ ಮೇಲೆ ನಾವೂ ಕಿಟ್ಟಂಭಟ್ಟನಿಗೆ ‘Benefit of doubt’ ನೀಡಿ ಸುಮ್ಮನಾದೆವು. ಬೀಸುವ ಕತ್ತಿ ತಲೆಯ ಮೇಲೆಯೇ ಇತ್ತೆಂದು ತಿಳಿದದ್ದು ನಮಗೆ ಟೂರ್ ಮುಗಿದ ನಂತರದ ಹದಿನೆಂಟನೆಯ ದಿನ. ಮರಳುಗಾಡಿನಲ್ಲಿ ಭಾರ ಹೊತ್ತು ಸಾಗಿ, ಡುಬ್ಬದಲ್ಲಿರುವ ನೀರೂ ಖಾಲಿಯಾಗುವ ಮಟ್ಟಕ್ಕೆ ಬಸವಳಿದ ಒಂಟೆಯ ನಡೆಯನ್ನು ಹೋಲುವಂತೆ ತಟ್ಟಾಡುತ್ತಾ ಹದಿನೆಂಟರ […]
Month : February-2023 Episode : Author : ಡಿ.ಎಂ. ಘನಶ್ಯಾಮ
ನೋವು, ದುಗುಡ, ಚಿಂತೆ, ಬಡತನಗಳ ನಡುವೆಯೂ ಮುನಿಸ್ವಾಮಿ ಅವರು ಕಲೆಯ ನವಿಲು ಕುಣಿಸುತ್ತಾರೆ. ಸೃಷ್ಟಿಗೆ ಮೂಲವಾದ `ಜಾಂಬವಂತನ ಕಥೆ’, ನೂರೆಂಟು ಜಾತಿಗಳು ಹುಟ್ಟಿದ `ಅರಂಜ್ಯೋತಮ್ಮನ ಕಥೆ’ ಹೇಳುತ್ತಾರೆ, ನಗುತ್ತಾರೆ, ನಗಿಸುತ್ತಾರೆ. ಮುನಿಸ್ವಾಮಿ ಅವರನ್ನು ಸಾಕಿ, ಬೆಳೆಸಿ, ಮದುವೆ ಮಾಡಿಸಿದವರು ಅಜ್ಜಿ ದೊಡ್ಡರಂಗಮ್ಮ. ತಳಸಮುದಾಯಗಳ ರೀತಿ-ರಿವಾಜು, ಕಟ್ಟಲೆಗಳ ಮೌಖಿಕ ದಾಖಲಾತಿಯಾಗಿರುವ `ದಕ್ಕಲ ಜಾಂಬವ ಪುರಾಣ’ ಕಲಿಸಿದವರೂ ಅವರೇ. ಅಜ್ಜಿಯನ್ನು ಅತ್ಯಂತ ಪೀತಿಯಿಂದ ನೆನಪಿಸಿಕೊಳ್ಳುವ ಮುನಿಸ್ವಾಮಿ ದೊಡ್ಡರಂಗಮ್ಮ ಅವರ ಹೆಸರನ್ನು ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರದ ಮುತ್ಸಂದ್ರ ಬಳಿ ನಗರಸಭೆ […]
Month : February-2023 Episode : Author : ಎನ್. ರಂಗನಾಥಶರ್ಮಾ
‘ಚಿಂತಾ’-’ಚಿಂತನೆ’ಗಳೆರಡೂ ಮನೋವ್ಯಾಪಾರಗಳೇ ಆದರೂ ಚಿಂತೆಯಿಂದ ಚಿಂತನವು ತೀರ ವಿಭಿನ್ನವಾದದ್ದು. ಚಿಂತನವು ಅದರ ಯೋಗ್ಯವಾದ, ಪೂಜ್ಯವಾದ, ಶಾಸ್ತ್ರೀಯವಾದ ವಿಷಯವನ್ನು ಕುರಿತದ್ದು. ಇದರಲ್ಲಿ ನೋವು, ವ್ಯಥೆ, ಶೋಕ ಯಾವುದೂ ಇಲ್ಲ. ಸ್ವಸಂತೋಷದಿಂದಲೇ ಮನಸ್ಸು ಚಿಂತನದಲ್ಲಿ ಪ್ರವೃತ್ತವಾಗುತ್ತದೆ. ಈ ಚಿಂತನದಲ್ಲಿಯೂ ಎರಡು ಬಗೆಯುಂಟು. ನಿರ್ಣೀತವಾದ ವಿಷಯವನ್ನೇ ಕುರಿತು ಅದರ ದೃಢತೆಗಾಗಿ ತನ್ನ ಸಂತೃಪ್ತಿಗಾಗಿ ಮತ್ತೆ ಮತ್ತೆ ರ್ಯಾಲೋಚಿಸುವುದು ಒಂದು ಬಗೆ. ಈ ಪ್ರಕಾರವಾದ ಚಿಂತನವನ್ನು ಮನನವೆನ್ನಬಹುದು. ಹಂಸಾಃ ಶ್ವೇತೀಕೃತಾ ಯೇನ ಶುಕಾಶ್ಚ ಹರಿತೀಕೃತಾಃ | ಮಯೂರಾಶ್ಚಿತ್ರಿತಾ ಯೇನ ಸ ತೇ ವೃತ್ತಿಂ […]
Month : February-2023 Episode : Author : ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು
ಚಿಂತನೆಯ ವಿಷಯ ಭಗವಂತ ಅಲ್ಲವೆ? ಭಗವಂತನೆAದರೆ ಏನು, ಯಾರು? ಅರಿಯುವುದು ಅಷ್ಟೇ ಅವಶ್ಯ. ಈ ಹೂವಿನಷ್ಟು ಸ್ಪಷ್ಟವಾಗಿ ದೇವ ಕಂಡಿದ್ದರೆ ಚಿಂತನೆ ಸುಲಭವಾಗುತ್ತಿತ್ತು. ಆದರೆ ಹಾಗಿಲ್ಲ. ಆತ ಏನು, ಎಲ್ಲಿ, ಎಂಥವ – ಎಂಬುದನರಿಯದಿರೆ ಚಿಂತನೆ ಹೇಗೆ ಸಾಧ್ಯ ಹೇಳಿ? ಅಜ್ಞಾತ ವಸ್ತುವನ್ನು ಪ್ರೀತಿಸುವುದು ಹೇಗೆ? ಅದರ ನೆನಹಿನಲ್ಲಿ ನಿಮಗ್ನತೆ ಹೊಂದುವುದೆAತು? ನಮ್ಮಲ್ಲಿ ಅನೇಕರು ಪೂಜಿಸುತ್ತೇವೆ; ಧ್ಯಾನಿಸುತ್ತೇವೆ; ಜಪಿಸುತ್ತೇವೆ; ಜೀವನದ ತುಂಬ! ಆದರೂ ಚಿಂತನೆಯಾಗದು! ತತ್ಪರಾವಸ್ಥೆ ಅಳವಡದು. ಕಾರಣ ಸ್ಪಷ್ಟ. ನಮಗೆ ದೇವವಿಷಯದಲ್ಲಿ ಸ್ಪಷ್ಟತೆಯಿಲ್ಲ. ಹೀಗಾಗಿ, ಬಹುತೇಕ […]
Month : February-2023 Episode : Author : ಎಸ್.ಆರ್. ರಾಮಸ್ವಾಮಿ
ಕಳೆದ ಐದೂವರೆ ದಶಕಗಳಿಂದ ವಿಜಾಪುರದ ಜ್ಞಾನಯೋಗಾಶ್ರಮವನ್ನು ವಾಸ್ತವ್ಯವನ್ನಾಗಿಸಿಕೊಂಡಿದ್ದ ಸಿದ್ಧೇಶ್ವರಸ್ವಾಮಿಗಳು ತಮ್ಮ ಅಷ್ಟೂ ಸಮಯವನ್ನು ಧ್ಯಾನ, ಅಧ್ಯಯನ, ಚಿಂತನೆ, ಪ್ರವಚನಗಳಿಗೆ ವಿನಿಯೋಗಿಸುತ್ತಿದ್ದರು. ಸರಳಜೀವಿಯಾಗಿದ್ದ ಸ್ವಾಮಿಗಳು ಎಂದೂ ಯಾರಿಂದಲೂ ಏನನ್ನೂ ಸ್ವೀಕರಿಸದೆ ಸತತವೂ ಭಗವದ್ಭಾವದಲ್ಲಿ ಆತ್ಮಾರಾಮರಾಗಿರುತ್ತಿದ್ದುದು ಜನಜನಿತವೇ ಆಗಿತ್ತು. ಅವರಿಗಿದ್ದ ‘ಆಸ್ತಿ’ಯೆಂದರೆ ಅವರು ಸತತ ಅಧ್ಯಯನ-ಚಿಂತನೆಗಳಿAದ ಗಳಿಸಿಕೊಂಡಿದ್ದ ಜ್ಞಾನರಾಶಿಯಷ್ಟೆ. “ಇಂಗ್ಲಿಷ್ ಬಾರದ ನಾನು ಹೆಚ್ಚು ಓದಿಕೊಳ್ಳಲಾಗಲಿಲ್ಲ. ನೀನಾದರೋ ಪ್ರತಿಭಾಶಾಲಿ. ಧಾರ್ಮಿಕತೆಯ ಸಂದೇಶವನ್ನು ನೀನು ಸಾಗರಗಳಾಚೆಗೂ ತಲಪಿಸಬೇಕು” ಎಂದಿದ್ದ ಗುರುಗಳಾದ ಶ್ರೀ ಮಲ್ಲಿಕಾರ್ಜುನಸ್ವಾಮಿಗಳ ಆದೇಶವನ್ನು ಸಿದ್ಧೇಶ್ವರಸ್ವಾಮಿಗಳು ಅನುಪಮವಾಗಿ ಈಡೇರಿಸಿದರು. ಅವರನ್ನು ‘ಶತಮಾನದ […]