
ತುಂಬಾ ಗಂಭೀರ ಹಂತ ತಲಪಿದ ಹೃದಯದ ಖಾಯಿಲೆಯನ್ನೂ ಶಸ್ತ್ರಚಿಕಿತ್ಸೆಯಿಲ್ಲದೆ ಗುಣಪಡಿಸಬಹುದೆಂಬುದು ಹಲವರಿಗೆ ತಿಳಿದಿಲ್ಲ. ಕೆಲವರು ಕೇಳಿರಬಹುದಾದರೂ ನಂಬುವುದಿಲ್ಲ. ಆಯುರ್ವೇದದ ಮೂಲಕ ಹೃದಯದ ಖಾಯಿಲೆ ಗುಣವಾದೀತೆಂಬುದರ ಬಗ್ಗೆ ಅನೇಕರಿಗೆ ನಂಬಿಕೆ ಇರದು. ಯಾರು ನಂಬಲಿ ಬಿಡಲಿ, ಆಯುರ್ವೇದಕ್ಕೆ ಇಂತಹ ಸಾಮರ್ಥ್ಯವಿರುವುದನ್ನು ಅಲ್ಲಗಳೆಯಲಾಗದು. ಹೃದಯ ಶರೀರದ ಬಹುಮುಖ್ಯ ಅಂಗ. ಎಲ್ಲವನ್ನೂ ಅರ್ಥೈಸಿಕೊಳ್ಳುವ, ವಿಶ್ಲೇಷಿಸುವ, ಬೇರೆ ಬೇರೆ ಕಾರ್ಯಗಳನ್ನು ನಿರ್ದೇಶಿಸುವ ಗುರುತರ ಹೊಣೆಗಾರಿಕೆಯನ್ನು ಮೆದುಳು ನಿರ್ವಹಿಸುವುದು ದಿಟವಾದರೂ ಹೃದಯ ನಿಂತುಹೋದರೆ ಮೆದುಳೂ ಕೆಲಸ ಮಾಡಲಾರದಾಗುತ್ತದೆ. ಹೃದಯ ತುಂಬ ಸೂಕ್ಷ್ಮ ಕೂಡ. ಅದಕ್ಕೆ […]