ಈ ಕಥಾಮಾಲಿಕೆ ಕುರಿತು ಗುಣಾಢ್ಯನಿಂದ ಪೈಶಾಚೀಭಾಷೆಯಲ್ಲಿ ವಿರಚಿತವಾದ ಬೃಹತ್ಕಥೆಯನ್ನು ಸೋಮದೇವನು ಕಥಾಸರಿತ್ಸಾಗರವೆಂಬ ಹೆಸರಿನಲ್ಲಿ ಸಂಸ್ಕೃತಕ್ಕೆ ತಂದನು. ರಾಮಾಯಣ ಮತ್ತು ಮಹಾಭಾರತಗಳ ಅನಂತರ ಪ್ರಾಚೀನಭಾರತೀಯ ಸಾಹಿತ್ಯಕ್ಕೆಲ್ಲ ಮೂಲ ಆಕರ ಇದುವೇ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಜಗತ್ಪ್ರಸಿದ್ಧವಾಗಿರುವ ಬೇತಾಳಕಥೆಗಳ ಮೂಲವೂ ಇದೇ. ವಸ್ತುತಃ ವೇತಾಲಪಂಚವಿಂಶತಿಕಾ ಎಂಬ ಹೆಸರೇ ಸೂಚಿಸುವಂತೆ ಇಲ್ಲಿರುವುದು ಇಪ್ಪತ್ತೈದು ಕಥೆಗಳು ಮಾತ್ರ. ಆದರೆ ಕಾಲಕ್ರಮದಲ್ಲಿ ಅದಕ್ಕೆ ಬೇರೆ ಬೇರೆ ಕಥೆಗಳೂ ಸೇರಿಕೊಂಡು, ಬೇರೆ ಬೇರೆ ಭಾಷೆಗಳ ಸಾಹಿತ್ಯದಲ್ಲೂ ಈ ಪರಂಪರೆ ಮುಂದುವರಿದು, ಇಂದು ಅದೆಷ್ಟೋ ಕಥೆಗಳು ಬೇತಾಳಕಥೆಗಳ […]
ವೇತಾಲಪಂಚವಿಂಶತಿಕಾ
Month : October-2023 Episode : ಬೇತಾಳ ಕಥೆಗಳು Author :