ಮಕ್ಕಳಲ್ಲಿ ಇಂತಹ ಬುದ್ಧಿ ಕಾಣಿಸುವಾಗ ಯಾಕೆ ಅರಮನೆಯಲ್ಲಿ ಯಾರೂ ತಿದ್ದುವುದಕ್ಕೆ ಮುಂದಾಗಲಿಲ್ಲವೋ ನನಗೆ ಅರ್ಥವಾಗಲಿಲ್ಲ. ತುಂಟತನವೇ ಆದರೂ ಬಲಿತ ಮೇಲೆ ಅದನ್ನು ತಿದ್ದಲಾದೀತೇ? ನಮ್ಮಂತಹವರ ಮಕ್ಕಳಾದರೆ ದುರ್ಬುದ್ಧಿ ಮಾಡಿದಾಗಲೇ ಎರಡು ಏಟು ಬಾರಿಸಿ, ಹೀಗೆ ಮಾಡಬಾರದು ಅನ್ನುವ ಪಾಠ ಕಲಿಸುತ್ತಿದ್ದೆವು. ಆದರೆ ಅರಮನೆಯ ರಾಜಕುಮಾರರಿಗೆ ಹೀಗೆ ಮಾಡುವುದಿರಲಿ, ಹೇಳುವುದೂ ಅಪಾಯವೇ. ಆದರೆ ನನ್ನ ಮಗ ವಿದುರ ಮಾತ್ರ ಕಾಲಕಾಲಕ್ಕೆ ಕೌರವರ ತಪ್ಪುಗಳನ್ನು ಎತ್ತಿ ಆಡುತ್ತಿದ್ದ. ಅದರಿಂದ ಕೌರವರಿಗೆ ಅವನನ್ನು ಕಂಡರಾಗದು ಎನ್ನುವಂತಾಯಿತು. ಆಚಾರ್ಯ ಭೀಷ್ಮರು ಇದನ್ನೆಲ್ಲ ಹುಡುಗಾಟ […]
ಅನಾಮಿಕಾ
Month : March-2024 Episode : ಭಾಗ - 3 Author : ರಾಧಾಕೃಷ್ಣ ಕಲ್ಚಾರ್