
“ಅಯ್ಯೋ ನೀನೇಕೆ ಭಯಪಡುತ್ತೀಯೆ? ಆಚಾರ್ಯರೂ, ವಿದುರ ಮಂತ್ರಿಗಳೂ ಇರುವಾಗ ಅಂತಹುದೆಲ್ಲ ನಡೆಯಲಾರದು. ಆದರೂ ನಾವು ಇದನ್ನು ಆಚಾರ್ಯರ ಅವಗಾಹನೆಗೆ ತರುವುದು ಒಳ್ಳೆಯದೇನೋ ಅನಿಸುತ್ತಿದೆ. ಅವರು ಏನಾದರೂ ಮಾಡಿಯಾರು. ಕನಿಷ್ಠ ಪಕ್ಷ ನಾವು ಸಾಧ್ಯವಿರುವುದನ್ನು ಮಾಡಿದ ಸಮಾಧಾನವಾದರೂ ನಮಗಿರುತ್ತದಲ್ಲ? ನಾಳೆ ನೀನು ಆಚಾರ್ಯರ ಭವನಕ್ಕೆ ಹೋಗು. ಅಲ್ಲಿ ಅವರನ್ನು ಏಕಾಂತದಲ್ಲಿ ಕಂಡು ಇದನ್ನು ನಿವೇದಿಸಿಕೋ. ನೀನು ಏನು ಹೇಳಿದ್ದಿ ಎನ್ನುವುದು ಉಳಿದ ಯಾರಿಗೂ ತಿಳಿಯದಿದ್ದರಾಯಿತು ಅಷ್ಟೆ” ಚಾರು ಹೀಗೊಂದು ದಾರಿ ತೋರಿಸಿದಳು. ಚಿತ್ರಕ ವಾರಣಾವತದ ಚಿತ್ರಗಾರಿಕೆಯ ಕೆಲಸ ಪೂರೈಸಿ […]