
`ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು, ಯಾವುದನ್ನೂ ಲೆಕ್ಕಿಸದೆ ವಿಶ್ವದ ರಹಸ್ಯತಮ ಸತ್ಯಗಳನ್ನು ಭೇದಿಸಿ ಸಾಧ್ಯವಾದರೆ ಕಡಲಿನ ಆಳಕ್ಕಾದರೂ ಹೋಗಿ ಮೃತ್ಯುವಿನೊಂದಿಗೆ ಹೋರಾಡಿ ಗುರಿಯನ್ನು ಸಾಧಿಸಬಲ್ಲ ಅದಮ್ಯ ಪ್ರಚಂಡ ಇಚ್ಛಾಶಕ್ತಿ.’ – ಸ್ವಾಮಿ ವಿವೇಕಾನಂದ
Month : January-2016 Episode : Author : ಚಕ್ರವರ್ತಿ ಸೂಲಿಬೆಲೆ
Month : December-2015 Episode : Author : ಲೆ|| ಜ|| ಎಸ್.ಸಿ. ಸರದೇಶಪಾಂಡೆ
ಗತಶತಮಾನದಲ್ಲಾದ ಮಹಾಯುದ್ಧಗಳಂತೆ ಈಗಿನ ದಿನಗಳಲ್ಲಿ, ಈಗಿನ ಜಗದ್ವ್ಯಾಪಾರದಲ್ಲಿ ಆಗುವುದು ಅಸಾಧ್ಯ. ಹಾಗೇನಾದರೂ ಆಗುವುದನ್ನು ತಡೆಯಲೆಂದೇ ಆಧುನೀಕರಣಗೊಂಡ ಶಕ್ತಿಯುತ, ಸದಾ ಸನ್ನದ್ಧ, ಅಣ್ವಸ್ತ್ರಸಹಿತವಾದ ಸಶಸ್ತ್ರಬಲಗಳ ಸಂಘಟನೆ ಮತ್ತು ಅವುಗಳನ್ನು ಉಪಯೋಗಿಸುವ ಯುಕ್ತಿ, ತಂತ್ರ, ವಿಧಾನಗಳ, ಸ್ಪಷ್ಟೀಕರಣದ ಪ್ರದರ್ಶನ ಇವು ನಮ್ಮ ಎದುರಾಳಿಗಳಿಗೆ ಮತ್ತು ಜಗತ್ತಿಗೆ ಮನದಟ್ಟಾಗುವಂತಿರಬೇಕು. ಅಂತಹ ಯುದ್ಧಸನ್ನದ್ಧತೆ ನಮ್ಮಲ್ಲಿದೆಯೆ? – ಹಿರಿಯ ಲೇಖಕ, ಸೇನಾಪಡೆಯ ನಿವೃತ್ತ ಅಧಿಕಾರಿ ಲೆ|| ಜ|| ಎಸ್.ಸಿ. ಸರದೇಶಪಾಂಡೆಯವರು `ಉತ್ಥಾನ’ಕ್ಕಾಗಿ ಬರೆದ ಒಂದು ಮಾಹಿತಿಪೂರ್ಣ ವಿಶೇಷ ಲೇಖನ ಇಲ್ಲಿದೆ….
Month : November-2015 Episode : Author : ಅನಿಲ್ಕುಮಾರ್ ಮೊಳಹಳ್ಳಿ
ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ೧೯೧೫ರಲ್ಲಿ ಹುಟ್ಟಿಕೊಂಡ ‘ಕನ್ನಡ ಸಾಹಿತ್ಯ ಪರಿಷತ್’ಗೆ ಇದೀಗ ನೂರರ ಸಂಭ್ರಮ. ಇದು ನುಡಿಗುಡಿಯ ಕುರಿತು ಒಂದು ಸಾಂದರ್ಭಿಕ ಲೇಖನ. “ಮನುಷ್ಯನಿಗೆ ಆಯಾಸ ಅನಿವಾರ್ಯ. ಉತ್ಕೃಷ್ಟ ಸಂಸ್ಥೆಗಾದರೊ ದಣಿವೆಂಬುದೇ ಇಲ್ಲ, ಇರಕೂಡದು. ಸಂಕಲ್ಪಗಳು ಸಿದ್ಧಿಸಿದಷ್ಟೂ ಹೊಸ ಹೊಸ ಸಂಕಲ್ಪಗಳ ಉತ್ಪತ್ತಿ, ಕಾರ್ಯಕ್ಷೇತ್ರ ಇನ್ನೊಂದು ಮತ್ತೊಂದು ಮಗದೊಂದು ಎಂಬ ಕ್ರಮದ ವ್ಯಾಪ್ತಿ ವಿಸ್ತರಣೆ, ಯೋಜನೆಯ ಮೇಲೆ ಪುನರ್ ಯೋಜನೆ – ಹೀಗೆ ಅದು ಉಲ್ಲಾಸದಿಂದ ವರ್ಧಿಸುತ್ತದೆ, […]
Month : November-2015 Episode : Author : ಲೆ||ಜ|| ವಿ.ಎಂ. ಪಾಟೀಲ್ (ನಿವೃತ್ತ)
೧೯೫೮ರಿಂದ ೧೯೯೬ರವರೆಗೆ ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ, ಸೇನೆಯ ಸದರ್ನ್ ಕಮಾಂಡ್ ಪುಣೆ ವಿಭಾಗದ `ಚೀಫ್ ಆಫ್ ಸ್ಟಾಫ್’ ಆಗಿ ಸೇವೆಯಿಂದ ನಿವೃತ್ತಿ ಹೊಂದಿದರು. ಈಗ ಅವರು ಎರಡು ದಶಕಗಳಿಂದ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಮಾಜಿ ಸೈನಿಕರ ಸಂಘಟನೆ – `ಅಖಿಲ ಭಾರತೀಯ ಪೂರ್ವಸೈನಿಕ್ ಸೇವಾ ಪರಿಷದ್’ನ ಅಧ್ಯಕ್ಷರಾಗಿ ಸೇವಾಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
Month : September-2015 Episode : Author : ಸಂತೋಷ್ ಜಿ.ಆರ್.
“ಶ್ರೀಕೃಷ್ಣನು ರುಚಿಯಾದ ಭಕ್ಷ್ಯಭೋಜ್ಯ ತಯಾರಿಸಿ ಕಾದುಕೊಂಡಿದ್ದ ದುರ್ಯೋಧನನ ಮನೆಗೆ ಊಟಕ್ಕೆ ಹೋಗದೆ ಬಡವನಾದ ವಿದುರನ ಮನೆಗೆ ಹೋಗಿ ಕದನ್ನವನ್ನು ತಿಂದದ್ದು ಏಕೆ? ಶ್ರೀಕೃಷ್ಣನಿಗೆ ಅದೇ ಮಾನಸಿಕ ಸುಖ ನೀಡಿತು. ರಾಣಾ ಪ್ರತಾಪನಿಗೆ ದಾಸ್ಯತೆಯ ಸುಖಭೋಗಕ್ಕಿಂತ ಸ್ವಾತಂತ್ರ್ಯದ ಒಣರೊಟ್ಟಿ, ಹುಲ್ಲು ಹಾಸಿಗೆಯೇ ಸುಖ-ಸಮಾಧಾನ ನೀಡಿತು. ಧ್ಯೇಯವಾದಿಗಳಿಗೆ ಧ್ಯೇಯಪ್ರಾಪ್ತಿಯೂ, ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ವಾತಂತ್ರ್ಯದ ಸಾಧನೆಯೂ ಅಸೀಮ ಆನಂದ ನೀಡುತ್ತವೆ. ಅವರಿಗೆ ಆ ಮಾರ್ಗದಲ್ಲಿ ಸಿಗುವ ಕಷ್ಟಸಂಕಟಗಳೇ ಆನಂದ ತಂದುಕೊಡುತ್ತವೆ. ಹೀಗೆ ಪ್ರತಿಯೊಬ್ಬನ ಬದುಕಿಗೂ ಒಂದೊಂದು ಗುರಿ ಇರಬಹುದು. ಅವರೆಲ್ಲರೂ […]
Month : September-2015 Episode : Author : ಎಸ್.ಆರ್. ರಾಮಸ್ವಾಮಿ
Month : August-2015 Episode : Author : ಬೇಳೂರು ಸುದರ್ಶನ
೨೦೧೫ರ ಜೂನ್ ೨೮. ಅಂತಾರಾಷ್ಟ್ರೀಯ ವ್ಯೋಮಕೇಂದ್ರಕ್ಕೆ ಸರಕು ತೆಗೆದುಕೊಂಡು ಹೊರಟಿದ್ದ ಸ್ಪೇಸ್ಎಕ್ಸ್ ಸಂಸ್ಥೆಯ `ಫಾಲ್ಕನ್ ೯’ ರಾಕೆಟ್ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿತು. ಈ ಸಂಸ್ಥೆಯ ಸ್ಥಾಪಕ, ವಿಶ್ವಖ್ಯಾತ ಅನ್ವೇಷಕ ಇಂಜಿನಿಯರ್ ಇಲಾನ್ ಮಸ್ಕ್ ತನ್ನ ಜನ್ಮದಿನದಂದೇ ಈ ದುರಂತ ಘಟಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆ ಕ್ಷಣ ಅವರು ಟ್ವೀಟ್ ಮಾಡಿದ್ದು ಹೀಗೆ: ನಿಜ, ಇಂಥ ಹುಟ್ಟುಹಬ್ಬವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಈ ರಾಕೆಟ್ ಸ್ಫೋಟಗೊಂಡಿದ್ದು ಏಕೆ ಎಂಬುದಕ್ಕೆ ಸಾವಿರಾರು ಗಂಟೆಗಳ ಕಾಲದ ತನಿಖೆಯ ನಂತರವೂ ಕಾರಣ ಗೊತ್ತಾಗಿಲ್ಲ […]
Month : July-2015 Episode : Author : ಎಚ್ ಮಂಜುನಾಥ ಭಟ್
ಈಚೆಗೆ ನೊಬೆಲ್ ನೀರಿನ ಪ್ರಶಸ್ತಿ ಎಂದು ಪರಿಚಿತವಾದ ಸ್ಟಾಕ್ಹೋಮ್ ಜಲಪ್ರಶಸ್ತಿಗೆ ಭಾಜನರಾದ ರಾಜೇಂದ್ರಸಿಂಗ್. ಸದಾ ನೀರಿನ ಸಮಸ್ಯೆಯಿಂದ ಬಳಲುವ ರಾಜಸ್ಥಾನದ ಆಳ್ವಾರ್ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಸಿಂಗ್ ೧,೦೦೦ಕ್ಕೂ ಅಧಿಕ ಹಳ್ಳಿಗಳನ್ನು ನೀರಿನ ಸಮಸ್ಯೆಯಿಂದ ಮುಕ್ತಗೊಳಿಸಿದ್ದಾರೆ. ಬತ್ತಿಹೋಗಿದ್ದ ಐದಾರು ನದಿಗಳನ್ನು ವರ್ಷವಿಡೀ ಹರಿಯುವಂತೆ ಮಾಡಿದ್ದಾರೆ. ‘ಭಾರತದ ನೀರಿನ ಮನುಷ್ಯ’ (Water-man of India) ಎಂದು ಜಗತ್ತಿನಲ್ಲೇ ಪ್ರಸಿದ್ಧರಾದ ರಾಜೇಂದ್ರಸಿಂಗ್ ಅಂತಾರಾಷ್ಟ್ರೀಯ ಮ್ಯಾಗ್ಸೇಸೇ೦ ಪ್ರಶಸ್ತಿ ಪುರಸ್ಕೃತರೂ (೨೦೦೧) ಹೌದು. ತಮ್ಮ ಎನ್ಜಿಓ ‘ತರುಣ ಭಾರತ ಸಂಘ’ದ ಸಹಕಾರದೊಂದಿಗೆ […]
Month : July-2015 Episode : Author :
ಹೊಸ ಅಣೆಕಟ್ಟುಗಳನ್ನು ಕಟ್ಟುವುದಕ್ಕೇ ಅವಕಾಶ ಇಲ್ಲವಾಗಿರುವ ಭಾರತದಲ್ಲಿ ಹಳೆಯ ನೀರಾವರಿ ವ್ಯವಸ್ಥೆಯನ್ನು ಅರಿತು ನಡೆಯುವ ಕಾಲ ಒದಗಿದೆ. ಶತಮಾನಗಳಿಂದ ಸಕ್ರಿಯವಾಗಿರುವ ಹಲವು ಅಣೆಕಟ್ಟುಗಳಿರುವ ಭಾರತದಲ್ಲಿ ಹೊಸ ಅಣೆಕಟ್ಟುಗಳು, ನೀರಾವರಿ ವ್ಯವಸ್ಥೆಗಳು ವಿಫಲವಾಗಲು ಪರಂಪರೆಯ ವಿಸ್ಮರಣೆಯೇ ಕಾರಣ. ಅದರಲ್ಲೂ ಜಲಮೂಲಗಳನ್ನು ಸಂರಕ್ಷಿಸದ ಅಪರಾಧ ನಮ್ಮದು. ದೇಶ-ವಿದೇಶದ ಸಂಶೋಧಕರೂ ಇದನ್ನೇ ಹೇಳುತ್ತಾರೆ.
Month : April-2015 Episode : Author : ಎಸ್. ಜಾಹ್ನವಿ ರಾವ್
ಆರೋಗ್ಯದೆಡೆಗೆ ಯೋಗದ ಹೆಜ್ಜೆಗಳು ಯೋಗಾಸನಗಳನ್ನು ಮಾಡುವ ಮೊದಲು ನಮ್ಮ ಮನಸ್ಸು ಮತ್ತು ಶರೀರಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ನಮ್ಮ ಹಿರಿಯರು ಕೆಲವು ಯೋಗವ್ಯಾಯಾಮಗಳನ್ನು ನಿರ್ದೇಶಿಸಿದ್ದಾರೆ. ಈ ಯೋಗವ್ಯಾಯಾಮಗಳನ್ನು ಯೋಗಾಸನಗಳ ಅಭ್ಯಾಸಕ್ಕೆ ಮೊದಲು ಮಾಡುವುದರಿಂದ ನಮ್ಮ ಶರೀರದ ಕೀಲುಗಳು ಸಡಿಲಗೊಂಡು, ಮಾಂಸಖಂಡಗಳು ಮೃದುವಾಗಿ, ಆಸನಗಳನ್ನು ಮಾಡಲು ಸುಲಭವಾಗುತ್ತದೆ. ನಮ್ಮಲ್ಲಿ ಇರಬಹುದಾದ ಅಜೀರ್ಣತೆ, ಉದರವಾಯು ಇತ್ಯಾದಿಗಳ ತೊಂದರೆಗಳ ನಿವಾರಣೆಯಾಗುತ್ತದೆ. ಹೊಟ್ಟೆ ಮೃದುವಾಗಿ ಮುಂದೆ ಆಸನಾಭ್ಯಾಸ ನಡೆಸುವಾಗ ಸರಾಗವಾಗಿ ಉಸಿರಾಟ ನಡೆಸಲು ಸಾಧ್ಯವಾಗುತ್ತದೆ. ಈ ಯೋಗವ್ಯಾಯಾಮಗಳು ನಮ್ಮ ದೇಹಕ್ಕೂ ಮನಸ್ಸಿಗೂ ಲವಲವಿಕೆಯನ್ನೂ ಶಿಸ್ತನ್ನೂ […]