
ಉತ್ಥಾನ ಮಾಸಪತ್ರಿಕೆ ಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಾರ್ಷಿಕ ಪ್ರಬಂಧ ಸ್ಪರ್ಧೆ 2020ರ ಬಹುಮಾನ ವಿತರಣಾ ಕಾರ್ಯಕ್ರಮ ಇಂದು ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತಕೇಂದ್ರ ದಲ್ಲಿ ನಡೆಯಿತು. ಹೊಸದಿಗಂತ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿನಾಯಕ ಭಟ್ ಮುರೂರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಶಸ್ತಿ ಪ್ರಧಾನ ಮಾಡಿದರು. ಆರ್ಥಿಕ ತಜ್ಞ ಡಾ. ಸಮೀರ್ ಕಾಗಲ್ಕರ್ ಹಾಗೂ ದಯಾನಂದ ಸಾಗರ ದಂತ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ|| ಹೇಮಂತ್ ಕುಮಾರ್ ಅವರು ತೀರ್ಪುಗಾರರಾಗಿ ಆಗಮಿಸಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ […]