
ಬೆಂಗಳೂರು: ಬರವಣಿಗೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆಯಿಂದ ಕೂಡಿರಬೇಕು. ನಮ್ಮ ಸೃಜನಶೀಲತೆ ಬರವಣಿಗೆಯ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ್ ಅವರು ತಿಳಿಸಿದರು. ಅವರು ಉತ್ಥಾನ ಮಾಸಪತ್ರಿಕೆ ವತಿಯಿಂದ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಫೆ. ೨೭ರಂದು ನಡೆದ ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆ ೨೦೨೧ರ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಬರಹಗಾರನಿಗೆ ಭಾಷೆಯ ಮೇಲೆ ಹಿಡಿತವಿರಬೇಕು. ಈ ಹಿಡಿತ ಅಧ್ಯಯನದಿಂದಲೇ ಸಿದ್ದಿಸುತ್ತದೆ. ಕಲಿಯಬೇಕಾಗರುವುದು […]