ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ಬರ್ತಿಯಾ ಚಿನ್ನಾ ಯಾರು ಕಾಣದ ಊರಿಗೆ | ಮನಸಿನ ನೆಮ್ಮದಿ ಗೂಡಿಗೆ ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೧|| ಕಳ್ಳ-ಕಾಕರ ಭಯವೇ ಇಲ್ಲ ಸುಳ್ಳು-ಗಿಳ್ಳು ಹೇಳೋರಿಲ್ಲ ಒಳ್ಳೆಯ ತನವೆ ಕಾಣುವದೆಲ್ಲ ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೨|| ಲಂಚ-ಗಿಂಚ ಕೇಳೋರಿಲ್ಲ ಮೋಸ ವಂಚನೆ ಮಾಡೋರಿಲ್ಲ ಸಂಚು ಹೊಂಚಲಿ ಸುಲಿವವರಿಲ್ಲ ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೩|| ಜೀವ ತೆಗೆಯುವ ಹುಂಬರಿಲ್ಲ ಜೀತದಾಳಾಗಿ ದುಡಿಸೋರಿಲ್ಲ ಜೀವಕೆ ಜೀವ ಕೊಡುವವರೆಲ್ಲ ಬರ್ತಿಯಾ ಚಿನ್ನಾ ಹೋಗೋಣ […]
ಕವನಗಳು
Month : August-2015 Episode : Author :