ಜಲೌಕ ಮಹಾರಾಜನ ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು. ಪ್ರಚಂಡ ಬಿರುಗಾಳಿಯು ಜಲಧಿಯಲ್ಲಿ ಎಬ್ಬಿಸುವ ಎತ್ತರದ ಅಲೆಗಳಂತೆ ಆಗಿತ್ತು ಅವನ ಮನಸ್ಸು. ಆವೇಶಕ್ಕೆ ಒಳಗಾದ ಮನುಷ್ಯನ ವಿಚಕ್ಷಣೆ ಕುಸಿದು ಅವನು ಪ್ರಾಣಿಗಳಂತೆ ವಿಚಾರಹೀನನಾಗಿ ವರ್ತಿಸುತ್ತಾನೆ ಎಂಬ ಮಾತು ಸುಳ್ಳಲ್ಲ.
Month : August-2015 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ
Month : August-2015 Episode : Author :
ಬೆಂಗಳೂರಿನ ಉದಯೋನ್ಮುಖ ಚಿತ್ರಕಲಾವಿದೆ. ಚಿತ್ರಕಲಾ ಪರಿಷತ್ನಿಂದ ಚಿತ್ರಕಲೆಯಲ್ಲಿ ಪದವಿ. ತಂದೆ – ಗಣ್ಯ ಸಿತಾರ್ ಕಲಾವಿದ ಎಂ.ಆರ್. ರಾಜಶೇಖರ್. ಗುರು – ಖ್ಯಾತ ಚಿತ್ರಕಲಾವಿದ ಎಂ.ಕೆ. ಸುಂಕದ್. ಚಿತ್ರಕಲೆಯಲ್ಲಿ ತಂಜಾವೂರು ಶೈಲಿಯಲ್ಲಿ ವಿಶೇಷ ಪರಿಶ್ರಮವುಳ್ಳವರು. ಅಮೂರ್ತ (abstract) ಶೈಲಿಯಲ್ಲೂ ಚಿತ್ತಾಕರ್ಷಕ ಚಿತ್ರಗಳನ್ನು ರಚಿಸುವರು. ಅವರೇ ಹೇಳಿಕೊಳ್ಳುವಂತೆ ಕಲಾವತಿ – ಸುಪ್ರಸಿದ್ಧ ಚಿತ್ರಕಲಾವಿದರಾದ ಅಮೃತಾ ಶೇರ್ಗಿಲ್ ಹಾಗೂ ಡಾ. ಬಿ.ಕೆ.ಎಸ್. ವರ್ಮಾರ ಅಭಿಮಾನಿ. [email protected]
Month : August-2015 Episode : Author : ಶತಾವಧಾನಿ ಡಾ|| ರಾ. ಗಣೇಶ್
ಕಾಲಿದಾಸಗಿರಾಂ ಸಾರಂ ಕಾಲಿದಾಸಃ ಸರಸ್ವತೀ | ಚತುರ್ಮುಖೋsಥವಾ ಸಾಕ್ಷಾದ್ವಿದುರ್ನಾನ್ಯೇ ತು ಮಾದೃಶಾಃ || – ಮಲ್ಲಿನಾಥ
Month : August-2015 Episode : Author : ಟಿ.ಎಂ. ರಮೇಶ
Month : August-2015 Episode : Author : ಸಂದೀಪ್ ಬಾಲಕೃಷ್ಣನ್
ಪಾಶ್ಚಾತ್ಯ ಬಲಿಷ್ಠ ರಾಷ್ಟ್ರಗಳಿಗೆ ಚರ್ಚ್ ಅವುಗಳ ವಿದೇಶಾಂಗ ನೀತಿಯ ಒಂದು ಕೈಯಾಗಿ ವಸಾಹತುಶಾಹಿ ಯುಗದಿಂದಲೇ ಬಳಕೆಯಾಗುತ್ತಾ ಬಂದಿದೆ. ಜಗತ್ತಿನಲ್ಲಿಂದು ಕಂಡುಬರುತ್ತಿರುವ ಭೌಗೋಳಿಕ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಈ ಪಿಡುಗು ಇಂದಿಗೂ ಬದಲಾಗದಿರುವುದು ಕಾಣಿಸುತ್ತದೆ. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ವೀಸಾ ಕೊಡುವುದಿಲ್ಲವೆಂದು ಟಾಂ ಟಾಂ ಮಾಡಿದ್ದಿರಬಹುದು, ಭಾರತದ ಅಭಿವೃದ್ಧಿ ಯೋಜನೆ ಅಥವಾ ಅಣುಶಕ್ತಿ ಸ್ಥಾವರಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಿರಬಹುದು, ಜಾಗತಿಕ ಕ್ರೈಸ್ತಜಾಲವು ಆಫ್ರಿಕದಿಂದ ಏಷ್ಯಾದ ವರೆಗೆ ಎಲ್ಲೆಡೆ ಅನಾಹುತ ಪರಂಪರೆಗಳನ್ನು ತರುತ್ತಲೇ ಇದೆ.
Month : August-2015 Episode : Author : ಡಾ.ನಾ.ಮೊಗಸಾಲೆ
ಸಮುದ್ರವನ್ನೇ ನೋಡಿರದ ಮೊಮ್ಮಗ ಊರಿಗೆ ಬಂದಾಗ ವಿನಂತಿಸಿದ ‘ತೋರಿಸಲು ಸಾಧ್ಯವೇ ಅಜ್ಜ ಸಮುದ್ರವ?’ ಸಾಕಷ್ಟು ಸಲ ಸಮುದ್ರ ನೋಡಿದ್ದ ನನ್ನಲ್ಲಿ ಉತ್ಸಾಹ ಇರಲಿಲ್ಲ ತಮಾಷೆಗೆ ತಂಬಿಗೆ ತುಂಬ ನೀರು ತುಂಬಿಸಿ ಉಪ್ಪು ಸುರಿದು ‘ಇದೂ ಸಮುದ್ರವೇ!’ ಎಂದೆ. ಯಾಕೆ ತಮಾಷೆ? ‘ನೋಡಿದ್ದನ್ನು ನೋಡಬಾರದೆಂದಿಯೆ ಮತ್ತೆ?’ ಎಂದು ಆತ ಒತ್ತಾಯಿಸಿದ್ದಕ್ಕೆ ಸಮುದ್ರದ ಬಳಿ ಬಂದೆವು ಅವನು ಸಮುದ್ರ ನೋಡಿ ಒಳಗೊಳ್ಳುತ್ತಿದ್ದ ಪರಿನೋಡಿ ‘ಅಹಾ! ಅಹಾ!’ ಅಂದೆ ಆತ ಹಿಂದಿನಿಂದ ಬಂದು ಬಿಗಿದಪ್ಪಿ ‘ನೀವೂ ಸಮುದ್ರವೇ ಆಗಿದ್ದೀರಿ […]
Month : August-2015 Episode : Author : ಎಸ್.ಆರ್. ರಾಮಸ್ವಾಮಿ
Month : August-2015 Episode : Author :
೧. ಬಂಗಾಳದಲ್ಲಿ ೧೭-೧೮ನೇ ಶತಮಾನಗಳಲ್ಲಿ ಮಲ್ಲ ರಾಜವಂಶಿಕರು ನಿರ್ಮಿಸಿದ ಗಡಸು ಜೇಡಿಮಣ್ಣಿನ ಪ್ರಸಿದ್ಧ ದೇವಾಲಯಗಳು ಎಲ್ಲಿವೆ? ೨. ‘ನೀರ್ಗಲ್ಲು’ ಎಂದರೆ ಏನು? ೩. ಭೂಸೇನೆ, ವಾಯುಸೇನೆ, ನೌಕಾಸೇನೆ – ಈ ಮೂರೂ ವಿಭಾಗ ಸಿಬ್ಬಂದಿಗಳ ಈಗಿನ ಅಧಿಪ್ರಮುಖರು ಯಾರು? ೪. ರಾಣಿ ಚೆನ್ನಮ್ಮ ಯಾರ ಪತ್ನಿ? ೫. ಕರ್ನಾಟಕದ ಪ್ರಸಿದ್ಧ ಕೀರ್ತಿನಾರಾಯಣ ದೇವಾಲಯ ಎಲ್ಲಿದೆ? ೬. ‘ತರಕಾರಿಗಳ ರಾಜ’ ಎಂದು ಯಾವುದನ್ನು ಕರೆಯುತ್ತಾರೆ? ೭. ಭಾರತದಲ್ಲಿ ಅತಿ ಹೆಚ್ಚು ಚಹಾ ಬೆಳೆಯುವುದು ಯಾವ ರಾಜ್ಯದಲ್ಲಿ? ೮. ‘ಆಗಾಖಾನ್ ಕಪ್’ ಪ್ರಶಸ್ತಿ […]
Month : August-2015 Episode : Author : ಬೇಳೂರು ಸುದರ್ಶನ
೨೦೧೫ರ ಜೂನ್ ೨೮. ಅಂತಾರಾಷ್ಟ್ರೀಯ ವ್ಯೋಮಕೇಂದ್ರಕ್ಕೆ ಸರಕು ತೆಗೆದುಕೊಂಡು ಹೊರಟಿದ್ದ ಸ್ಪೇಸ್ಎಕ್ಸ್ ಸಂಸ್ಥೆಯ `ಫಾಲ್ಕನ್ ೯’ ರಾಕೆಟ್ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿತು. ಈ ಸಂಸ್ಥೆಯ ಸ್ಥಾಪಕ, ವಿಶ್ವಖ್ಯಾತ ಅನ್ವೇಷಕ ಇಂಜಿನಿಯರ್ ಇಲಾನ್ ಮಸ್ಕ್ ತನ್ನ ಜನ್ಮದಿನದಂದೇ ಈ ದುರಂತ ಘಟಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆ ಕ್ಷಣ ಅವರು ಟ್ವೀಟ್ ಮಾಡಿದ್ದು ಹೀಗೆ: ನಿಜ, ಇಂಥ ಹುಟ್ಟುಹಬ್ಬವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಈ ರಾಕೆಟ್ ಸ್ಫೋಟಗೊಂಡಿದ್ದು ಏಕೆ ಎಂಬುದಕ್ಕೆ ಸಾವಿರಾರು ಗಂಟೆಗಳ ಕಾಲದ ತನಿಖೆಯ ನಂತರವೂ ಕಾರಣ ಗೊತ್ತಾಗಿಲ್ಲ […]
Month : August-2015 Episode : Author : ಎಸ್.ಆರ್. ರಾಮಸ್ವಾಮಿ
`ಗಾರ್ಡನ್ ಸಿಟಿ’, `ಸೈಬರ್ ಸಿಟಿ’ ಮೊದಲಾದ ಹೆಸರುಗಳನ್ನು ಹೊಂದಿರುವ ಕಲ್ಯಾಣನಗರಿ ಬೆಂಗಳೂರು ಇದೀಗ `ಡಿವೋರ್ಸ್ ಸಿಟಿ’ (ವಿವಾಹವಿಚ್ಛೇದಗಳ ನಗರ) ಎಂಬ ಬಿರುದಿಗೂ ಅರ್ಹವಾಗುತ್ತಿದೆಯೆ? ದಿನೇ ದಿನೇ ಹೆಚ್ಚುತ್ತಿರುವ ವಿವಾಹವಿಚ್ಛೇದಗಳ ಪ್ರಮುಖ ಮಹಾನಗರಗಳಲ್ಲಿ ರಾಷ್ಟ್ರರಾಜಧಾನಿ ದೆಹಲಿಗೆ ದ್ವಿತೀಯ ಸ್ಥಾನದಲ್ಲಿರುವವು ಹೈದರಾಬಾದ್ ಮತ್ತು ಬೆಂಗಳೂರು – ಎಂದು ಸಮೀಕ್ಷೆಗಳು ತಿಳಿಸಿವೆ. ಸಮೃದ್ಧಿ ಮತ್ತು ಆಧುನಿಕತೆಗಳ ತುತ್ತತುದಿಯಲ್ಲಿ ಇರುವವೆನಿಸಿರುವ ಈ ಪಟ್ಟಣಗಳಲ್ಲಿ ಪ್ರತಿದಿನ ಸರಾಸರಿ ಸುಮಾರು ಮೂವತ್ತು ವಿಚ್ಛೇದ ಅರ್ಜಿಗಳ ಸಲ್ಲಿಕೆಯಾಗುತ್ತಿದೆ ಎನ್ನಲಾಗಿದೆ.