
ಜಗತ್ತಿನ ಎಲ್ಲ ವಸ್ತುಗಳು ಆಗುವವು ಅಣುಗಳಿಂದ ಕಾಣಲಸಾಧ್ಯ ಅಣುಗಳನು ಕಣ್ಣುಗಳಿಂದ ಅಲ್ಲಾಡುವವು, ಸರಿದಾಡುವವು, ಓಡುವವು ವಸ್ತುಗಳಲಿ ಆದರೂ ಕಾಣವು, ಸಿಗವು ಕೈಗಳಲಿ ಅಣುಗಳ ಜೋಡಣೆ ಬದಲಾದಂತೆ ವಸ್ತುಗಳಲಿ ಆಗುವವು ಸ್ಥಿತಿಗಳ ಬದಲಾವಣೆ ವಸ್ತುಗಳಲಿ
Month : March-2015 Episode : ದ್ರವ್ಯ-2 Author : ಗೀತಾ ಅರವಿಂದ್
Month : March-2015 Episode : Author : ರೂಪಾ ಮಂಜುನಾಥ್ ಶಿರಸಿ
ಸಸ್ಯಶಾಸ್ತ್ರೀಯ ಹೆಸರು: ಎಬ್ರಸ್ ಪ್ರಿಕಟೋರಿಯಸ್ (Abrus precatorius) ಸಸ್ಯಕುಟುಂಬ: ಫ್ಯಾಬೇಸಿ (Fabaceae) ಕನ್ನಡದ ಇತರ ಹೆಸರುಗಳು: ಗುಂಜಿ, ಗುಂಡುಮಣಿ, ಮಧುಕವಲ್ಲಿ, ಹೌಡಿಗೆ, ಹಾಗ, ಗುಲಗಂಜಿ. ಸಂಸ್ಕೃತ: ಗುಂಜ, ಗುಂಜಾ. ಹಿಂದಿ: ಗುಂಗ್ಜ, ಗುಂಚಿ, ರತಿ, ಗುಂಜಾ, ಕರಜಿನಿ. ತಮಿಳು: ಗುಂಡುಮಣಿ, ಕುನ್ರಿಮಣಿ, ಕುಂದುಮಣಿ. ತೆಲಗು: ಗುರಿಗಿಂಜ, ಗುರುಗಿಂಚ. ಮರಾಠಿ: ಚಿರಮಿ, ರತ್ತಿ. ಗುಜರಾತಿ: ಗುಂಜಾ ಇಂಗ್ಲಿಷ್: ಕ್ರ್ಯಾಬ್ಸ್ ಐ, ಇಂಡಿಯನ್ ಲಿಕ್ವಿರೈಸ್, ಜೆಕ್ವೈರಿಟಿ.
Month : March-2015 Episode : Author : ಡಾ. ಹೆಚ್. ಪಾಂಡುರಂಗ ವಿಠಲ
ಮಸುಕು ಬೆಟ್ಟದ ದಾರಿ ಲೇಖಕರು: ಎಂ.ಆರ್. ದತ್ತಾತ್ರಿ ಪ್ರಕಾಶಕರು: ಮನೋಹರ ಗ್ರಂಥಮಾಲೆ, ಧಾರವಾಡ ಬೆಲೆ: ರೂ. ೩೦೦ ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ, ಅತಿ ಅಪರೂಪದ ಮಿದುಳಿನ ಲಕ್ಷಣದ ಹುಡುಗ ನಿರಂಜನ ಇಲ್ಲಿನ ನಾಯಕ. ಮೆದು ಮನಸ್ಸು, ಸರಳ ಸೌಜನ್ಯದ ಪೊಲೀಸ್ ಕಾನ್ಸ್ಟೇಬಲ್ ರಾಜೀವ ಈತನ ತಂದೆ. ತಂದೆಯಾಗಿ ಮಗನನ್ನು ಜೀವನದಲ್ಲಿ ನಿಲ್ಲಿಸಲು ಆತ ಪಡುವ ಪಡಿಪಾಟಲು ಮೊದಲ […]
Month : March-2015 Episode : Author : ಡಾ|| ಕೆ. ಜಗದೀಶ ಪೈ
ಆಶ್ಚರ್ಯದ ಸಂಗತಿಯೆಂದರೆ ನಮ್ಮಲ್ಲಿ ಹಲವಾರು ಒಳ್ಳೆಯ ಆಚರಣೆಗಳಿದ್ದರೂ ಅರ್ಥವಿಲ್ಲದ ಬೆಡಗಿನ ಆಚರಣೆಗಳನ್ನು ಅನುಕರಿಸುತ್ತಿದ್ದೇವೆ. ಈ ದೇಶ ಹಲವಾರು ಹಬ್ಬಗಳ, ಆಚರಣೆಗಳ, ಸಂಪ್ರದಾಯಗಳ ನಾಡು. ಈ ಎಲ್ಲ ಆಚರಣೆಗಳಿಂದ, ಹಬ್ಬಗಳಿಂದ ಮನುಷ್ಯನಿಗೆ ಸಂಸ್ಕಾರ ಸಿಗಲಿ, ಆತನಲ್ಲಿ ಜೀವನೋತ್ಸಾಹ ತುಂಬಲಿ, ಸಮಾಜದಲ್ಲಿ ಸಾಮರಸ್ಯ ಉಂಟಾಗಲಿ ಎಂಬುದೇ ಇದರ ಹಿಂದಿರುವ ಸದುದ್ದೇಶ. ಇವೆಲ್ಲವನ್ನು ಅರಿತು ಆಚರಣೆಗಳನ್ನು ಆಚರಿಸಿದರೆ ಅದು ಅರ್ಥಪೂರ್ಣವಾಗುತ್ತದೆ. ಅರಿಯದೆ ಕೇವಲ `ಶೋಕಿ’ಗಾಗಿ ಆಚರಣೆ ಮಾಡಿದರೆ ಅದು ಅನರ್ಥವಾಗುತ್ತದೆ.
Month : March-2015 Episode : Author : ದು.ಗು.ಲಕ್ಷ್ಮಣ
ಧೋನಿ ಉಳಿದ ಕಪ್ತಾನರಂತೆ ಯಾವುದೇ ಅಧಿಕೃತ ವಿದಾಯ ಬಯಸಲಿಲ್ಲ. ಸರಣಿ ನಡುವೆಯೇ ವಿದಾಯ ಹೇಳಿದರು. ಅದು ಕೂಡ ತನ್ನ ವಿದಾಯವನ್ನು ಮೊದಲು ತಿಳಿಸಿದ್ದು ಬಿಸಿಸಿಐಗೆ. ಸೋಲು-ಗೆಲವುಗಳ ಸಂದರ್ಭದಲ್ಲಿ ಹೇಗೋ, ಹಾಗೇ ನಿವೃತ್ತಿಯಲ್ಲೂ ಧೋನಿಯದು ಅದೇ ನಿರ್ಲಿಪ್ತ, ನಿರುಮ್ಮಳ ಭಾವ. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರಾದ ಮಹೇಂದ್ರಸಿಂಗ್ ಧೋನಿ ಈ ಪರಿ ಟೆಸ್ಟ್ ಕ್ರಿಕೆಟ್ನಿಂದ ನಿರ್ಗಮಿಸುವ ಹಠಾತ್ ನಿರ್ಧಾರ ಕೈಗೊಳ್ಳುತ್ತಾರೆಂದು ಯಾವ ಕ್ರಿಕೆಟ್ ತಜ್ಞರೂ ಊಹಿಸಿರಲಾರರು. ಕ್ರಿಕೆಟ್ ಹುಚ್ಚಿನ ಈ ದೇಶದಲ್ಲಿ ೨೦೧೪ರ ವರ್ಷಾಂತ್ಯದ ಬಹಳ […]
Month : March-2015 Episode : Author : ಡಾ|| ವಂದನಾ
ಸೂರ್ಯೋಪಾಸನೆ ಇಂದು ನಿನ್ನೆಯ ಆಚರಣೆ ಅಲ್ಲ. ಅನಾದಿಕಾಲದಿಂದಲೂ ಇದು ಜನಜೀವನದಲ್ಲಿ ಹಾಸುಹೊಕ್ಕಾಗಿ, ಸಾಂಪ್ರದಾಯಿಕ ಆಚರಣೆಯಾಗಿ ಪ್ರಚಲಿತದಲ್ಲಿ ಇದೆ. ವಿಶ್ವರೂಪಂ ಹರಿಣಂ ಜಾತವೇದಸಂ ಪರಾಯಣಂ ಜ್ಯೋತಿರೇಕಂ ತಪಂತಮ್ | ಸಹಸ್ರರಶ್ಮಿಃ ಶತಧಾ ವರ್ತಮಾನಃ ಪ್ರಾಣಃ ಪ್ರಜಾನಾಮುದಯತ್ಯೇಷ ಸೂರ್ಯ || – ಪ್ರಶ್ನ-೮ ಪ್ರಶ್ನೋಪನಿಷತ್ತಿನಲ್ಲಿ ಕಂಡು ಬರುವ ಸೂರ್ಯನ ಕುರಿತಾದ ವರ್ಣನೆ ಇದು. ಹಾಗೆಯೆ, ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ | ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋsಸ್ತುತೇ || ಸೂರ್ಯಾಷ್ಟಕದ ಈ ಸಾಲುಗಳು ಸೂರ್ಯನ ಕುರಿತಾದ ಪ್ರಾರ್ಥನೆ ಎಂದು ಪ್ರತ್ಯೇಕವಾಗಿ […]
Month : March-2015 Episode : Author : ಎಸ್. ಜಾಹ್ನವಿ ರಾವ್
Month : March-2015 Episode : Author : ಎಂ.ಓ. ಗರ್ಗ್
ಭಾರತ ಸದ್ಯವೇ ತನ್ನ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ತಮ ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಆಗಿ ಪರಿವರ್ತಿಸಲಿದೆ. ಡೆಹ್ರಾಡೂನ್ ಮೂಲದ ಭಾರತೀಯ ಪೆಟ್ರೋಲಿಯಂ ಸಂಸ್ಥೆ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಮ್) ಯ ಸಂಶೋಧಕರ ಮಹತ್ತ್ವದ ಸಾಧನೆಯಿದು. ಐಐಪಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್)ಗೆ ಸೇರಿದ ಒಂದು ಪ್ರಯೋಗಶಾಲೆಯಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನೂ ಪೆಟ್ರೋಲಿಯಂ ಉತ್ಪನ್ನಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಕಂಡುಹಿಡಿದಿದೆ.
Month : March-2015 Episode : Author : ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು
ಈ ಸಮಸ್ತ ಸೃಷ್ಟಿಯು ದೇವನಿರ್ಮಿತ ಭವ್ಯ ದಿವ್ಯ ಮೂರ್ತಿ! ಸುಂದರವಾದ ಶಿಲ್ಪವನ್ನು ನೋಡಿ ಶಿಲ್ಪಿಯನ್ನು ನೆನೆಯುತ್ತೇವೆ. ಹಾಗೆ ಈ ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ನೋಡಿ ಸೃಷ್ಟಿಕರ್ತನಾದ ಆ ಮಹಾದೇವನನ್ನು ನಾವು ನೆನೆಯಬೇಕು, ನಮಿಸಬೇಕು. ಸೃಷ್ಟಿಯನ್ನು ಗೌರವಿಸಿದರೆ ಸೃಷ್ಟಿಕರ್ತನನ್ನು ಗೌರವಿಸಿದಂತೆ. ಶಿಲ್ಪವನ್ನು ಮೆಚ್ಚಿ ಕೊಂಡಾಡಿದರೆ ಶಿಲ್ಪಿಯನ್ನು ಕೊಂಡಾಡಿದಂತೆಯೇ! ಸೃಷ್ಟಿಯು ಶಿಲ್ಪವಾದರೆ ಸೃಷ್ಟಿಕರ್ತನು ದೇವಶಿಲ್ಪಿ!
Month : March-2015 Episode : Author :
‘ಉತ್ಥಾನ’ದ ಹೊಸ ರೂಪವೂ ಅದರಲ್ಲಿರುವ ಲೇಖನಗಳೂ ಬಹಳ ಆಕರ್ಷಕವಾಗಿವೆ. ಈ ಸ್ವರೂಪದಿಂದ ಅದರ ಬಗೆಗೆ ಮತ್ತಷ್ಟು ಆತ್ಮೀಯತೆ ಬರುತ್ತದೆ.ಎಸ್.ಎಲ್. ಭೈರಪ್ಪನವರ ‘ಯಾನ’ ಪುಸ್ತಕದ ಬಗೆಗೆ ಇರುವ ಲೇಖನ ಅತ್ಯಂತ ವಿಶಿಷ್ಟವಾಗಿದೆ. ‘ಮ್ಯಾಜಿಕಲ್ ಇಮ್ಯಾಜಿನೇಷನ್’ ಮತ್ತು ‘ಮ್ಯಾಜಿಕಲ್ ರಿಯಲಿಸ್ಮ್’ ನುಡಿಗಟ್ಟುಗಳು ‘ಯಾನ’ಕ್ಕೆ ಪೂರ್ತಿ ಹೊಂದುವ ಶಬ್ದಗಳಾಗಿವೆ. ಆದರೂ ‘ಯಾನ’ವನ್ನು ಓದುವುದು ನಿಧಾನವಾಗಿ ಆಗಬೇಕು; ಆಗ ಅದರ ಸ್ವಾರಸ್ಯ ತಿಳಿವಿಗೆ ಬರುತ್ತದೆ. – ಪ್ರೊ|| ಜಿ. ವೆಂಕಟಸುಬ್ಬಯ್ಯ, ಬೆಂಗಳೂರು ‘ಉತ್ಥಾನ’ ಹೊಸರೂಪದಲ್ಲಿ, ಮನಸ್ಸಿಗೆ ಆನಂದವನ್ನು ನೀಡುವಂತೆ ಮೂಡಿಬರುತ್ತಿದೆ. ಹಿರಿಯರ […]