
ಅರ್ಕೇ ಚೇನ್ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್| ಇಷ್ಟಸ್ಯಾರ್ಥಸ್ಯ ಸಂಸಿದ್ಧೌ ಕೋ ವಿದ್ವಾನ್ ಯತ್ನಮಾಚರೇತ್|| – ಶಾಬರಭಾಷ್ಯ ಹೋಗುತ್ತಿರುವಾಗ ದಾರಿಯ ಬದಿಯಲ್ಲಿಯೇ ಎಕ್ಕದ ಗಿಡದಲ್ಲಿ ಜೇನು ಇರುವುದು ಕಣ್ಣಿಗೆ ಬಿದ್ದರೆ, ಜೇನನ್ನರಸುತ್ತಾ ಬೆಟ್ಟದ ಮೇಲಕ್ಕೆ ಏಕಾದರೂ ಹೋಗಬೇಕು? ಬಯಸಿದ ಪದಾರ್ಥವು ಕೈಗೆ ಸಿಕ್ಕಿದ ಮೇಲೆ ಜ್ಞಾನಿಯು ಪ್ರಯತ್ನವನ್ನು ಮುಂದುವರಿಸದೆ ವಿರಮಿಸುತ್ತಾನೆ.”