ಜನ್ಮ ಶತಾಬ್ದ ಸ್ಮರಣೆ ಈ ವರ್ಷ ಬೆಳಗೆರೆ ಕೃಷ್ಣಶಾಸ್ತ್ರಿಗಳ (೨೨.೫.೧೯೧೬- ೨೩.೩.೨೦೧೩) ಜನ್ಮಶತಾಬ್ದವನ್ನು ವಿವಿಧೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜೀವಮಾನದುದ್ದಕ್ಕೂ ಯಾವುದೇ ಪ್ರಚಾರವನ್ನಾಗಲಿ ಸಂಮಾನಗಳನ್ನಾಗಲಿ ಬಯಸದೆ ಅವಧೂತರಂತೆ ನಿರ್ಲಿಪ್ತರಾಗಿದ್ದ ಕೃಷ್ಣಶಾಸ್ತ್ರಿಗಳು ಈಗ ಉತ್ಸವಾಚರಣೆಗಳಿಗೆ ವಸ್ತುವಾಗಿರುವುದು ಸ್ವಾರಸ್ಯಕರ. ಇಂತಹ ಹಲವು ವಿಶೇಷತೆಗಳು ಗಮನ ಸೆಳೆಯುತ್ತವೆ. ಜೋಳಿಗೆಯ ಹೊರತು ಬೇರಾವ ಅವಲಂಬವೂ ಇಲ್ಲದ ಅವರು ಚಿತ್ರದುರ್ಗ ಜಿಲ್ಲೆಯ ಬೆಳಗೆರೆಯಂತಹ ಗ್ರಾಮೀಣ ಪ್ರದೇಶದಲ್ಲಿ ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆ, ಶ್ರೀ ವೇದಾವತಿ ಉಚಿತ ವಿದ್ಯಾರ್ಥಿನಿಲಯಗಳಂತಹ ಸಂಸ್ಥಾಸಮೂಹವನ್ನು ಸ್ಥಾಪಿಸಿ ಬೆಳೆಸಿದರು (ಈಗ ಈ ಸಂಸ್ಥೆಗಳು ಅರ್ಧಶತಾಬ್ದದ […]
ಬೆಳಗೆರೆ ಕೃಷ್ಣಶಾಸ್ತ್ರಿ
Month : July-2016 Episode : Author : ಎಸ್.ಆರ್. ರಾಮಸ್ವಾಮಿ