ಈ ಮಹಿಳೆಯರಿಬ್ಬರನ್ನೂ ನಾನು ಭಾರತೀಯ ಮಹಿಳೆಯಲ್ಲಿರುವ ಚೈತನ್ಯಕ್ಕೂ ಸಾಮರ್ಥ್ಯಕ್ಕೂ ಪ್ರತಿನಿಧಿಗಳೆಂದು ಪರಿಗಣಿಸುತ್ತೇನೆ. ಈ ಭಾರತೀಯ ಮಹಿಳೆಯನ್ನು ಅವಳ ಸ್ಥಿತಿಗತಿಗಳು ಎಂದೂ ಬಹುದಿನ ಬಂಧಿಸಿಡಲಾರವು. ತನ್ನದೇ ಕನಸುಗಳನ್ನೂ ಮಹತ್ತ್ವಾಕಾಂಕ್ಷೆಗಳನ್ನೂ ಪರಿಗಣನೆಗೆ ತೆಗೆದುಕೊಳ್ಳದೆಯೆ ಅವಳು ಜೀವನ ಸಾಗಿಸುತ್ತಿರುತ್ತಾಳೆ. ಅವಳು ತನ್ನ ಗಂಡನ ಮಹತ್ತ್ವಾಕಾಂಕ್ಷೆಯ ಬಗ್ಗೆಯೂ, ಮಕ್ಕಳ ಕ್ಷೇಮಾಭ್ಯುದಯದ ಬಗ್ಗೆಯೂ ಆಲೋಚನೆ ಮಾಡುತ್ತಾಳೆ. ಆಕೆಗೆ ತನ್ನ ತಂದೆಯ, ಅಣ್ಣತಮ್ಮಂದಿರ ಹಾಗೂ ಅಕ್ಕತಂಗಿಯರ ಮುಂದೆ ತನ್ನ ಬೇಕು ಬೇಡಗಳು ಹಿಂದೆ. ಅವಳ ಸ್ವಂತ ಕನಸುಗಳು ಏನಾದಾವು? ಈ ವಿ?ಯ ನಾನು ಅನೇಕ ಬಾರಿ ಯೋಚಿಸಿದ್ದೇನೆ; ಅಚ್ಚರಿಪಟ್ಟಿದ್ದೇನೆ. ವಿಧಿ, ಸಂಪ್ರದಾಯ ಹಾಗೂ ಪರಿಸ್ಥಿತಿಗಳು ಸದಾ ಅವಳನ್ನು ಪರೀಕ್ಷೆಗೆ ಒಡ್ಡುತ್ತಲೇ ಇರುತ್ತವೆ. ಅವಳೇ ದುಃಖಿಸಬೇಕು. ಹೊಂದಾಣಿಕೆ ಮಾಡಿಕೊಳ್ಳಬೇಕಾದುದೂ ಅವಳೇ. ಉಳಿತಾಯವೂ ಅವಳಿಂದಲೇ. ಅದಕ್ಕೆ ಹೊಸ ವಿಧಾನಗಳನ್ನು ಅವಳೇ ಹುಡುಕಬೇಕು. ಆದರೂ ಕೊನೆಗೆ ಅವಳೇ ತನ್ನ ಕುಟುಂಬವನ್ನೂ ಆಪ್ತೇ?ರನ್ನೂ ಅಪಾಯದಿಂದ ಪಾರುಮಾಡುತ್ತಾಳೆ. ವಿಘ್ನಗಳನ್ನು ನಿವಾರಿಸುತ್ತಾಳೆ. ಅವನ್ನು ಅವಳು ಬಲು ಪ್ರೀತಿಯಿಂದ ಮಾಡುತ್ತಾಳೆ. ಅವಳ ಆ ಪ್ರೀತಿ ಯಾರ ಹೃದಯವನ್ನಾದರೂ ಕರಗಿಸುತ್ತದೆ.”
ಜನಪ್ರೀತಿಯ ಅಬ್ದುಲ್ ಕಲಾಂ ಅವರು ತಮ್ಮ ಪುಸ್ತಕ ’ಮೈ ಜರ್ನಿ, ಟ್ರಾನ್ಸ್ಫಾರ್ಮಿಂಗ್ ಡ್ರೀಮ್ಸ್ ಇನ್ಟು ಆಕ್ಶನ್’(ಕನ್ನಡ ಅನುವಾದ – ’ನನ್ನ ಪಯಣ: ಕನಸು ನನಸಾಗುವ ಹಾದಿಯಲ್ಲಿ’ – ಜಿ.ಕೆ. ಮಧ್ಯಸ್ಥ)ನಲ್ಲಿ ತಮ್ಮ ತಾಯಿ ಆಯೆ?ಮ್ಮ ಮತ್ತು ಅಕ್ಕ ಜೊಹ್ರಾ ಕುರಿತಾಗಿ ಬರೆದುಕೊಳ್ಳುವ ಸಾಲುಗಳಿವು. ಇಡಿಯ ಭಾರತದ ಸನ್ನಿವೇಶದಲ್ಲಿ ಮಹಿಳೆಗೆ ನೀಡಲ್ಪಟ್ಟ ಸ್ಥಾನಮಾನಗಳು, ಆಕೆಗ? ಸಾಧ್ಯವಾಗುವ ಕುಟುಂಬ ನಿರ್ವಹಣೆ, ಸಂಸಾರದ ಕೇಂದ್ರಬಿಂದುವಾಗಿ ಅವಳು ಎಲ್ಲರನ್ನೂ ತನ್ನಂತರಂಗದ ಪ್ರೀತಿಯಿಂದ ಬಂಧಿಸಿಟ್ಟುಕೊಳ್ಳುವ ಪರಿಯನ್ನು ಬಹುಶಃ ಇದಕ್ಕಿಂತ ಸೊಗಸಾಗಿ ಬಣ್ಣಿಸಲಾಗದೇನೊ! ಹೆಣ್ಣಿನ ಸಾಮರ್ಥ್ಯಗಳ ಕುರಿತಾಗಿ ಅವಳೇ ಹೇಳಿಕೊಂಡರೆ ಬಡಾಯಿಕೊಚ್ಚಿಕೊಂಡಂತೆ ಇತರರಿಗೆ ಅನ್ನಿಸಬಹುದು. ಅದನ್ನೇ ಅಂತಹುದೊಂದು ಬಂಧವನ್ನು ಅನುಭವಿಸಿದ ವ್ಯಕ್ತಿಯೇ ಅಂದರೆ ಗಂಡಸೇ ಹೇಳಿದರೆ ಖಂಡಿತ ಅತಿಶಯವೆನಿಸುವುದಿಲ್ಲ. ಅದು ಸ್ತ್ರೀವಾದವೂ ಆಗುವುದಿಲ್ಲ.
ಹೆಣ್ಣಿನ ಪಾತ್ರವೇ ಮುಖ್ಯ
ಒಂದು ಕುಟುಂಬ, ಕೌಟುಂಬಿಕ ಮೌಲ್ಯಗಳು ಎಂದ ಕೂಡಲೆ ಕಣ್ಣಮುಂದೆ ಬರುವುದು ಚೆಂದದ ಸಂಸಾರ. ಅದರಲ್ಲೂ ಆ ಮನೆಯ ಗೃಹಿಣಿ. ಪ್ರೀತಿ, ಸಹನೆ, ತ್ಯಾಗ, ಸ್ನೇಹ, ಒಗ್ಗಟ್ಟು, ಸಹಿ?ತೆ, ಸಹಬಾಳ್ವೆ… ಮೊದಲಾದ ಎಲ್ಲ ಮೌಲ್ಯಗಳನ್ನೂ ಆಕೆ ಸ್ವತಃ ಪಾಲಿಸಬೇಕಲ್ಲದೆ ಮನೆಯಮಂದಿಗೂ ಅವುಗಳ ಪಾಠ ಮಾಡಿಸುವ ಶಿಕ್ಷಕಿಯೂ ಆಗಿರಬೇಕಾಗುತ್ತದೆ. ಒಬ್ಬ ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡಿಯ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಎಂದು ಹೇಳಿದ ಗಾಂಧಿಯವರ ಮಾತೂ ಅದೇ ತಾನೆ! ಮನೆಯ ಮಗ/ಮಗಳು ಹಾದಿತಪ್ಪಿದರೆ ಸಮಾಜ ಯಾವ ಕಾರಣಕ್ಕೂ ಇಡಿಯ ಕುಟುಂಬವನ್ನು ದೂಷಿಸುವುದಿಲ್ಲ.
ಬದಲಾಗಿ ’ಎಂಥಾ ತಾಯಿ ಹೆತ್ತಳೋ, ಹೇಗೆ ಸಾಕಿದಳೋ… ಆ ತಾಯಿ ಇನ್ನೆಂತಹವಳೋ… ನೂಲಿನಂತೆ ಸೀರೆ, ತಾಯಿಯಂತೆ ಮಗಳು’ ಎಂಬಿತ್ಯಾದಿ ಉದ್ಗಾರಗಳನ್ನು ತೆಗೆಯುತ್ತದೆ. ಅಂದ ಮೇಲೆ ಕುಟುಂಬವನ್ನು ಬೆಳಗುವಲ್ಲಿ ಮತ್ತು ಮುನ್ನಡೆಸುವಲ್ಲಿ ಆ ಮನೆಯ ಹೆಣ್ಣಿನ ಪಾತ್ರವೇ ಮುಖ್ಯ ಎಂದಂತಾಯಿತು.
ಕುಟುಂಬವೆಂದ ಕೂಡಲೆ ಅಲ್ಲಿ ಏಕತೆಯಿರುತ್ತದೆ, ವೈವಿಧ್ಯವಿರುತ್ತದೆ. ಆ ಎಲ್ಲ ವೈವಿಧ್ಯಗಳ ನಡುವೆಯೂ ಸಮಷ್ಟಿಯ ಭಾವವನ್ನು ಬೆಳೆಸಿ, ’ನಾನು’ ಇದ್ದಲ್ಲಿಂದ ’ನಾವು’ ಎಂಬ ಹೊಂದಾಣಿಕೆ ಬೆಳೆಯುವುದು ಕುಟುಂಬದಲ್ಲಿ. ತನ್ನ ಕುಟುಂಬಕ್ಕಾಗಿ ಹೆಣ್ಣು ಎಲ್ಲವನ್ನೂ ಮಾಡಬಲ್ಲಳು. ಬಿಡಿಗಾಸನ್ನು ಹೊಂದಿಸಿ ಕ?ಕಾಲದಲ್ಲಿ ನೆರವಾಗುವುದರಿಂದ ತೊಡಗಿ ಮನೆಮಂದಿಯ ಆರೈಕೆಯವರೆಗೆ ಮನೆಯ ಬಹುತೇಕ ಹೊಣೆಗಾರಿಕೆಯೂ ಅವಳದೇ. ಗೃಹಿಣಿಯಿರಲಿ ಅಥವಾ ಮನೆಯ ಒಳಗೆ-ಹೊರಗೆ ಎರಡೂ ಕಡೆ ದುಡಿಯುವ ಮಹಿಳೆಯೇ ಆಗಲಿ ಕುಟುಂಬವೇ ಅವಳ ಆದ್ಯತೆ. ಉದ್ಯೋಗ, ವೃತ್ತಿಜೀವನವೇನಿದ್ದರೂ ಮನೆಯೊಳಗಿನ ಜವಾಬ್ದಾರಿಗಳನ್ನು ಸಮರ್ಪಕವಾಗಿ ಪೂರೈಸಿಕೊಳ್ಳಲು ಸಾಧ್ಯವಾದರೆ ಮಾತ್ರ. ಇಲ್ಲವಾದಲ್ಲಿ ಒಂದೋ ಸಂಸಾರದ ನೌಕೆ ನಾವಿಕನಿಲ್ಲದಂತಾಗುತ್ತದೆ, ಅಥವಾ ವೃತ್ತಿಯೆಂಬುದು ಮರೀಚಿಕೆಯಾಗುತ್ತದೆ.
ಹೆಣ್ಣಿನ ಮೇಲಿರುವ ಜವಾಬ್ದಾರಿ ಅವಳದೇ ಆಯ್ಕೆಯಾದಾಗ ಅವಳು ಅದನ್ನು ಅತ್ಯಂತ ನಿ?ಯಿಂದ, ಶ್ರದ್ಧೆಯಿಂದ, ಪ್ರೀತಿಯಿಂದ ನಿರ್ವಹಿಸುತ್ತಾಳೆ. ಅವಳಿಗದು ಎಂದೂ ಹೊರೆಯಾಗದು. ಆದರೆ ಬಹುತೇಕ ನಮ್ಮ ವಿದ್ಯಾವಂತ ಮಹಿಳೆಯರು ಮಾಡುವಂತೆ ಇವೆಲ್ಲವನ್ನೂ ಸ್ತ್ರೀವಾದದ ನೆಲಗಟ್ಟಿನಲ್ಲಿ ನೋಡಿ ತಮ್ಮ ನೆಮ್ಮದಿಯನ್ನೂ ಮನೆಯ ನೆಮ್ಮದಿಯನ್ನೂ ಹಾಳುಗೆಡಹಿದರೆ ಮಾತ್ರ ಆ ಸೋಲು ಇಡಿಯ ಕುಟುಂಬದ್ದಾಗುತ್ತದೆ. ಈ ಯಾವ ಜವಾಬ್ದಾರಿಯೂ ನಮಗೆ ಸುಮ್ಮನೇ ಬಂದಿಲ್ಲ. ಒಟ್ಟಂದದಲ್ಲಿ ಸಮಾಜ ನಮಗೆ ನೀಡಿದ ಕಡ್ಡಾಯ ಪಾತ್ರಗಳನ್ನಾಗಿಯೂ ನೋಡಬೇಕಾಗಿಲ್ಲ. ಹೇಗೆ ಒಂದು ಔದ್ಯೋಗಿಕ ಪರಿಸರದಲ್ಲಿ ನಾವು ಭಡ್ತಿಗಾಗಿ ಅತಿಹೆಚ್ಚು ಮುಚ್ಚಟೆಯಿಂದ, ಜತನದಿಂದ ಕೆಲಸ ನಿಭಾಯಿಸಿ ಶಹಬ್ಬಾಶ್ ಗಿಟ್ಟಿಸಿಕೊಳ್ಳುತ್ತೇವೋ ಅದೇ ರೀತಿಯಲ್ಲಿ ಮನೆಯೊಳಗೂ ನಮ್ಮದೇ ಆದ ಭಡ್ತಿ ನಮ್ಮನ್ನು ಕಾಯುತ್ತಿರುತ್ತದೆ. ಅದಕ್ಕೆ ಪ್ರತಿಫಲವಾಗಿ ನಮಗೆ ಹಣ ಸಂಪತ್ತು ಸಿಗದೆ ಹೋಗಬಹುದು ಆದರೆ ಮನೆಯ ಪ್ರತಿ ಸದಸ್ಯರ ನೆಮ್ಮದಿ, ತನ್ಮೂಲಕ ದೊರೆಯುವ ಆರೋಗ್ಯ, ಆ ಮೂಲಕ ಒದಗಬಲ್ಲ ಶಾಂತಿ ಸಮಾಧಾನಗಳು ಹೆಣ್ಣನ್ನು ಕಾಪಿಡಬಲ್ಲವು. ಮತ್ತೆ ಮತ್ತೆ ನೆನಪಾಗುವುದು ’ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು, ಹರು?ಕ್ಕಿದೆ ದಾರಿ’ – ಎನ್ನುವ ಡಿ.ವಿ.ಜಿ.
ನಮ್ಮ ಮಹಾನ್ ಗ್ರಂಥಗಳೂ ಕಟ್ಟಿಕೊಡುವ ಚಿತ್ರಣಗಳು ಇಂಥವೇ ತಾನೆ? ಬದುಕಿನುದ್ದಕ್ಕೂ ತನ್ನ ಮಮತೆಯಿಂದ ಮಕ್ಕಳನ್ನು ಒಗ್ಗಟ್ಟಾಗಿರಿಸಿಕೊಂಡ ಹೋರಾಟದ ಪ್ರತಿಮೂರ್ತಿಯಾದ ಕುಂತಿ, ಅಣ್ಣ ಅತ್ತಿಗೆಯರ ಜೊತೆ ಕಾಡಿಗೆ ಹೊರಟ ಗಂಡನನ್ನು ತಡೆಯದೆ ಮೌನಿಯಾದ ಮಹಾತ್ಯಾಗಿ ಊರ್ಮಿಳೆ, ಆತ್ಮಸಮರ್ಪಣಾ ಭಾವದ ಸಂದೇಶ ಕೊಡುವ ರಾಧೆ… ಪ್ರತಿ ಪಾತ್ರಗಳೂ ಕೂಡಾ ಅದ್ಭುತವಾದ ಸಂದೇಶ ಸಾರುತ್ತವೆ. ಮಾದ್ರಿಯ ಮಕ್ಕಳೆಂದು ಕುಂತಿ ನಕುಲ ಸಹದೇವರನ್ನು
ಪ್ರತ್ಯೇಕಿಸಲಿಲ್ಲ: ಗಂಡ ಮಡಿದನೆಂದು ಸಹಗಮನ ಮಾಡುವುದೋ ಜೀವನದಲ್ಲಿ ಆಸಕ್ತಿಯನ್ನೇ ಕಳೆದುಕೊಂಡು ಹತಾಶಳಾಗುವುದೋ ಅವಳಿಗೆ ಸಾಧ್ಯವಿರಲಿಲ್ಲ. ಅವಳು ಪೃಥೆ. ಎಲ್ಲ ದುಗುಡ ದುಮ್ಮಾನಗಳನ್ನೂ ಚಿಂತೆಗಳನ್ನೂ ಮೆಟ್ಟಿ ನಿಂತು ಬದುಕಿದ ದಿಟ್ಟೆ. ಸ್ತ್ರೀವಾದದ ನೆಲಗಟ್ಟಿನಿಂದ ನೋಡಿದರೆ ಊರ್ಮಿಳೆ ಶೋಷಿತೆಯೇ ಇರಬಹುದು. ಆದರೂ ರಾವಣನ ಮಗನಾದ ಇಂದ್ರಜಿತುವನ್ನು ಕೊಲ್ಲಬೇಕಾದರೆ ಹನ್ನೆರಡು ವ? ಅನ್ನಾಹಾರ, ನಿದ್ರೆ, ಮೈಥುನಗಳಿಂದ ದೂರವಿದ್ದವನಾಗಿರಬೇಕಿತ್ತು. ಅವನ ವಿಜಯಕ್ಕೆ ಊರ್ಮಿಳೆಯೆ ಬೆಂಗಾವಲು ಎಂಬುದರಲ್ಲಿ ಅನುಮಾನವಿದೆಯೆ?
ದೇಶದ ಆದರ್ಶ ಸ್ತ್ರೀ-ಮಾತೆ
ಸ್ವಾಮಿ ವಿವೇಕಾನಂದರಂತೂ ಸ್ತ್ರೀಯರ ಕುರಿತಾಗಿ ಅದಮ್ಯ ಗೌರವ ಹೊಂದಿದ್ದವರು. “ಮಹಿಳೆಯರ ಸಾಮಾಜಿಕ ಸ್ಥಾನಮಾನದ ವಿ?ಯದಲ್ಲೇ ಆಗಲಿ ಅವರ ವಿವಾಹಿಕ ನೀತಿನಿಯಮಗಳ ವಿ?ಯದಲ್ಲೇ ಆಗಲಿ, ಯಾವುದೇ ಬಗೆಯ ಶಾಸ್ತ್ರವಾಕ್ಯಗಳ ನೆಪದಲ್ಲಿ ಮಧ್ಯೆ ಪ್ರವೇಶಿಸಿ ಶೋಷಿಸುವುದನ್ನು ನಾನು ವಿರೋಧಿಸುತ್ತೇನೆ. ಹಿಂದುಳಿದ ವರ್ಗಗಳ ಹಾಗೂ ಜಾತಿಗಳ ಜನರು ಹೇಗೋ ಹಾಗೆಯೆ ಮಹಿಳೆಯರಿಗೂ ಸಂಸ್ಕೃತ ವಿದ್ಯಾಭ್ಯಾಸ ದೊರಕಬೇಕು. ತನ್ಮೂಲಕ ಅವರೂ ಸನಾತನ ಆಧ್ಯಾತ್ಮಿಕ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಆ ಆಧ್ಯಾತ್ಮಿಕ ಆದರ್ಶಗಳನ್ನು ಅನು?ನಕ್ಕೆ ತರಲು ಪ್ರಯತ್ನಿಸಬೇಕು. ಹೀಗೆ ತಾವು ಪಡೆದುಕೊಂಡ ಜ್ಞಾನದ ಬೆಳಕಿನಿಂದ ತಮ್ಮ ಕೊರತೆಗಳನ್ನು, ಆವಶ್ಯಕತೆಗಳನ್ನು ಅರ್ಥಮಾಡಿಕೊಂಡು ತಮ್ಮ ಸ್ಥಾನಮಾನದ ಸಮಸ್ಯೆಯನ್ನು ತಾವೇ ಪರಿಹರಿಸಿಕೊಳ್ಳಲು ಭಾರತೀಯ ಮಹಿಳೆಯರು ಸಮರ್ಥರಾಗುತ್ತಾರೆ.” ಸ್ವಾಮಿಜೀ ಅಭಿಪ್ರಾಯಪಟ್ಟಂತೆ ನಮ್ಮ ದೇಶದ ಆದರ್ಶ ಸ್ತ್ರೀ ಸತಿಯಲ್ಲ, ಮಾತೆ. ಅಂದರೆ ಮನೆಮಂದಿಯನ್ನೆಲ್ಲ ಮಕ್ಕಳಂತೆ ಪೊರೆಯುವವಳು.
ಹೊಸ ತಲೆಮಾರಿನ ಯೋಚನಾಧಾಟಿಯಲ್ಲಿ ಪ್ರತಿಯೊಂದನ್ನೂ ಪ್ರಶ್ನಿಸುವ ಮನೋಭಾವವೊಂದು ಬೆಳೆದು ಹೆಮ್ಮರವಾಗಿದೆ. ’ಇದನ್ನು ನಾನೇ ಏಕೆ ಮಾಡಬೇಕು’ ಎನ್ನುವುದು. ಮನೆಯ ವಿಚಾರಕ್ಕೆ ಬಂದಾಗ ಈ ಪ್ರಶ್ನೆಯನ್ನು ಬಿಟ್ಟ? ನಾವು ನೆಮ್ಮದಿಯಾಗಿರುತ್ತೇವೆ. ನಮ್ಮ ಕುಟುಂಬವೂ ಸಂತೋ?ವಾಗಿರುತ್ತದೆ. “ನನ್ನ ತಾಯಿಯ ಜಗತ್ತು ಮನೆ, ಮಕ್ಕಳು, ಸಂಸಾರದ ಶ್ರೇಯಸ್ಸು – ಅ?ಕ್ಕೆ ಸೀಮಿತ. ಆ ಮಿತಿಯೊಳಗೇ ಅವರು ಎಲ್ಲರ ಸೇವೆ ಮಾಡಿದರು. ಅದರಲ್ಲಿ ತ್ಯಾಗವಿತ್ತು, ಭಕ್ತಿಯಿತ್ತು, ನಿ?ಯಿತ್ತು. ನಿಮ್ಮ ಚಟುವಟಿಕೆಯ ಕಾರ್ಯಕ್ಷೇತ್ರ ಎ? ದೊಡ್ಡದಾಗಿರಲಿ, ಸಣ್ಣದಾಗಿರಲಿ, ಬದುಕು ನಿಮಗೆ ಕೊಟ್ಟಿರುವಂತಹ ಕರ್ತವ್ಯದಲ್ಲಿ ಗಣನೆಗೆ ಬರುವುದು ನೀವು ಅದರಲ್ಲಿ ತೋರಿಸುವ ಬದ್ಧತೆಯೇ ಆಗಿದೆ. ಇದೇ ನಾನು ನನ್ನ ತಾಯಿಯ ವ್ಯಕ್ತಿತ್ವದಿಂದ ಕಲಿತ ಪಾಠ” – ಎನ್ನುತ್ತಾರೆ ಅಬ್ದುಲ್ ಕಲಾಂ.
ಈ ಪಾಠವೊಂದೇ ನಮ್ಮನ್ನು ಬದುಕಿನಲ್ಲಿ ಮೇಲಕ್ಕೇರಿಸಬಲ್ಲದು.
ಪ್ರಸ್ತುತ ಕಾಲಮಾನದಲ್ಲಿ ಮಹಿಳಾವಾದಿಗಳು ಸ್ತ್ರೀಯನ್ನು ಶೋಷಿತಳೆಂದೇ ಬಿಂಬಿಸಲು ಹರ ಸಾಹಸ ಪಡುತ್ತಾರೆ. ಅದು ಸ್ವಲ್ಪ ಮಟ್ಟಿಗೆ ನಿಜವಾದರೂ ಆಕೆಯ ತ್ಯಾಗ ಒಂದು ಕುಟುಂಬಕ್ಕೆ ಸದೃಢ ಬುನಾದಿಯನ್ನು ನೀಡಿ ತಮ್ಮ ಪರಿವಾರದ ಸರ್ವರ ಏಳಿಗೆಗೆ ಕರಣೀಭೂತವಾದ ಅಂಶವನ್ನು ಕಡೆಗಣಿಸಲಾಗದು. ಇಂದಿನ ನವಪೀಳಿಗೆ ಅನುಭವಿಸುತ್ತಿರುವ ಮಾನಸಿಕ ಖಿನ್ನತೆಗೆ ಪರಿಹಾರವೆಂದರೆ ಅಂತಹ ವಾತ್ಸಲ್ಯಮಯಿ ತಾಯಿಯ ಅವಶ್ಯಕತೆ. ಲೇಖನ ಚೆನ್ನಾಗಿದೆ. ಅಭಿನಂದನೆಗಳು.
ಈ ಲೇಖನ ತುಂಬಾ ಚೆನ್ನಾಗಿದೆ. ಅಭಿನಂದನೆಗಳು.