ಒಂದೊಮ್ಮೆ ಹರ್ಷನ ಆಧಿಪತ್ಯಕ್ಕಾಗಿ ಹಂಬಲಿಸಿದ್ದ ಪ್ರಜೆಗಳೇ ಈಗ ಅದು ಯಾವಾಗ ಅಂತ್ಯಗೊಂಡೀತು ಎಂದು ಎದುರುನೋಡತೊಡಗಿದ್ದರು.
ಗೋಡೆಯಲ್ಲಿದ್ದ ಸಣ್ಣ ರಂಧ್ರದ ಮೂಲಕ ಬರುತ್ತಿದ್ದ ಸೂರ್ಯಕಿರಣಗಳನ್ನು ಗಮನಿಸುತ್ತ ಕುಳಿತಿದ್ದ, ಹರ್ಷದೇವ. ಒಂದು ಸಣ್ಣ ಕಿರಣ ಅದೆ? ಬೆಳಕನ್ನು ಪಸರಿಸುತ್ತದೆ – ಎಂದು ವಿಸ್ಮಯಗೊಳ್ಳುತ್ತಿದ್ದ. ಸಜ್ಜನಿಕೆ ತುಂಬಿದ ಮನು?ರೂ ಈ ಕಿರಣಗಳಂತೆ ಎನ್ನಬಹುದೆ? ಒಬ್ಬ ಒಳ್ಳೆಯ ವ್ಯಕ್ತಿ ತನ್ನ ಸುತ್ತಲೂ ಇದ್ದವರ ಬದುಕಿನಲ್ಲಿ ಬೆಳಕನ್ನು ಹರಡುತ್ತಾನೆ. ಅಂತಹ ವ್ಯಕ್ತಿ ರಾಜನಾಗಿದ್ದಲ್ಲಿ ಆ ರಾಜ್ಯವೆಲ್ಲ ನೆಮ್ಮದಿಯಿಂದ ಇದ್ದೀತು.
ಈ ಜಾಡಿನ ಆಲೋಚನೆಯಿಂದ ಹರ್ಷದೇವ ಖಿನ್ನನಾದ. ಅಂತಹ ಸಾತ್ತ್ವಿಕ ಸ್ವಭಾವದ ರಾಜನು ಎಲ್ಲರಿಗೂ ಸಿಗಬೇಕಲ್ಲ! ಅಯಾಚಿತವಾಗಿ ಲಭಿಸಿದ ಅದ್ಭುತ ಅವಕಾಶವನ್ನು ಕಳೆದುಕೊಂಡವರದೂ ಒಂದು ಬದುಕೆ?
ತನ್ನ ಬದುಕು ಆರಂಭವಾದ ಬಗೆ, ಅನಂತರ ಬಂದ ಏನೇನೊ ತಿರುವುಗಳು -ಎಲ್ಲವೂ ಕೌತುಕಕರವೆನಿಸಿತು. ಇದೆಲ್ಲ ಹೇಗೆ ಮುಕ್ತಾಯಗೊಂಡೀತು?
ಒಂದೊಮ್ಮೆ ಪ್ರಜೆಗಳೇ ತನಗೆ ನೀರಾಜನವನ್ನೆತ್ತಿ ರಾಜನನ್ನಾಗಿ ಮಾಡಿದ್ದರು. ಈಗ ಅದೇ ಪ್ರಜೆಗಳು ತನಗೆ ದಂಡನೆ ನೀಡಲು ಆತುರರಾಗಿದ್ದಾರೆ. ತನಗೆ ಯಾವುದೇ ಆಧಾರ ಇಲ್ಲದಂತಾಗಿದೆ.
ಹಿಂದೆಯಾದರೆ ತನ್ನ ಕಣ್ಸನ್ನೆಯನ್ನೇ ಜನರು ಆಜ್ಞೆಯಾಗಿ ಭಾವಿಸುತ್ತಿದ್ದರು. ತನ್ನ ಒಂದು ಮುಗುಳ್ನಗೆಗಾಗಿ ಹಾತೊರೆಯುತ್ತಿದ್ದರು. ಈಗ ತಾನು ಎಲ್ಲಿ ಆಸರೆ ಕೋರುವೆನೋ ಎಂದು ಬಾಗಿಲನ್ನು ಮುಚ್ಚಿಕೊಳ್ಳುತ್ತಾರೆ. ಒಂದು ಹೆಜ್ಜೆ ಸಪ್ಪುಳ ಕೇಳಿದರೂ ಸಾವು ಬಳಿಸಾರುತ್ತಿದೆ ಎನ್ನಿಸುತ್ತದೆ. ನಿಜವಾಗಿ ದೇವರೆಂಬವನು ಇದ್ದರೆ ಹೀಗೆ ಆಗುತ್ತಿತ್ತೆ?
ತನ್ನ ಪೂರ್ವಿಕರು ತನಗೆ ವಿಧಿಸಿದ್ದ ದಾರಿಯಿಂದ ಪಕ್ಕಕ್ಕೆ ಸರಿದು ಸ್ವಧರ್ಮವನ್ನು ಬಿಟ್ಟು ಯಾವುದೊ ಅನ್ಯಮತದ ಮೋಹಕ್ಕೆ ಒಳಗಾಗಿ ಮಾಡಬಾರದ ಘೋರಕೃತ್ಯಗಳನ್ನೆಲ್ಲ ಮಾಡಿದೆ. ಎಲ್ಲವೂ ತನಗೆ ಅನುಕೂಲಕರವಾಗಿದ್ದಾಗ ಭಗವಂತನ ನೆನಪೇ ಆಗುತ್ತಿರಲಿಲ್ಲ. ಆದರೆ ಈಗ ಎಲ್ಲವೂ ತನಗೆ ವ್ಯತಿರಿಕ್ತವಾಗಿ ನಡೆಯುತ್ತಿರುವಾಗ, ತಾನು ಇಲ್ಲವೇ ಇಲ್ಲವೆಂಬಂತೆ ಬದುಕೇ ಕೈಜಾರಿಹೋಗುತ್ತಿರುವಾಗ ಚಿಂತೆ ಬಾಧಿಸುತ್ತಿದೆ. ತಾಳ್ಮೆಯಿಂದ ಯೋಚಿಸುವಾಗ – ತನ್ನ ಬದುಕು ಎಂದಾದರೂ ತನ್ನ ಹಿಡಿತದಲ್ಲಿ ಇದ್ದಿತೆ? ಹಾಗೆ ಇದ್ದಿತೆಂದು ತಾನು ಭ್ರಮಿಸಿದ್ದೆನ?! ಯಾವುದರಲ್ಲಿಯೂ ತನ್ನ ಪ್ರಮೇಯ ಇರಲೇ ಇಲ್ಲ. ಅತಿಯಾದ ಅಹಂಕಾರದಿಂದ ತಾನು ಮೈಮರೆತಿದ್ದೆ. ಈಗ ಕಣ್ಣನ್ನು ಮುಸುಕಿದ್ದ ಪೊರೆ ಕಳಚಿದೆ, ನಿಜದ ಅರಿವು ಆಗತೆಡಗಿದೆ.
ಹ?ದೇವನು ಸುತ್ತಲೂ ಕಣ್ಣಾಡಿಸಿದ. ಎಲ್ಲಕಡೆ ದನಗಳ ಉಚ್ಛಿ?ಗಳೂ ಇತರ ಗಲೀಜುಗಳೂ ತುಂಬಿ ದುರ್ವಾಸನೆ ಹರಡಿತ್ತು.
ಹಾಗೆ ನೋಡಿದರೆ ತಾನು ಮೊದಲು ಇದ್ದದ್ದೇ ಇಂತಹ ಸ್ಥಿತಿಯಲ್ಲಿ. ಅನಂತರ ಸಿಂಹಾಸನಸ್ಥನಾದೆ. ಈಗ ಹಿಂದಿನ ಸ್ಥಿತಿಗೇ ಮರಳಿದ್ದೇನೆ.
ಆದರೆ ಅಂದಿಗೂ ಇಂದಿಗೂ ವ್ಯತ್ಯಾಸವಿದೆ. ಅಂದು ನನ್ನ ಹೀನಸ್ಥಿತಿಯನ್ನು ನೀಗಿಕೊಂಡು ಅಂಧಕಾರವನ್ನು ಹಿಂದಿಕ್ಕಿ ರಾಜಪಟ್ಟವನ್ನು ಏರೀಯೇನೆಂಬ ಆಕಾಂಕ್ಷೆ ಇದ್ದಿತು. ಈಗಲಾದರೋ ಮರಣದ ವಿನಾ ಬೇರಾವ ಭವಿ?ವೂ ತೋರುತ್ತಿಲ್ಲ.
ಸ್ವಲ್ಪ ಆಚೆಗೆ ಒಂದು ಬೆಕ್ಕು ಇಲಿಯೊಂದನ್ನು ಬೆನ್ನಟ್ಟಿರುವುದು ಕಂಡಿತು.
ಬದುಕೆಂದರೆ ಇಷ್ಟೇನೆ? ಒಬ್ಬರಿಗೆ ಕ್ರೀಡೆ; ಇನ್ನೊಬ್ಬರಿಗೆ ಪ್ರಾಣಸಂಕಟ.
* * *
ಅದು ಲೌಕಿಕಾಬ್ದ 4100ನೇ ವರ್ಷ (ಸುಮಾರು ಕ್ರಿ.ಶ. 1101). ಭಾದ್ರಪದ ಶುಕ್ಲಪಕ್ಷ. ಇಲಿಯನ್ನು ಬೆಕ್ಕು ಬೆಂಬತ್ತಿದಂತೆ ಹರ್ಷದೇವನನ್ನು ರಾಜ್ಯದಿಂದ ಉಚ್ಛಾಟಿಸಲು ಉಚ್ಛಲನು ಪ್ರಯತ್ನಶೀಲನಾಗಿದ್ದ. ಇಡೀ ದೇಶವೆಲ್ಲ ಸಂಭ್ರಮಮಯವಾಗಿದ್ದಿತು.
ಆಗ್ಗೆ – ಸುಮಾರು ನೂರು ವರ್ಷ ಹಿಂದೆ – ಡಿದ್ದಾದೇವಿಯ ಮರಣದ ನಂತರ ಯುವರಾಜನಾಗಿದ್ದ ಸಂಗ್ರಾಮನು ರಾಜನಾಗಿ ಅಭಿಷಿಕ್ತನಾಗಿದ್ದ. ತುಂಗನ ನಿರಂಕುಶತೆ ಮುಂದುವರಿದಿದ್ದರೂ ರಾಜ್ಯದಲ್ಲಿ ಅರಾಜಕತೆಯನ್ನು ಇಚ್ಛಿಸದ ಸಂಗ್ರಾಮರಾಜನು ತುಂಗನನ್ನು ಇರುಸುಮುರುಸುಗೊಳಿಸದೆ ಎಚ್ಚರದಿಂದಿದ್ದ.
ಭಾರತದಲ್ಲಿ ತುರು?ರ ಪ್ರಭಾವ ಹರಡುತ್ತಿದ್ದ ದಿನಗಳು ಅವು.
ಮೂರನೇ ಉಮರ್ ಖಲೀಫನ ಕಾಲದಿಂದಲೇ (ಕ್ರಿ.ಶ. 633-44) ಅರಬ್ಬೀ ಆಕ್ರಮಕರ ಗೃಧ್ರ ದೃಷ್ಟಿ, ಭಾರತದಲ್ಲಿದ್ದ ಸಂಪತ್ತಿನ ಮೇಲೆ ಬಿದ್ದಿತ್ತು. ಕ್ರಿ.ಶ. 644ರಲ್ಲಿ ಅಬ್ದುರ್ ರಹಮಾನ್ ಗಾಂಧಾರದೇಶದ ಮೇಲೆ ದಾಳಿ ನಡೆಸಿ ಸುಮಾರು ಸಾವಿರ ಮಂದಿಯನ್ನು ಇಸ್ಲಾಮಿಗೆ ಮತಾಂತರಿಸಿದ್ದ. ಕ್ರಿ.ಶ. 712ರ ಸುಮಾರಿನಲ್ಲಿ ಆಗಿನ್ನೂ ಯುವ ವಯಸ್ಸಿನ ಮಹಮ್ಮದ್-ಬಿನ್-ಕಾಸಿಮ್ ಸಿಂಧು ರಾಜ ದಾಹಿರನನ್ನು ಪರಾಭವಗೊಳಿಸಿ ಭಾರತದ ಮೇಲೆ ದಾಂಧಲೆ ನಡೆಸತೊಡಗಿದ. ಅವನ ಕ್ರೌರ್ಯಕ್ಕೆ ಹೆದರಿ ಅನೇಕ ರಾಜರು ಇಸ್ಲಾಮೀಕರಣಗೊಂಡರು. ಅನಂತರ ಕ್ರಿ.ಶ. 11ನೇ ಶತಮಾನದ ಆರಂಭದಲ್ಲಿ ಘಜನಿ ಮಹಮ್ಮದನು 17 ಬಾರಿ ದಂಡಯಾತ್ರೆ ನಡೆಸಿದುದು ಸುಪರಿಚಿತ. ಕ್ರಿ.ಶ. 1800ರಲ್ಲಿ ಘಜನಿ ಕಶ್ಮೀರದ ಮೇಲೂ ದೃಷ್ಟಿಹಾಯಿಸಿದ. ಆದರೆ ಶ್ಯಾಹೀ ರಾಜ ತ್ರಿಲೋಚನಪಾಲನು ಹಿಮಾಲಯ ಪ್ರಾಂತದಲ್ಲಿ ಹೆಬ್ಬಂಡೆಯಂತೆ ನಿಂತುದರಿಂದ ಘಜನಿ ವಿಫಲನಾದ. ಆ ಸನ್ನಿವೇಶದಲ್ಲಿ ಸಂಗ್ರಾಮರಾಜನೂ ದೂರದೃಷ್ಟಿಯಿಂದ ತ್ರಿಲೋಚನಪಾಲನನ್ನು ಬೆಂಬಲಿಸಿದ್ದ. ಅವನಿಂದಾದ ಒಂದು ಲೋಪವೆಂದರೆ ಮುಸ್ಲಿಮರ ಸೇನೆಯನ್ನು ಎದುರಿಸಲು ತುಂಗನನ್ನು ಕಳಿಸಿದುದು. ಲೋಲಾಪ್ತಿಯ ಸ್ವಭಾವದವನಾಗಿದ್ದ ತುಂಗನು ಶ್ಯಾಹೀ ರಾಜನ ಆತಿಥ್ಯದಲ್ಲಿ ಕಾಲಯಾಪನೆ ಮಾಡುತ್ತ ಇದ್ದುಬಿಟ್ಟ. ಕಡೆಗೆ ನಿರ್ಣಾಯಕ ಸಮಯ ಬಂದೇಬಿಟ್ಟಿತು. ಅಗಾಧ ತುರುಷ್ಕ ಸೇನೆಯನ್ನು ಕಂಡೊಡನೆ ತುಂಗನು ಯುದ್ಧರಂಗದಿಂದ ತನ್ನ ಸೇನೆಯೊಡನೆ ಪಲಾಯನ ಮಾಡಿದ. ಕಶ್ಮೀರ ಸೇನೆ ಓಡಿ ಹೋದುದರಿಂದಾಗಿ ಶ್ಯಾಹೀರಾಜನ ಸೇನೆಯೂ ಯುದ್ಧಭೂಮಿಯಿಂದ ವಿಮುಖವಾಗಿ ಹೊರಟುಹೋಯಿತು.
ಆದರೆ ಜಯಸಿಂಹ, ಶ್ರೀವರ್ಧನ, ಸಂಗ್ರಾಮ ದಾಮರ ವಂಶಜ ವಿಭ್ರಮಾರ್ಕ – ಇವರು ತುಂಬ ಪರಾಕ್ರಮದಿಂದ ತುರು? ಸೇನೆಯನ್ನು ಎದುರಿಸಿದರು. ಹೀಗೆ ಸ್ವದೇಶದ ಗೌರವವನ್ನು ಉಳಿಸಿದರು. ಇಂತಹವರ ನೆರವು ತ್ರಿಲೋಚನಪಾಲನಿಗೆ ದೊರೆತಿದ್ದಿದ್ದರೆ ದೇಶದ ಇತಿಹಾಸ ಬೇರೆಯದೇ ತಿರುವನ್ನು ಪಡೆಯಬಹುದಿತ್ತು.
ಶ್ಯಾಹೀ ಮಹಾರಾಜ ತ್ರಿಲೋಚನಪಾಲನ ಪರಾಕ್ರಮದ ಮುಂದೆ ತುರು? ಸೇನೆ ನಿಲ್ಲಲಾಗಲಿಲ್ಲ. ಮಳೆಯನ್ನು ಬಂಧಿಸಿದ್ದ ವೃತ್ರಾಸುರನನ್ನು ಇಂದ್ರನು ಸಂಹರಿಸಿದಂತೆ ತ್ರಿಲೋಚನಪಾಲನು ಮ್ಲೇಚ್ಛರನ್ನು ಹಿಮ್ಮೆಟ್ಟಿಸಿದ; ಪ್ರಳಯತಾಂಡವದಂತೆ ಯುದ್ಧಭೂಮಿಯಲ್ಲಿ ವಿಜೃಂಭಿಸಿದ. ಅದರೆದುರಿಗೆ ಶತ್ರುಗಳ ವ್ಯೂಹವು ಭಗ್ನಗೊಂಡಿತು. ಆದರೆ ಓರ್ವನು ಏಕಾಕಿಯಾಗಿ ಪ್ರವಾಹವನ್ನು ಎ?ಕಾಲ ದಿಗ್ಬಂಧಿಸಬಹುದು? ಈಗ ಹೇಗೋ ಉಳಿದುಕೊಂಡರೆ ಮುಂದೆ ಸಮಯಾನುಕೂಲ ಏರ್ಪಟ್ಟಾಗ ರಾಜ್ಯವನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲಾದೀತೆಂದು ಚಿಂತಿಸಿ ತ್ರಿಲೋಚನಪಾಲನು ಕದನರಂಗದಿಂದ ನಿರ್ಗಮಿಸಿದ.
ಆದರೂ ತ್ರಿಲೋಚನನ ಪರಾಕ್ರಮವನ್ನು ಗಮನಿಸಿ ಘಜನಿ ಮಹಮ್ಮದನು ತೌಷೀ ನದಿಯಿಂದ ಮುಂದೆ ಸಾಗಲಿಲ್ಲ. ಕಶ್ಮೀರದ ಪ್ರಾಂಗಣದಲ್ಲಿಯೆ ಇಂತಹ ಅಸಮಾನ ವೀರರಿರುವಾಗ ಅಲ್ಲಿಂದಾಚೆಗೆ ದುರ್ಭೇದ್ಯ ಕೋಟೆಗಳಂತಿರುವ ಪರ್ವತಾವಳಿ ಪ್ರಾಂತಗಳಲ್ಲಿ ಇನ್ನೆಂತಹ ವೀರರು ಇರಬಹುದು- ಎಂದು ಚಿಂತಿಸಿ ತನಗೆ ವಶವಾಗಿದ್ದ ಭಾಗದಲ್ಲಿದ್ದ ಸನಾತನಧರ್ಮಾನುಯಾಯಿಗಳನ್ನು ಇಸ್ಲಾಮಿಗೆ ಪರಿವರ್ತಿಸಿ ಅಲ್ಲಿಂದ ಹಿಮ್ಮುಖನಾದ.
ಅಲ್ಲಿಂದ ಎರಡು ವರ್ಷ ಕಳೆದ ಮೇಲೆ ಘಜನಿ ಇನ್ನೊಮ್ಮೆ ಕಶ್ಮೀರದ ಮೇಲೆ ಆಕ್ರಮಣ ನಡೆಸಲು ಮುಂದಾದ. ಆದರೆ ಅವನ ಪ್ರಯತ್ನವನ್ನು ಲೋಹಾರ ರಾಜನು ವಿಫಲಗೊಳಿಸಿದ. ಹೀಗೆ ಈಗಲೂ ಘಜನಿಯ ಕೋರಿಕೆ ಈಡೇರಲಿಲ್ಲ.
ಆದರೆ ತಾನು ಸಂಚರಿಸಿದ್ದ ಕಡೆಗಳಲ್ಲಿ ಘಜನಿಯು ನೆಲೆಗೊಳಿಸಿದ್ದ ಅವನ ಅನುಚರರು ಸ್ಥಳೀಯರನ್ನುಮತಾಂತರಿಸುವ ಕಾರ್ಯಸರಣಿಯನ್ನು ಮುಂದುವರಿಸಿದರು; ಎಷ್ಟು ದೇವಾಲಯಗಳನ್ನು ಕೊಳ್ಳೆಹೊಡೆದರು.
ಸಂಯಮಿಯಾದ ಸಂಗ್ರಾಮರಾಜನು ಯುದ್ಧದಿಂದ ನಿರ್ಗಮಿಸಿದ್ದ ತುಂಗನನ್ನು ಆಕ್ಷೇಪಿಸಲಿಲ್ಲ. ಲೌಕಿಕಾಬ್ದ 4100ರಲ್ಲಿ (ಕ್ರಿ.ಶ. 1028) ಆಷಾಢ ಪಾಡ್ಯಮಿಯಂದು ಸಂಗ್ರಾಮರಾಜನು ಮೃತಿ ಹೊಂದಿದ. ಅನಂತರ ಅವನ ಮಗ ಹರಿರಾಜನು ಪಟ್ಟಕ್ಕೆ ಏರಿದ. ಆದರೆ ಕೇವಲ ಇಪ್ಪತ್ತೆರಡೇ ದಿನಗಳಾಗಿದ್ದಾಗ ಹರಿರಾಜನೂ ಮರಣ ಹೊಂದಲಾಗಿ ಅವನ ತಮ್ಮನಾದ ಕಿರಿವಯಸ್ಸಿನ ಅನಂತನಿಗೆ ಅಭಿಷೇಕ ಮಾಡಲಾಯಿತು. ಅವನಾದರೋ ಸಂಸ್ಕಾರಹೀನನಾಗಿದ್ದು ಅಹಂಕಾರವವಶನಾಗಿದ್ದ. ಅವನ ಪತ್ನಿ ಸೂರ್ಯಮತಿ ಉದಾತ್ತಸ್ವಭಾವದವಳು. ಆಕೆ ಗೌರೀಶ್ವರಮಂದಿರವನ್ನೂ, ವಿತಸ್ತಾನದಿಯ ದಡದಲ್ಲಿ ಸುಭಟ ಮಠವನ್ನೂ, ಬೇರೆಡೆ ವಿಜಯೇಶ ಮತ್ತು ಅಮರೇಶ ಮಠಗಳನ್ನೂ ನಿರ್ಮಿಸಿದಳು. (ಈಗಲೂ ಅಂಬುರ್ವೇರ್ ಪ್ರಾಂತದಲ್ಲಿರುವ ದೇವಾಲಯಗಳು ಆಕೆ ನಿರ್ಮಿಸಿದ್ದ ಮಠಗಳ ಅವಶೇಷಗಳೇ.)
ಅನಂತನು ತನ್ನ ಅನಿಯಂತ್ರಣದಿಂದ ಮಾಡಿದ್ದ ಸಾಲಗಳನ್ನು ಸೂರ್ಯಮತಿಯು ತನ್ನ ಒಡವೆ ವಸ್ತುಗಳನ್ನು ಮಾರಿ ತೀರಿಸಿದಳು, ಕಶ್ಮೀರದ ಗೌರವವನ್ನು ಕಾಪಾಡಿದಳು. ಆಕೆಯ ಮುತ್ಸದ್ಧಿತನವನ್ನು ಗಮನಿಸಿದ ರಾಜನು ಆಕೆಯ ಸೂಚನೆಗಳನ್ನು ಅನುಸರಿಸತೊಡಗಿದ. ಹೀಗೆ ಕಶ್ಮೀರದ ಸ್ಥಿತಿ ಮತ್ತೆ ಉನ್ಮುಖವಾಯಿತು. ಆದರೆ ಇದು ಹೆಚ್ಚುಕಾಲ ಮುಂದುವರಿಯಲಿಲ್ಲ. ಇದಕ್ಕೆ ಕಾರಣವೆಂದರೆ ತನ್ನ ಪುತ್ರ ಕಲಶನ ಬಗೆಗೆ ರಾಣಿಯು ಬೆಳೆಸಿಕೊಂಡಿದ್ದ ಅಂಧಪ್ರೀತಿ. ಲೌಕಿಕಾಬ್ದ 4039ರಲ್ಲಿ (ಕ್ರಿ.ಶ. 1063) ಕಾರ್ತಿಕಮಾಸದಲ್ಲಿ ಕಲಶನನ್ನು ಸಿಂಹಾಸನಸ್ಥನಾಗಿಸಿದಳು. ಕಲಶನ ಓರಗೆಯವರು ದುಷ್ಟವೃತ್ತಿಯವರಾಗಿದ್ದು ಅವನನ್ನು ದಾರಿತಪ್ಪಿಸಿದರು. ಅವನು ಲಂಪಟನಾಗಿ ಬೆಳೆದ, ಪ್ರಜೆಗಳನ್ನೂ ಹಿಂಸಿಸತೊಡಗಿದ. ಸ್ತ್ರೀಯರೂ ಅರಕ್ಷಿತರಾದರು. ಕಲಶನ ದುರ್ವರ್ತನೆಯನ್ನು ಗಮನಿಸಿ ಅನಂತನು ಅವನನ್ನು ದಂಡಿಸಬಯಸಿದ. ಆದರೆ ರಾಣಿಯೂ ಕಲಶನ ಒಡನಾಡಿಗಳೂ ಪ್ರತಿರೋಧಿಸಿದರು.
ಸನ್ನಿವೇಶದಿಂದ ಬೇಸರಿಸಿ ಅನಂತನು ರಾಜಧಾನಿಯನ್ನು ತೊರೆದು ಹೊರಟುಹೋದ. ಸೂರ್ಯವಂತಿಯೂ ಅವನನ್ನು ಅನುಸರಿಸಿದಳು. ರಾಜದಂಪತಿಗಳೊಡನೆ ತಾನೂ ಹೊರಬಿದ್ದ ಕಲಶಪುತ್ರ ಹ?ದೇವನು ರಾಜ್ಯವ್ಯವಹಾರದಲ್ಲಿ ಬಂಧುತ್ವದ ಪರಿಗಣನೆಗಳು ಸಂಗತವಲ್ಲವೆಂಬುದನ್ನು ಆ ವಯಸ್ಸಿಗೇ ಗ್ರಹಿಸಿದ.
4155ರಲ್ಲಿ (ಕ್ರಿ.ಶ. 1079) ಅನಂತನು ವಿಜಯೇಶ್ವರ ಕ್ಷೇತ್ರ ತಲಪಿದ.
ಎಲ್ಲರ ಸದಾಶಯವನ್ನು ಕಳೆದುಕೊಂಡ ಪರಿಣಾಮದ ಅರಿವು ಕಲಶನಿಗೆ ಆಗಲು ತಡವಾಗಲಿಲ್ಲ.
ಕಲಶನು ಸಾಲವೆತ್ತಿ ಸೈನ್ಯವನ್ನು ಒಟ್ಟುಮಾಡಿಕೊಂಡು ತನ್ನ ತಂದೆಯ ಮೇಲೆಯೆ ಸಮರ ನಡೆಸಲು ಸಜ್ಜಾದ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತ ಹರ್ಷದೇವನು ತೂಷ್ಟೀಭಾವದಿಂದಿದ್ದ. ಆದರೆ ತನ್ನ ಮೇಲೆ ತನ್ನ ಮಗನೇ ಯುದ್ಧ ನಡೆಸಲು ಉಜ್ಜುಗಿಸಿದುದನ್ನು ಕಂಡು ಅನಂತನು ಉಗ್ರನಾದ. ಸೂರ್ಯಮತಿಯೂ ವಿಚಲಿತಳಾದಳು; ಹಿತೈಷಿಗಳನ್ನು ಕಲಶನೆಡೆಗೆ ಕಳಿಸಿ ಬುದ್ಧಿವಾದ ಹೇಳಿಸಿದಳು- ಮಹಾರಾಜನ ಪರಾಕ್ರಮದೆದುರು ನಿನ್ನ ದುಸ್ಸಾಹಸ ಕೆಲಸಕ್ಕೆ ಬಾರದು. ಇದುವರೆಗೆ ಅನುಕಂಪದಿಂದಷ್ಟೇ ರಾಜನು ಸೌಮ್ಯವಾಗಿದ್ದ. ನಿನಗೆ ಲಭಿಸಿರುವ ರಾಜ್ಯವನ್ನು ಸಕ್ರಮವಾಗಿ ಪಾಲಿಸುವುದರಲ್ಲ? ನಿನ್ನ ಹಿತವಿದೆ.
ತಾಳ್ಮೆಯಿಂದ ಯೋಚಿಸಿದಾಗ ಕಲಶನಿಗೆ ತಾಯಿಯ ಹಿತವಾದ ಸರಿಯೆನಿಸಿತು.
ತಾತ್ಕಾಲಿಕವಾಗಿ ಯುದ್ಧ ತಪ್ಪಿತು. ಆದರೆ ಕಲಶನು ತಂದೆಯ ನಿಕಟವರ್ತಿಗಳ ಮೇಲೆ ದಾಳಿ ನಡೆಸಿ ಅವರ ಆಸ್ತಿಗಳನ್ನು ಕಬಳಿಸತೊಡಗಿದ. ಇದಾದ ಮೇಲೆ ಅನಂತನು ಸುಮ್ಮನಿರಲಾಗಲಿಲ್ಲ.
ಅದೊಂದು ದಿನ ವಿಜಯಕ್ಷೇತ್ರಕ್ಕೆ ಬರುವಂತೆ ಹ?ದೇವನಿಗೆ ಸೂರ್ಯಮತಿಯಿಂದ ಸಂದೇಶ ಬಂದಿತು.
ಕರ್ಣಾಕರ್ಣಿಕೆಯಾಗಿ ಈ ಸುದ್ದಿ ಕೇಳಿದ ಕಲಶನು ತನ್ನನ್ನು ಹ?ನು ರಾಜ್ಯಭ್ರ?ಗೊಳಿಸುವ ಪ್ರಯತ್ನದಲ್ಲಿ ಇದ್ದಾನೆಂದು ಶಂಕಿಸಿದ. ಆದರೆ ರಾಜನು ತನ್ನ ಮಗನನ್ನು ತಾನೇ ಬಂಧನದಲ್ಲಿರಿಸಿದಲ್ಲಿ ಅದು ಪ್ರಜೆಗಳಿಗೆ ಇ?ವಾದೀತೆ?
ತನ್ನ ಸಂಗಡಿಗರ ಸಲಹೆಯಂತೆ ಕಲಶನು ಹ?ದೇವನ ಪ್ರಸ್ಥಾನವನ್ನು ನಿವಾರಿಸಲೆಳಸಿದ. ಆದರೆ ಹ?ದೇವನು ಚಾಣಾಕ್ಷತೆಯಿಂದ ವಿಜಯಕ್ಷೇತ್ರ ತಲಪಿದುದನ್ನು ತಿಳಿದು ಕಲಶನು ಭಯಗೊಂಡ. ತಂದೆಯ ಬಗೆಗೆ ತನಗೆ ವೈರವಿಲ್ಲವೆಂದು ನಟಿಸತೊಡಗಿದ.
ಅನಂತನ ಶಂಕೆಯು ನಿರಾಧಾರವಾಗಿರಲಿಲ್ಲ. ಅವನು ರಹಸ್ಯವಾಗಿ ರಾಜಧಾನಿಯಿಂದ ನಿ?ಮಿಸಿದ ರಾತ್ರಿಯೇ ಅವನಿರುತ್ತಿದ್ದ ಭವನವು ಅಗ್ನಿಗಾಹುತಿಯಾಯಿತು. ಪಹರೆಗಾಗಿ ಇದ್ದ ಅನುಚರರು ವಿ?ಕ್ಕೆ ತುತ್ತಾಗಿದ್ದರು.
ಕಲಶನ ದೌ? ಅಲ್ಲಿಗೆ ಮುಗಿಯಲಿಲ್ಲ. ಒಂದು ರಾತ್ರಿವಿಜಯಕ್ಷೇತ್ರವ?ನ್ನೂ ಭಸ್ಮಗೊಳಿಸಿದ.
ಸೂರ್ಯಮತಿಯ ಅತಿಯಾದ ಪುತ್ರಪ್ರೇಮವೇ ಈ ಎಲ್ಲ ಅನರ್ಥಗಳ ಮೂಲವೆಂದು ಅನಂತನು ಮೂದಲಿಸಿದಾಗ ಅವನನ್ನು ವಿವಾಹವಾಗಿ ಅವನಿಗೆ ಸ್ಥಾನಮಾನ ಕಲ್ಪಿಸಿದವಳೇ ತಾನೆಂದು ಅವಳು ಕರ್ಕಶವಾಗಿ ಮಾತನಾಡಿದಳು. ತಾನು ಇ?ಕಾಲ ಭ್ರಮಾಧೀನನಾಗಿದ್ದೆನೆಂದು ಅನಂತನಿಗೆ ಅನಿಸತೊಡಗಿತು. ನಿಜಕ್ಕೂ ಯಾರೂ ತನ್ನವರಾಗಿರಲಿಲ್ಲವೆಂಬ ಕಟುಸತ್ಯದ ಅರಿವಾಗಿ ಖಿನ್ನಗೊಂಡು ಅಂತರ್ಮುಖಿಯಾದ. ತನ್ನ ವರ್ತನೆ ಹದತಪ್ಪಿತೆಂದು ಸೂರ್ಯಮತಿಗೆ ಅನಿಸತೊಡಗಿತು. ಆದರೆ ಕಾಲ ಮೀರಿತ್ತು.
ನಾನು ಮಾಡಿದ ಪಾಪವನ್ನು ಇಲ್ಲಿಯೇ ಅನುಭವಿಸಿಬಿಡುತ್ತೇನೆ. ಹೀಗಾದರೂ ನನ್ನ ಮುಂದಿನ ಜನ್ಮ ನೆಮ್ಮದಿಯದಾಗಲಿ ಎಂದು ಹೇಳಿದವನೇ ಶೂಲವೊಂದರಿಂದ ತನ್ನನ್ನು ಇರಿದುಕೊಂಡು ಅಸುನೀಗಿದ. ಇದು ಆದದ್ದು ೪೧೫೭ರಲ್ಲಿ (ಕ್ರಿ.ಶ. ೧೦೮೧).
ರಾಣಿಯು ಕುಗ್ಗಿಹೋದಳು. ಆಪ್ತರನ್ನೆಲ್ಲ ಕರೆಯಿಸಿ ತನ್ನಲ್ಲಿದ್ದ ಹಣವನ್ನು ಎಲ್ಲರಿಗೂ ಹಂಚಿದಳು. ಎಲ್ಲರೂ ತನ್ನ ಮೊಮ್ಮಗ ಹ?ದೇವನಿಗೆ ಬೆಂಬಲವಾಗಿ ನಿಲ್ಲಬೇಕೆಂದು ಪರಿಚಾರಕವರ್ಗಕ್ಕೆ ಆದೇಶ ನೀಡಿದಳು. ನಿನ್ನ ತಂದೆಯನ್ನು ಯಾವುದೇ ಕಾರಣಕ್ಕೂ ನಂಬದಿರು. ಈ ರಾಜ್ಯಕ್ಕೆ ನೀನು ಅಧಿಕಾರಿ. ದ್ರೋಹ ಬಗೆಯುವವರಾರನ್ನೂ ಕ್ಷಮಿಸಬೇಡ ಎಂದು ಹ?ದೇವನಿಗೆ ಹೇಳಿದಳು.
ನಡೆದಿದ್ದುದನ್ನೆಲ್ಲ ಮೆಲುಕುಹಾಕುವಾಗ ಕಲಶನನ್ನು ತನ್ನ ತಂದೆಯಿಂದ ದೂರಗೊಳಿಸುವುದರಲ್ಲಿ ಕಲಶನ ಧೂರ್ತ ಜೊತೆಗಾರರದೇ ಮುಖ್ಯ ಪಾತ್ರವಾಗಿತ್ತೆಂದು ಅನಿಸತೊಡಗಿತು. ಆ ಸಂಧಾನಗಳ ಪರಿಣಾಮವಾಗಿಯೆ ತಾನೂ ತನ್ನ ಪತಿಯಿಂದ ಮಾನಸಿಕವಾಗಿ ದೂರಗೊಂಡಿದ್ದೆನೆಂದು ವಿ?ದಿಸಿದಳು. ಮಗನನ್ನು ಸುತ್ತುವರಿದಿದ್ದವರನ್ನು ಶಪಿಸಿ ಸೂರ್ಯಮತಿಯು ಪತಿಯ ಚಿತೆಯನ್ನು ಏರಿ ಪ್ರಾಣತ್ಯಾಗ ಮಾಡಿದಳು.
ಇದುವರೆಗೆ ನಡೆದಿದ್ದ ಕೃತ್ಯಸರಣಿಯು ಮುಂದೆ ಮುಂದಿನ ಇನ್ನ? ಘೋರಗಳಿಗೆ ನಾಂದಿಯಾದೀತೆ? – ಎಂದು ಪ್ರಜೆಗಳು ವಿಹ್ವಲರಾದರು.
* * *
ತಂದೆಯ ಮರಣದ ತರುವಾಯ ಕಲಶನ ಸ್ವಭಾವದಲ್ಲಿ ಮಾರ್ಪಾಡು ಬಂದಿತು. ಅವನು ಧರ್ಮಕಾರ್ಯಗಳಲ್ಲಿ ಆಸಕ್ತಿ ತಳೆದ. ತಾನು ನಾಶ ಮಾಡಿದ್ದ ವಿಜಯಕ್ಷೇತ್ರವನ್ನು ಪುನರ್ನಿರ್ಮಿಸಿದ. ತ್ರಿಪುರೇಶ್ವರದಲ್ಲಿ ಶಿವಮಂದಿರವನ್ನು ಕಟ್ಟಿಸಿದ.
ಇಡೀ ದೇಶದಲ್ಲಿಯೆ ಪಾಂಡಿತ್ಯಕ್ಕೆ ಹೆಸರಾಗಿದ್ದ ಹ?ದೇವನು ಕಲಶನಿಂದ ಅನಾದರಕ್ಕೆ ಈಡಾಗಿದ್ದ ಪಂಡಿತರನ್ನು ಸಂಮಾನಿಸುತ್ತಿದ್ದ. ವಿದೇಶಗಳಿಂದ ಬಂದ ಪಂಡಿತರು ಹ?ನನ್ನು ಭೇಟಿಯಾಗಲು ತವಕಿಸುತ್ತಿದ್ದರು. ಹೀಗೆ ಹ?ನ ಬಗೆಗೆ ಜನಾನುರಾಗ ಬೆಳೆಯುತ್ತಿದ್ದುದನ್ನು ಮಂತ್ರಿಗಳು ಕಲಶನಿಗೆ ತಿಳಿಸುತ್ತಿದ್ದರು. ಕಲಶನು ತುರು? ಸ್ತ್ರೀಯರ ಸಹವಾಸದಲ್ಲಿ ವ್ಯಸ್ತನಾಗಿದ್ದುದು ಹ?ದೇವನನ್ನು ಖಿನ್ನನಾಗಿಸಿತ್ತು.
ರಾಜಪಟ್ಟಕ್ಕೆ ಅನರ್ಹನಾಗಿದ್ದ ಕಲಶನನ್ನು ಉಚ್ಚಾಟಿಸಿ ಹ?ನು ರಾಜ್ಯವನ್ನು ವಹಿಸಿಕೊಳ್ಳಬೇಕೆಂದು ಹಲವರು ನಿಕಟವರ್ತಿಗಳು ಅವನಿಗೆ ಸೂಚಿಸುತ್ತಿದ್ದರೂ ಅದಕ್ಕೆ ಹ?ನು ಲಕ್ಷ್ಯ ಕೊಡಲಿಲ್ಲ. ಸ್ವಭಾವತಃ ಹ?ನಲ್ಲಿ ಆತ್ಮಸ್ಥೈರ್ಯದ ಕೊರತೆಯಿತ್ತು. ರಾಜ್ಯಹಿತದೃಷ್ಟಿಯಿಂದ ತಂದೆಯನ್ನು ಸಂಹರಿಸುವುದು ಪಾಪವೆನಿಸದೆಂದೂ ಹಲವರು ಹ?ನಿಗೆ ಹೇಳತೊಡಗಿದ್ದರು.
ಈ ಬೆಳವಣಿಗೆಗಳನ್ನು ಕಲಶನು ಗಮನಿಸದಿರಲಿಲ್ಲ. ಅವನು ಹ?ನನ್ನು ಕರೆಯಿಸಿ ಹೇಳಿದ: ಹೇಗೂ ನನ್ನ ತರುವಾಯ ನೀನೇ ರಾಜನಾಗುತ್ತೀ, ಅಲ್ಲವೆ? ಜಯವಾನ್ ಪ್ರಾಂತದಲ್ಲಿ ಕಲಶಪುರದ ನಿರ್ಮಾಣ ಮುಗಿದೊಡನೆ ನಾನು ನಿನಗೆ ರಾಜ್ಯವನ್ನು ವಹಿಸಿ ವಾರಾಣಸಿಗೋ ನಂದಿಕ್ಷೇತ್ರಕ್ಕೋ ಹೋಗಲು ಬಯಸಿರುವೆ.
ಹ?ನು ಯಾವುದೇ ಪ್ರತಿಕ್ರಿಯೆ ನೀಡದೆ ತನಗೆ ಅಧಿಕಾರವನ್ನು ವಶಮಾಡಿಕೊಳ್ಳುವ ಉದ್ದೇಶ ವಿಲ್ಲವೆಂದು ಹೇಳಿ ನಿರ್ಗಮಿಸಿದ.
ಆದರೆ ಸಂದೇಹಪ್ರಕೃತಿಯ ಕಲಶನ ಮನಸ್ಸಿನ ಕ್ಷೆಭೆ ತಗ್ಗಲಿಲ್ಲ. ಹ?ನನ್ನು ಬಂಧನದಲ್ಲಿರಿಸುವಂತೆ ಆದೇಶ ನೀಡಿದ. ಆದರೆ ಹ?ನಿಗೆ ಯಾವುದೇ ಹಾನಿ ತಗಲಕೂಡದೆಂದೂ ಆಜ್ಞಾಪಿಸಿದ.
ಬಂಧನದಲ್ಲಿದ್ದ ಹ?ನು ಕಲಶನ ಪಾಪಕೃತ್ಯಗಳೇ ಅವನನ್ನು ಆಹುತಿ ತೆಗೆದುಕೊಳ್ಳದಿರುವುದಿಲ್ಲವೆನ್ನುತ್ತ ಅಂರ್ತಮುಖಿಯಾಗಿದ್ದ.
ರೋಗಗ್ರಸ್ತನಾಗಿ ಉತ್ಕ್ರಮಣ ದಶೆಯಲ್ಲಿದ್ದ ಕಲಶನು ಹ?ನನ್ನು ರಾಜನನ್ನಾಗಿಸಬೇಕೆಂದು ಸೂಚಿಸಿದರೂ ಯಾರೂ ಅವನ ಮಾತಿಗೆ ಬೆಲೆಕೂಡಲಿಲ್ಲ. ಕಲಶನ ದ್ವಿತೀಯಪತ್ನಿಯ ಮಗನಾದ ಉತ್ಕ?ನನ್ನು ಲೋಹಾರದಿಂದ ಕರೆಯಿಸಲಾಯಿತು. ಲೌಕಿಕಾಬ್ದ ೪೧೬೫ರಲ್ಲಿ (ಕ್ರಿ.ಶ. ೧೦೮೯) ಕಲಶನು ಮರಣ ಹೊಂದಿ. ಉತ್ಕ?ನು ಗಾದಿಗೇರಿದ.
ಹ?ನು ಬಂಧನದಲ್ಲಿದ್ದರೂ ಆತನೇ ನಿಜವಾದ ರಾಜನೆಂಬ ಭಾವನೆ ದೇಶದ ಜನರಲ್ಲಿ ವ್ಯಾಪಕವಾಗಿ ಹರಡಿತ್ತು.
ಹ?ನು ಇರುವವರೆಗೆ ತನ್ನ ಮುಂದುವರಿಕೆ ದುಃಸ್ಸಾಧ್ಯವೆಂದರಿತ ಉತ್ಕ?ನು ಹ?ನನ್ನು ವಧಿಸಲು ಸೈನಿಕರನ್ನು ಯೋಜಿಸಿ ಕಳಿಸಿದ.
ಆದರೆ ಇದೇ ವೇಳೆಗೆ ಹ?ನ ಸಂದೇಶದಂತೆ ಸೇನಾಸಮೇತನಾಗಿ ಬಂದ ಹ?ನ ತಮ್ಮ ವಿಜಯಮಲ್ಲನು ಉತ್ಕ?ನ ಸೈನಿಕರನ್ನು ಅಡ್ಡಗಟ್ಟಿದ.
ಇಡೀ ಪ್ರಜಾಸ್ತೋಮದ ಆಕಾಂಕ್ಷೆಯಂತೆ ಹ?ನು ಸಿಂಹಾಸನಗ್ರಹಣ ಮಾಡಿದ.
ಉತ್ಕ?ನು ಆತ್ಮಹತ್ಯೆ ಮಾಡಿಕೊಂಡು ಅವಸಾನ ಹೊಂದಿದ.
* * *
ಪ್ರಜೆಗಳ ಸಹಾನುಭೂತಿ ಇದ್ದ ಹ?ನು ಕಶ್ಮೀರವನ್ನು ಉದಾತ್ತ ರೀತಿಯಲ್ಲಿ ಪಾಲನೆ ಮಾಡತೊಡಗಿದ. ಅವನ ಜನಾಭಿಮುಖ ಧೋರಣೆಗಳಿಂದಾಗಿ ರಾಜ್ಯದಲ್ಲಿ ಯಾಚಕರು-ಭಿಕ್ಷುಕರು ಇಲ್ಲವೆನಿಸಿತು. ಪಂಡಿತರು, ಗಾಯಕರು, ಕಲಾಕಾರರಿಗೆ ರಾಜಾಶ್ರಯದಿಂದಾಗಿ ತಮ್ಮ ನೈಪುಣ್ಯಗಳ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶ ಲಭಿಸಿತ್ತು. ಕಲಶನ ಕಾಲದಲ್ಲಿ ಅವನ ದಾಂಧಲೆಯನ್ನು ತಡೆಯಲಾಗದೆ ಕರ್ನಾಟಕಕ್ಕೆ ವಲಸೆ ಹೋಗಿದ್ದ ಕವಿ ಬಿಲ್ಹಣನು ಕಶ್ಮೀರದಲ್ಲಿ ಪಾಂಡಿತ್ಯಪೋ?ಣೆ ಪುನರುಜ್ಜೀವಿತವಾಗಿದ್ದುದನ್ನು ಕೇಳಿ ಸಂತೋಷಿಸಿದ. ರಾಜ್ಯವೆಲ್ಲ ಉನ್ನತ ಹರ್ಮ್ಯಗಳಿಂದಲೂ ಸುಂದರ ಉದ್ಯಾನಗಳಿಂದಲೂ ನಳನಳಿಸುತ್ತಿತ್ತು. ಹ?ನು ಚಲಾವಣೆಗಾಗಿ ಹೊಸ ಆಕ?ಕ ಬಂಗಾರದ ನಾಣ್ಯಗಳನ್ನು ಕರ್ನಾಟಕದಲ್ಲಿ ಟಂಕಿಸಿ ತರಿಸಿದ್ದ. ಇದು ಬೇರಾವ ರಾಜರ ಆಳ್ವಿಕೆಯಲ್ಲಿಯೂ ನಡೆದಿರಲಿಲ್ಲ. ಹ?ನ ಭಾರ್ಯೆ ವಸಂತಲೇಖೆ ಅನೇಕ ಮಠಗಳನ್ನೂ ಅಗ್ರಹಾರಗಳನ್ನೂ ತ್ರಿಪುರೇಶ್ವರಾದಿ ದೇವಾಲಯಗಳನ್ನೂ ನಿರ್ಮಾಣ ಮಾಡಿಸಿದಳು.
ದಾನಿ ಎಂದು ಹೆಸರಾಗಿದ್ದ ಮಂತ್ರಿ ಚಂಪಕನ ಪುತ್ರನೇ ಕಲ್ಹಣ.
ಪಿತೂರಿಗಳ ಉಪಟಳ ಸಹಿಸಲಾರದೆ ವಿಜಯಮಲ್ಲನು ರಾಜಧಾನಿಯನ್ನು ತ್ಯಜಿಸಿ ಹೊರಟುಹೋದ.
ವಿಧಿಲೀಲೆ ವಿಚಿತ್ರವಾದುದು. ಕಶ್ಮೀರ ಪ್ರಜೆಗಳ ದುರದೃ?ವೆಂಬಂತೆ ತುರು?ನೊಬ್ಬನು ಹೇಗೋ ಹ?ನ ಆಸ್ಥಾನದಲ್ಲಿ ಸೇರಿಕೊಂಡ. ಆ ಮಾತುಗಾರ ತುರು?ನ ಮೋಡಿಗೊಳಗಾಗಿ ಹ?ನು ೩೬೦ ಮ್ಲೇಚ್ಛ ಸ್ತ್ರೀಯರನ್ನು ರಾಣಿ ವಾಸಕ್ಕೆ ಸೇರಿಸಿಕೊಂಡ. ಅಲ್ಲಿಂದಲೇ ಹ?ನ ಪತನ ಆರಂಭವಾದದ್ದು. ರಾಜ್ಯದ ವಹಿವಾಟಿನಲ್ಲಿ ತುರು?ನು ಹ?ನಿಗೆ ತೋಡುಗೈಯಾಗಿದ್ದ. ಹೀಗೆ ಅವನಲ್ಲಿ ಹ?ನ ವಿಶ್ವಾಸ ಹೆಚ್ಚುತ್ತ ಹೋಯಿತು. ನೋಡುನೋಡುತ್ತಿದ್ದಂತೆ ರಾಜ್ಯದ ಕೀಲಕ ಅಧಿಕಾರ ಸ್ಥಾನಗಳೆಲ್ಲ ತುರು?ರ ವಶವಾದವು. ಇದು ಅಪೇಕ್ಷಣೀಯವಲ್ಲವೆಂಬ ಚಂಪಕ ಮತ್ತು ಪ್ರಯಾಗರ ಹಿತವಾದವನ್ನು ಹ?ನು ಅಲಕ್ಷಿಸಿದ. ಹೊರಗಿನ ತೋರಿಕೆ ಏನಿದ್ದರೂ ತುರು?ರ ಅಂತರಂಗದ ಶ್ರದ್ಧೆ ತಮ್ಮ ಸ್ವೀಯ ಮತಕ್ಕ? ಮೀಸಲಿರುತ್ತದೆ – ಎಂದು ಮಂತ್ರಿಗಳು ಹ?ನಿಗೆ ಬಗೆಬಗೆಯಾಗಿ ತಿಳಿಹೇಳಿದರೂ ಪ್ರಯೋಜನವಾಗಲಿಲ್ಲ. ಹ?ನು ತನ್ನ ಉದಾರದೃಷ್ಟಿಯ ಗುಂಗಿನಿಂದ ಹೊರಬರಲಿಲ್ಲ. ಮ್ಲೇಚ್ಛ ಸಮುದಾಯದವರು ಸಭ್ಯ ಅತಿಥಿಗಳಂತಲ್ಲವೆಂದೂ ದ್ರೋಹಬುದ್ಧಿಯವರೆಂದೂ ಬೇರೆಡೆಗಳ ಅನುಭವಗಳನ್ನು ಮಂತ್ರಿಗಳು ವರ್ಣಿಸಿದುದೂ ಹ?ನ ಮೇಲೆ ಪರಿಣಾಮ ಬೀರಲಿಲ್ಲ.
ದು?ರ ಮಾತನ್ನು ಕೇಳಿಕೊಂಡು ಹ?ನು ವಿಜಯಮಲ್ಲನ ಮಗ ಜಯಮಲ್ಲನನ್ನೂ ಉತ್ಕ?ನ ಇಬ್ಬರು ಮಕ್ಕಳನ್ನೂ ಹತ್ಯೆ ಮಾಡಿಸಿದ. ತುರು?ರ ಸಲಹೆಯಂತೆ ಕಲಶಮಂದಿರದಲ್ಲಿದ್ದ ಬಂಗಾರದ ನಿಧಿಯನ್ನು ವಶಪಡಿಸಿಕೊಳ್ಳಲು ಹ?ನು ಮುಂದಾದಾಗ ಮಂತ್ರಿ ಪ್ರಯಾಗನು ಅದನ್ನು ನಿವಾರಿಸಿದ.
ಆದರೆ ಪತನದಶೆ ಮುಂದುವರಿದಿತ್ತು. ಮಂದಿರಗಳಲ್ಲಿ ನಿಕ್ಷಿಪ್ತವಾಗಿದ್ದ ನಿಧಿಯು ವ್ಯರ್ಥವಾಗುತ್ತಿದೆಯೆಂದೂ ಅದನ್ನು ಸ್ವಾಧೀನಪಡಿಸಿಕೊಂಡು ರಾಜ್ಯಕಾರ್ಯಗಳಿಗೆ ಬಳಸಬಹುದೆಂದೂ ತುರು? ಅಧಿಕಾರಿಗಳು ಮಾಡಿದ ಸಲಹೆ ಹ?ನಿಗೆ ಅಸಮಂಜಸವೆನಿಸಲಿಲ್ಲ. ದೈವಕಾರ್ಯಗಳಿಗೆ ಮೀಸಲಾಗಿದ್ದ ಧನದ ದುರ್ವಿನಿಯೋಗ ಮಾಡಿದ ಹಿಂದಿನವರು ವಿನಾಶಗೊಂಡಿದ್ದುದನ್ನು ಹ?ನು ಸ್ಮರಣೆಗೆ ತಂದುಕೊಳ್ಳಲಿಲ್ಲ.
ದೇವಮಂದಿರಗಳೆಲ್ಲ ವಿಧ್ವಂಸಗೊಂಡವು. ಸದಾ ತುರು?ರ ಕೈಗೊಂಬೆಯಾಗಿದ್ದ ರಾಜನನ್ನು ಪ್ರಜೆಗಳು ’ತುರು? ಹ?’ನೆಂದೇ ಕರೆಯತೊಡಗಿದ್ದರು. ಒಂದೊಮ್ಮೆ ಹ?ನ ಆಧಿಪತ್ಯಕ್ಕಾಗಿ ಹಂಬಲಿಸಿದ್ದ ಪ್ರಜೆಗಳೇ ಈಗ ಅದು ಯಾವಾಗ ಅಂತ್ಯಗೊಂಡೀತು ಎಂದು ಎದುರುನೋಡತೊಡಗಿದ್ದರು.
ದೇವಾಲಯ ಧ್ವಂಸ, ವಿಗ್ರಹಭಂಜನೆ, ಅಧಿಕ ತೆರಿಗೆ ವಸೂಲಾತಿ – ಹೀಗೆ ಅರಾಜಕತೆಯೇ ತಾಂಡವವಾಡತೊಡಗಿತ್ತು.
ಪ್ರಜೆಗಳಲ್ಲಿ ಉದಾಸೀನಭಾವ ಹರಡುತ್ತಿದ್ದುದನ್ನು ಗಮನಿಸಿ ಹ?ನು ತಳಮಳಗೊಂಡ. ಏತನ್ಮಧ್ಯೆ ಹ?ನ ಚಿಕ್ಕಪ್ಪ ಮಲ್ಲನ ಮಕ್ಕಳಾದ ಉಚ್ಛಲ ಮತ್ತು ಸುಸ್ಸಲರು ಕಶ್ಮೀರದ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದುದೂ ಅವರಿಗೆ ಕಶ್ಮೀರದೊಳಗಿನ ಅನೇಕ ಸ್ಥಾನಿಕರ ಬೆಂಬಲ ಇದ್ದುದೂ ಹ?ನನ್ನು ಕಂಗಾಲುಗೊಳಿಸಿತು. ತಾನು ಮಾಡಿದ್ದ ಪಾಪಕಾರ್ಯಗಳ ಫಲಿತವೇ ಇದೆಂದು ಕೊನೆಗೂ ಹ?ನಿಗೆ ಮನವರಿಕೆಯಾಗತೊಡಗಿತು.
ಸಂದರ್ಭದ ದುರ್ಲಾಭ ಪಡೆದ ಬಗೆಬಗೆಯ ಮಂದಿ ಹ?ನಲ್ಲಿ ನಿರಾಧಾರ ಮೆಚ್ಚಿಕೆಯ ಮಾತುಗಳನ್ನಾಡಿ ಹೇರಳ ಉಡುಗೊರೆಗಳನ್ನು ಪಡೆದರು.
ಆದರೆ ಹೊಗಳುಭಟರ ಕಪಟ ಬೋಧೆಗಳಿಂದ ರಾಜನ ಅದೃ?ವೇನೂ ಬದಲಾಗಲಿಲ್ಲ. ಉಚ್ಚಲನ ವಿಜಯಯಾತ್ರೆ ಮುಂದುವರಿದಿದ್ದ ವಾರ್ತೆ ಹ?ನಿಗೆ ತಲಪಿ ಅವನನ್ನು ಆತಂಕಗೊಳಿಸಿತು. ಹಿಂದೆ ತನ್ನ ಬೆಂಬಲಿಗರಾಗಿದ್ದ ಅನೇಕರು ಉಚ್ಚಲನೊಡನೆ ಕೈಜೋಡಿಸತೊಡಗಿದ್ದುದು ತಿಳಿದುಬಂದಿತು.
ನಿರ್ವಾಹವಿಲ್ಲದೆ ಹ?ನು ನೆರವಿಗಾಗಿ ಚಂಪಕನಿಗೆ ಕರೆಕಳುಹಿಸಿದ.
ಪ್ರಭುಗಳೆ, ಉಚ್ಚಲನು ಪರಿಹಾಸಪುರವನ್ನು ದಾಟಿಬರದಂತೆ ತಡೆಯಲೇಬೇಕಾಗಿದೆ. ಜೊತೆಗೇ ಜನರ ಸಹಾನುಭೂತಿಯನ್ನು ಗಳಿಸಿಕೊಳ್ಳಬೇಕಾದರೆ ನೀವು ಧ್ವಂಸಮಾಡಿರುವ ದೇವಾಲಯಗಳನ್ನು ಪುನರುದ್ಧರಿಸಬೇಕು ಎಂಬ ಚಂಪಕನ ಸಲಹೆ ಹ?ನಿಗೆ ಸಮಂಜಸವೆನಿಸಿತು.
ಪರಿಹಾಸಪುರದಲ್ಲಿ ಭೀಕರ ಸಂಗ್ರಾಮ ನಡೆದು ಹ?ನು ಉಚ್ಚಲನನ್ನು ಪರಾಭವಗೊಳಿಸಲು ಶಕ್ತನಾದ.
ಆದರೆ ಈ ಗೆಲವಿನ ಸಂಭ್ರಮದಲ್ಲಿ ರಾಜನು ಚಂಪಕನಿಗೆ ಮಾಡಿದ್ದ ವಾಗ್ದಾನವನ್ನು ಮರೆತುಬಿಟ್ಟ; ಮತ್ತೆ ಹಿಂದಿನಂತೆ ಲಾಲಸೆಗೆ ಬಿದ್ದ. ಪರಿಹಾಸಪುರದ ಕೇಶವಮಂದಿರವನ್ನು ಹ?ನು ಭಗ್ನಗೊಳಿಸಿದುದು ರಾಜನ ವಿನಾಶಕ್ಕೆ ದಾರಿಯಾಗುತ್ತದೆಂದು ಎಚ್ಚರಿಸಿ ಚಂಪಕನು ಹೊರಟುಹೋದ.
ಇದುವರೆಗೆ ರಾಜನ ಗಮನವೆಲ್ಲ ಉತ್ಕ?ನ ಮೇಲೆ ಕೇಂದ್ರೀಕೃತವಾಗಿತ್ತು; ಸುಸ್ಸಲನನ್ನು ಮರೆತಿದ್ದ. ಈಗ ಸುಸ್ಸಲನೂ ಗೆಲವನ್ನು ಸಾಧಿಸುತ್ತ ಸೂರ್ಯಪುರದವರೆಗೆ ತಲಪಿದ್ದ ವಾರ್ತೆ ಬಂದಿತು.
ಸೂರ್ಯಪುರದಲ್ಲಿ ರಾಜನ ಸೇನೆಯನ್ನು ಸುಸ್ಸಲನು ಮಣಿಸಿದ. ರಾಜನ ಗಮನ ಸುಸ್ಸಲನೆಡೆಗೆ ಹರಿದಿದ್ದ ಅವಕಾಶವನ್ನು ಬಳಸಿ ಉಚ್ಚಲನು ಮತ್ತೆ ಜೈತ್ರಯಾತ್ರೆಯನ್ನು ಉಪಕ್ರಮಿಸಿದ. ಹ?ನ ಜನವಿರೋಧಿ ನಡವಳಿಗಳಿಂದ ಬೇಸತ್ತಿದ್ದ ಹಿರಣ್ಯಪುರ ಮೊದಲಾದೆಡೆಗಳ ಸ್ಥಳೀಯರು ಶತ್ರುವಾಗಿದ್ದ ಉಚ್ಚಲನನ್ನು ಸ್ವಾಗತಿಸಿದರು.
ಲಜ್ಜೆಯನ್ನು ಪಕ್ಕಕ್ಕಿರಿಸಿ ಹ?ನು ಮತ್ತೆ ಚಂಪಕ ಮಂತ್ರಿಯ ಸಲಹೆ ಕೋರಿದ. ರಾಜನ ಪಾಪಫಲವು ಅವನ ಮಗನಿಗೂ ಕ್ರಮಿಸದಂತೆ ಭೋಜನನ್ನು ಲೋಹಾರಾ ಪ್ರಾಂತಕ್ಕೆ ಕಳುಹಿಸುವಂತೆ ಚಂಪಕನು ಸೂಚಿಸಿದ.
ಸ್ವನಿಯಂತ್ರಣ ಪೂರ್ತಿ ತಪ್ಪಿದ್ದ ಹ?ನು ಉಚ್ಚಲನ ತಂದೆ ದೈವಸ್ವರೂಪನಾಗಿದ್ದ ಮಲ್ಲನನ್ನು ಕೊಲ್ಲಿಸಿದ. ರಾಜವಂಶ ನಿರ್ನಾಮವಾಗಲೆಂದು ಉಚ್ಚಲನ ತಾಯಿ ಶಪಿಸಿದಳು.
* * *
ರಾಜನು ದುರ್ಬಲನಾಗಲೆಂದು ಕಾದಿದ್ದ ಉಚ್ಚಲನೂ ಸುಸ್ಸಲನೂ ಏಕಕಾಲದಲ್ಲಿ ಶ್ರೀನಗರಕ್ಕೆ ದಾಳಿಯಿಟ್ಟರು.
ಮಗ ಭೋಜನ ಕ್ಷೇಮವನ್ನು ಕುರಿತು ಪರಿಸ್ಥಿತಿಯನ್ನು ಅವಲೋಕಿಸಿ ಬಂದು ತಿಳಿಸುವಂತೆ ಆಜ್ಞಾಪಿಸಿ ಚಂಪಕನನ್ನು ಹ?ನು ಲೋಹಾರಾಕ್ಕೆ ಕಳಿಸಿದ.
ನೋಡುನೋಡುತ್ತಿದ್ದಂತೆ ಶ್ರೀನಗರ ರಾಜನ ಕೈಬಿಟ್ಟಿತು. ರಾಜನಿಗೆ ತಲೆಮರೆಸಿಕೊಂಡು ಹೋಗದೆ ಗತ್ಯಂತರ ಉಳಿಯಲಿಲ್ಲ. ಯಾರೂ ರಾಜನಿಗೆ ಅಲ್ಪನೆರವನ್ನೂ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ತನ್ನ ಅಕೃತ್ಯಗಳ ಸರಣಿಯನ್ನು ಮೆಲುಕುಹಾಕಿದಂತೆ ತಾನು ತನ್ನ ತಂದೆಯ ಅನೈತಿಕ ಜೀವನದ ದು?ರಿಣಾಮಗಳಿಂದ ಏನನ್ನೂ ಕಲಿಯಲಿಲ್ಲವಲ್ಲ – ಎಂದು ಖಿನ್ನನಾದ.
ತನ್ನ ಮಗ ಭೋಜನನ್ನು ಶತ್ರುಗಳು ಸಂಹರಿಸಿದ ವಾರ್ತೆ ತಿಳಿದಾಗಲೂ ರಾಜನು ಏನೂ ಮಾಡಲಾಗದೆ ಹೋದ.
ವೀರಮರಣದಿಂದಲೂ ವಂಚಿತನಾಗಿ ಹ?ನು ದಾಮರರ ಕೈಯಲ್ಲಿ ಹತನಾಗಿ ಶಿರಶ್ಛೇದಗೊಂಡು ನೆಲಕ್ಕುರುಳಿದ.
ಹ?ನ ಅವಸಾನವಾಗುತ್ತಿದ್ದಂತೆ ಕಶ್ಮೀರದಲ್ಲಿ ಮತ್ತೆ ಪ್ರಕಾಶವು ಪಸರಿಸಿತು. ಯಾವನೋ ಅನಾಮಧೇಯನಿಂದ ರಾಜನ ಅಂತ್ಯಸಂಸ್ಕಾರವಾಯಿತು.
ಹ?ದೇವನ ಕರಾಳ ಚರಿತ್ರೆಯು ಇತಿಹಾಸದಲ್ಲಿ ಮರೆಯಬಾರದ ಪಾಠವನ್ನು ಉಳಿಸಿ ಮುಗಿಯಿತು. ಸಂಯಮಹೀನ ನಡೆಯನ್ನು ದುರಂತವು ತಪ್ಪದೆ ಬೆನ್ನಟ್ಟುತ್ತದೆ – ಎಂಬ ನಿಯಮವನ್ನು ಮದಾಂಧರು ಮರೆಯುತ್ತಲೇ ಇರುವುದು ವೈಚಿತ್ರ್ಯಮಯ.