ಒಂದು ಗುಡ್ಡದ ಮೇಲಿನ ತೋಟದ ನಡುವೆ ಗುಡಿಸಲಲ್ಲಿ ವೃದ್ಧನೊಬ್ಬ ರೈತ ತನ್ನ ಮೊಮ್ಮಗನೊಂದಿಗೆ ವಾಸಿಸುತ್ತಿದ್ದ. ಪ್ರತಿದಿನ ಮುಂಜಾವಿನಲ್ಲಿ ಎದ್ದು, ಅಡುಗೆಮನೆಯಲ್ಲಿದ್ದ ಮೇಜಿನ ಬಳಿ ಕುಳಿತು ಭಗವದ್ಗೀತೆಯನ್ನು ಓದುವುದು ಅವನ ಅಭ್ಯಾಸ. ಎಲ್ಲ ವಿಷಯಗಳಲ್ಲೂ ಅಜ್ಜನನ್ನೇ ಅನುಸರಿಸುತ್ತಲಿದ್ದ ಮೊಮ್ಮಗನೂ ದಿನಾಲೂ ಗೀತೆಯನ್ನು ಓದುತ್ತಿದ್ದ. ಒಂದು ದಿನ ಅವನು ಅಜ್ಜನನ್ನು ಕುರಿತು, “ನಾನೂ ನಿಮ್ಮ ಹಾಗೆ ಪ್ರತಿದಿನ ಭಗವದ್ಗೀತೆಯನ್ನು ಓದುತ್ತೇನೆ. ಆದರೆ ನನಗೆ ಅದರ ಅರ್ಥ ಆಗುವುದಿಲ್ಲ. ಅಲ್ಪಸ್ವಲ್ಪ ಗೊತ್ತಾಗಿದ್ದೂ ಪುಸ್ತಕವನ್ನು ಮುಚ್ಚಿಟ್ಟ ಕೂಡಲೆ ಮರೆತುಹೋಗುತ್ತದೆ. ಈ ರೀತಿ ಓದುವುದರಿಂದ […]
ಭಗವದ್ಗೀತೆ ಮತ್ತು ಇದ್ದಿಲು ಬುಟ್ಟಿ
Month : March-2016 Episode : Author : ಕೆ. ನಿರುಪಮಾ