೧. ಭಾರತದಲ್ಲಿರುವ ಅತಿ ದೊಡ್ಡ ದೇವಾಲಯ ಸಂಕೀರ್ಣ ಯಾವುದು?
೨. ಸಮುದ್ರತಳದಲ್ಲಿರುವ ಅತಿ ದೊಡ್ಡ ಪರ್ವತಶ್ರೇಣಿ ಯಾವುದು?
೩. ಭಾರತದ ರಾಷ್ಟ್ರಾಧ್ಯಕ್ಷರನ್ನು ಯಾರಾರು ಚುನಾಯಿಸುತ್ತಾರೆ?
೪. ‘ಚೌಸಾ’ ಯುದ್ಧ ಯಾರಾರ ನಡುವೆ ನಡೆಯಿತು?
೫. ಸ್ವತಂತ್ರಭಾರತದ ಮೊತ್ತಮೊದಲ ಕಾನೂನುಮಂತ್ರಿ ಯಾರು?
೬. ಭಾರತದಲ್ಲಿ ಪ್ರತಿ ವ್ಯಕ್ತಿಯ ಸರಾಸರಿ ವರಮಾನವನ್ನು ಮೊತ್ತಮೊದಲು ಅಂದಾಜು ಮಾಡಿದ ಅರ್ಥಶಾಸ್ತ್ರಜ್ಞ ಯಾರು?
೭. ‘ಆಗಾಖಾನ್ ಟ್ರೋಫಿ’ ಯಾವ ಕ್ರೀಡೆಗೆ ಸಂಬಂಧಿಸಿದ್ದು?
೮. ದೇಶದಲ್ಲಿ ಎಲ್ಲೆಡೆ ಜನಪ್ರಿಯವಾಗಿರುವ ‘ಹಂಸ-ದಮಯಂತಿ’ ಚಿತ್ರ ಯಾರು ರಚಿಸಿದ್ದು?
೯. ಕೋಲಾರದ ಚಿನ್ನದ ಗಣಿ ಯಾವ ದಿವಾನರ ಕಾಲದಲ್ಲಿ ಸ್ಥಾಪಿಸಲ್ಪಟ್ಟಿತು?
೧೦. ‘ಆಲಿಯಂ ಸೆಪಾ’ – ಇದು ಯಾವ ದಿನಬಳಕೆವಸ್ತುವಿನ ವೈಜ್ಞಾನಿಕ ಹೆಸರು?
ಉತ್ತರಗಳು
೧. ದೆಹಲಿಯಲ್ಲಿರುವ ‘ಅಕ್ಷರಧಾಮ’
೨. ದಕ್ಷಿಣ ಅಮೆರಿಕಕ್ಕೂ ಆಫ್ರಿಕಕ್ಕೂ ನಡುವೆ ಅಟ್ಲಾಂಟಿಕ್ ಸಾಗರದ ತಳದಲ್ಲಿರುವ ಪರ್ವತಶ್ರೇಣಿ
೩. ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಸಭೆಗಳ ಸದಸ್ಯರು
೪. ಹುಮಾಯೂನ್ ಮತ್ತು ಶೇರ್‌ಖಾನ್
೫. ಡಾ|| ಬಿ.ಆರ್. ಅಂಬೇಡ್ಕರ್
೬. ದಾದಾಭಾಯಿ ನವರೋಜಿ
೭. ಹಾಕಿ
೮. ರಾಜಾ ರವಿವರ್ಮ
೯. ಕೆ. ಶೇಷಾದ್ರಿ ಅಯ್ಯರ್
೧೦. ಈರುಳ್ಳಿ