೧. ಸ್ವತಂತ್ರಭಾರತದ ಮೊದಲ ಜನಗಣತಿ ಯಾವಾಗ ನಡೆಯಿತು?
೨. ಮಣಿಪುರ ಮತ್ತು ತ್ರಿಪುರಾ ಸ್ವತಂತ್ರ ಪ್ರತ್ಯೇಕ ರಾಜ್ಯಗಳಾದದ್ದು ಯಾವಾಗ?
೩. ಕೇಂದ್ರ-ಆಡಳಿತ ಪ್ರದೇಶಗಳಲ್ಲಿ ಗಾತ್ರದಲ್ಲಿ ಅತ್ಯಂತ ಸಣ್ಣದು ಯಾವುದು?
೪. ವೈಮಾನಿಕ ದಳದ ಅತ್ಯುಚ್ಚ ಪದವಿ ಯಾವುದು?
೫. ಸಂಸತ್ಸದಸ್ಯರಾಗಿರದೆಯೆ ಪ್ರಧಾನಮಂತ್ರಿಯಾದವರು ಯಾರು?
೬. ಬಿಜಾಪುರದ `ಗೋಲ್‌ಗುಂಬಜ್’ನಲ್ಲಿ ಯಾರ ಗೋರಿ ಇದೆ?
೭. ಪ್ರಸಿದ್ಧ ಉಣ್ಣೆಬಟ್ಟೆಗಳ ತಯಾರಿಕೆ ಕೇಂದ್ರ `ಧರಿವಾಲ್’ ಯಾವ ರಾಜ್ಯದಲ್ಲಿದೆ?
೮. ದೆಹಲಿಯಲ್ಲಿ ಯಮುನಾನದಿಯ ದಡದಲ್ಲಿರುವ `ವಿಜಯಘಾಟ್’ ಯಾರ ಸ್ಮಾರಕ?
೯. `ಗುರುದೇವ’ ಎಂಬ ವರ್ಣನೆ ವಿಶೇಷವಾಗಿ ಯಾರನ್ನು ಉದ್ದೇಶಿಸಿ ಬಳಸಲಾಗಿದೆ?
೧೦. ಹಿಂದಿಯ ಪ್ರಸಿದ್ಧ ಕಾವ್ಯ `ಕಾಮಾಯನಿ’ – ಯಾರು ರಚಿಸಿದ್ದು?
೧. ೧೯೫೧.
೨. ೧೯೭೨.
೩. ಲಕ್ಷದ್ವೀಪ.
೪. ಏರ್ ಚೀಫ್ ಮಾರ್ಷಲ್.
೫. ಪಿ.ವಿ. ನರಸಿಂಹರಾವ್.
೬. ಮಹಮದ್ ಅದಿಲ್‌ಶಹ.
೭. ಪಂಜಾಬ್.
೮. ಲಾಲ್‌ಬಹಾದುರ್ ಶಾಸ್ತ್ರಿ ಅವರ ಸಮಾಧಿ.
೯. ರವೀಂದ್ರನಾಥ ಠಾಕೂರ್.
೧೦. ಜಯಶಂಕರಪ್ರಸಾದ್.