- `ಹಲಾಯುಧ’ ಎಂಬ ಹೆಸರಿನಿಂದಲೂ ಪ್ರಸಿದ್ಧನಾದ ಪೌರಾಣಿಕ ವ್ಯಕ್ತಿ ಯಾರು?
- ಬುದ್ಧನ ಪೂರ್ವಜನ್ಮವೃತ್ತಾಂತಗಳನ್ನು ತಿಳಿಸುವ `ಜಾತಕಕಥೆಗಳು’ ಯಾವ ಭಾಷೆಯಲ್ಲಿ ರಚಿತವಾದವು?
- ಪೂರ್ವಭಾರತದಲ್ಲಿ ಮೊಘಲ ರಾಜಧಾನಿಯಾಗಿ ಅಕ್ಬರನ ಸೇನಾಧಿಕಾರಿಗಳು ನಿರ್ಮಿಸಿದ ನೂತನ ನಗರ ಯಾವುದು?
- ವಾಲಿಯ ಕಣ್ಣಿಗೆ ಬೀಳದಿರಲು ಸುಗ್ರೀವನು ಯಾವ ಋಷಿಗಳ ಆಶ್ರಮದಲ್ಲಿ ಆಸರೆ ಪಡೆದಿದ್ದ?
- ಸುಲ್ತಾನ ಕುತುಬ್‌ಶಾಹನ ಪತ್ನಿ ಹೈದರ್‌ಬೇಗುಂಳ ಹುಟ್ಟುಹೆಸರು ಏನು?
- ಜಿಲ್ಲಾ ಕಲೆಕ್ಟರ ಚಾರ್ಲ್ಸ್ ಕಿಂಗ್ಸ್‌ಫರ್ಡನ ಹತ್ಯೆಯ ಯತ್ನ ಮಾಡಿದ ಅಪರಾಧಕ್ಕಾಗಿ ಮರಣದಂಡನೆಗೊಳಗಾದ ೧೪ ವರ್ಷದ ಶಾಲಾಬಾಲಕ ಯಾರು?
- ಮೃಣಾಲ್ ಸೇನ್ ನಿರ್ದೇಶಿತ `ಒಕ ಊರಿ ಕಥಾ’ ಚಿತ್ರ ಯಾರು ಬರೆದ ಕಥೆಯನ್ನು ಆಧರಿಸಿತ್ತು?
- ಫಾಲ್ಕೆ ಪ್ರಶಸ್ತಿ ವಿಜೇತ ಗುಲ್ಜಾರ್ ಅವರ ಮೂಲ ಹೆಸರು ಏನು?
- ವಿಶ್ವಕಪ್ ಕ್ರಿಕೆಟ್‌ನಲ್ಲಿ `ಪಂದ್ಯದ ವ್ಯಕ್ತಿ’ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಆಟಗಾರ ಯಾರು?
- ಕ್ರಿಕೆಟಿಗನಾಗಿಯೂ ಪ್ರಸಿದ್ಧನಾಗಿದ್ದ ಇಂಗ್ಲೆಂಡಿನ ಏಕೈಕ ಪ್ರಧಾನಿ ಯಾರು?
- ಬಲರಾಮ (`ನೇಗಿಲನ್ನು ಆಯುಧವಾಗಿ ಉಳ್ಳವನು’).
- ಪಾಲಿ.
- ಢಾಕಾ(ಬಂಗ್ಲಾದೇಶ).
- ಮತಂಗ ಮಹರ್ಷಿಗಳು.
- ಭಾಗಮತಿ.
- ಖುದಿರಾಮ ಬೋಸ್.
- ಮುನ್ಶಿ ಪ್ರೇಮಚಂದ್.
- ಸಂಪೂರಣ್‌ಸಿಂಗ್.
- ಫರೂಖ್ ಇಂಜಿನಿಯರ್ (೧೯೭೫).
- ಆಲೆಕ್ ಡಗ್ಲಸ್ ಹೋಮ್.