
೧. ರಾಮನ ಪುನರಾಗಮನವನ್ನು ಮುಂಚಿತವಾಗಿ ಸಾರಲು ಬಂದ ಆಂಜನೇಯ ಭರತನನ್ನು ಭೇಟಿಯಾದದ್ದು ಎಲ್ಲಿ?
೨. ಬ್ರಿಟಿಷರು ಸ್ವಾಧೀನಪಡಿಸಿಕೊಳ್ಳುವುದಕ್ಕೆ (೧೮೬೮) ಹಿಂದೆ ನಿಕೋಬಾರ್ ದ್ವೀಪ ಯಾರ ಆಳ್ವಿಕೆಯಲ್ಲಿತ್ತು?
೩. ‘ತರೀಖ್-ಇ-ಖುದಾದದಿ’ ಯಾರ ಆತ್ಮಕಥೆಯೆಂದು ಪ್ರತೀತಿ ಇದೆ?
೪. ಬಹಮನಿ ರಾಜ್ಯದ ರಾಜಧಾನಿ ಯಾವುದಾಗಿತ್ತು?
೫. ಅಮೆರಿಕದ ನಾವಿಕರು ಬಳಸುತ್ತಿದ್ದ ‘ಗುಂಗ್ ಹೋ!’ ಉದ್ಗಾರದ ಅರ್ಥ ಏನು?
೬. ‘ಸ್ಯಾಂಸಂಗ್’ ಕೊರಿಯ ಶಬ್ದದ ಅರ್ಥ ಏನು?
೭. ‘ಕುಸುಮೇಶ’ ಎಂದೂ ಕರೆಯಲಾಗುವ ದೇವತೆ ಯಾರು?
೮. ರಾಣಿ ರೂಪಮತಿಯ ಪ್ರಿಯತಮ ಯಾರು?
೯. ‘ಸಾರೇ ಜಹಾ ಸೇ ಅಚ್ಛಾ’ ಗೀತಕ್ಕೆ ಸಂಗೀತಯೋಜನೆ ಮಾಡಿದವರು ಯಾರು?
೧೦. ಅರ್ಜುನ ಪ್ರಶಸ್ತಿ ಪುರಸ್ಕೃತ ವಿಲ್ಸನ್ ಚೆರಿಯನ್ ಯಾವ ಕ್ರೀಡೆಯಲ್ಲಿ ಪ್ರತಿಷ್ಠಿತರು?
ಉತ್ತರಗಳು
[೧] ನಂದಿಗ್ರಾಮ
[೨] ಡೆನ್ಮಾರ್ಕ್ [೩] ಟೀಪು [೪] ಕಲಬುರಗಿ [೫] ‘ಐಕ್ಯದಿಂದ ಕೆಲಸಮಾಡಿ’ (ಚೀನೀ ಮೂಲಶಬ್ದ)
[೬] ‘ಮೂರು ನಕ್ಷತ್ರಗಳು’
[೭] ಕಾಮದೇವ, ಮನ್ಮಥ
[೮] ಮಾಳವಾ ಅಧಿಪತಿ ಬಾಜ್‌ಬಹಾದುರ್
[೯] ಪಂಡಿತ್ ರವಿಶಂಕರ್
[೧೦] ಈಜು