೧. ಕುಕ್ಕೆ ಸುಬ್ರಹ್ಮಣ್ಯ ಯಾವ ಬೆಟ್ಟ ಸಾಲಿನ ನೆರೆಯಲ್ಲಿದೆ?
೨. ಕಶ್ಮೀರದ ಬಾರಾಮುಲ್ಲಾ-ಜಮ್ಮು ರೈಲುಸೇತುವೆಯ ವೈಶಿಷ್ಟ್ಯವೇನು?
೩. ಪ್ರಾಚ್ಯಜಗತ್ತಿನಲ್ಲಿ ಅತಿ ಪ್ರಾಚೀನ ಕಾಲದಿಂದ ಬಳಕೆಯಲ್ಲಿರುವ ಸಂಭಾರಪದಾರ್ಥ ಯಾವುದು?
೪. ಉಜ್ಜಯಿನಿ ಯಾವ ರಾಜ್ಯದ ರಾಜಧಾನಿಯಾಗಿತ್ತು?
೫. ಬುದ್ಧನ ಮೊದಲ ಸಾರ್ವಜನಿಕ ಬೋಧನೆ ಯಾವ ಹೆಸರನ್ನು ತಳೆದಿದೆ?
೬. ‘ಸಿಂಹನೃತ್ಯ’ ಯಾವ ಪ್ರದೇಶದಲ್ಲಿ ಪ್ರಚಲಿತವಿದೆ?
೭. ಖಗ್ರಾಸ ಸೂರ್ಯಗ್ರಹಣದ ಗರಿಷ್ಠ ಅವಧಿ ಎಷ್ಟು?
೮. ವರ್ಷದ ಅತಿ ಕಡಮೆ ಅವಧಿ ಹಗಲು ಇರುವ ದಿನಾಂಕ ಯಾವುದು?
೯. ಸೂರ್ಯನಲ್ಲಿ ಅಧಿಕ ಪ್ರಮಾಣದಲ್ಲಿ ಇರುವ ಅನಿಲ ಯಾವುದು?
೧೦. ಏಳುನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ವಿಶ್ವದಾಖಲೆ ಮಾಡಿರುವ ನಟ ಯಾರು?
ಉತ್ತರಗಳು
೧. ಬಿಸಿಲೆ ಘಾಟ್ ಮತ್ತು ಕುಮಾರಪರ್ವತ.
೨. ಜಗತ್ತಿನಲ್ಲಿಯೆ ಅತಿ ಎತ್ತರದ ರೈಲು ಸೇತುವೆ: ಚೀನಾಬ್ ನದಿ ದಾಟಲು.
೩. ಲವಂಗ.
೪. ಅವಂತಿದೇಶ.
೫. ಧಮ್ಮಚಕ್ಕಪ್ಪಬತ್ತನಸುತ್ತ.
೬. ಹೊನ್ನಾವರ, ಉತ್ತರಕನ್ನಡ ಜಿಲ್ಲೆ.
೭. ಸುಮಾರು ೮ ನಿಮಿಷ.
೮. ಡಿಸೆಂಬರ್ ೨೧ (ಮಕರ ಸಂಕ್ರಮಣ).
೯. ಜಲಜನಕ (ಶೇ. ೭೩ರಷ್ಟು).
೧೦. ಮಲಯಾಳಂ ಚಿತ್ರನಟ ಪ್ರೇಮ್ ನಜೀರ್.