- ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಹುಟ್ಟುಹೆಸರು ಏನು?
- ‘ಮಿಯಾಂ ಕೀ-‘ ಎಂಬ ಪರ್ವಪದವನ್ನುಳ್ಳ ಹಿಂದೂಸ್ತಾನಿ ರಾಗಗಳ ಆವಿಷ್ಕರ್ತ ಯಾರು?
- ಬ್ರಿಟಿಶ್ ಸರ್ಕಾರದ ‘ದೇಶೀಯ ಭಾಷಾ ಪತ್ರಿಕೆಗಳ ನಿಯಂತ್ರಣ’ ಕಾಯ್ದೆಯ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ೧೮೭೮ರಲ್ಲಿ ಇಂಗ್ಲಿಷಿನಲ್ಲಿ ಪ್ರಕಟಗೊಳ್ಳತೊಡಗಿದ ಪತ್ರಿಕೆ ಯಾವುದು?
- ಅಂಟಾರ್ಟಿಕಾದಲ್ಲಿ ಭಾರತ ಮೊದಲು ಸ್ಥಾಪಿಸಿದ ಕೇಂದ್ರದ ಹೆಸರು ಏನು?
- ವಿಶ್ವನಾಥನ್ ಆನಂದ್‌ರವರ ನಂತರ ಚದುರಂಗದಲ್ಲಿ ಗ್ರ್ಯಾಂಡ್‌ಮಾಸ್ಟರ್ ಪದವಿ ಪಡೆದ ಎರಡನೆಯ ಆಟಗಾರ ಯಾರು?
- ಕಂಪಟರಿನ ‘ಮೌಸ್’ ಉಪಕರಣವನ್ನು ೧೯೬೦ರಲ್ಲಿ ಆವಿಷ್ಕರಿಸಿದ ಕಂಪೆನಿ ಯಾವುದು?
- ಹಿಂದೆ ದೇವಾಸ್ ಮಹಾರಾಜರಿಗೆ ಕಾರ್ಯದರ್ಶಿಯಾಗಿದ್ದ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಯಾರು?
- ಪಿಂಗಾಣಿಗೆ ಪೆರ್ತುಗೀಸರು ಬಳಸಿದ ‘ಪೋರ್ಸಲೈನ್’ ಇಟಾಲಿಯನ್ ಪದದ ಅರ್ಥ ಏನು?
- ‘ಸಾರಿ, ನೋ ರೂಮ್’ ಎಂಬ ಕಾದಂಬರಿ ಬರೆದ ಖ್ಯಾತ ವ್ಯಂಗ್ಯಚಿತ್ರಕಾರ ಯಾರು?
- ‘ರೋಬೋಟಿಕ್ಸ್’ ಎಂಬ ಈಗ ಜನಜನಿತವಾಗಿರುವ ಪದವನ್ನು ಸೃಷ್ಟಿಸಿದ್ದು ಯಾರು?
- ಮಣಿಕರ್ಣಿಕಾ.
- ತಾನ್‌ಸೇನ್.
- ‘ಅಮೃತ ಬಾಜಾರ್ ಪತ್ರಿಕಾ’
- ದಕ್ಷಿಣಗಂಗೋತ್ರಿ.
- ದಿಬ್ಯೇಂದು ಬರುವಾ.
- ಜೆರಾಕ್ಸ್.
- ಇ.ಎಂ. ಫೋರ್‌ಸ್ಟರ್.
- ‘ಚಿಕ್ಕಹಂದಿ’
- ಆರ್.ಕೆ. ಲಕ್ಷ್ಮಣ್ (ಅನಂತರ ‘ಹೊಟೇಲ್ ರಿವೇರಾ’ ಎಂಬ ಹೆಸರಿನಲ್ಲಿ ಪನರ್ಮುದ್ರಿತವಾಗಿದೆ).
- ವಿಜ್ಞಾನಿ-ಲೇಖಕ ಐಸಾಕ್ ಆಸಿಮೊವ್.