೧. ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮಾಡಿದ ದಾಖಲೆ ಏನು?
೨. ಬೆಣಚುಕಲ್ಲು ಗುಂಡಗೆ ನುಣಪಾಗಿ ಇರುವುದು ಏಕೆ?
೩. ಶರೀರ ಸವೆಯುವುದಕ್ಕೆ ಆರಂಭವಾಗುವುದು ಯಾವಾಗ?
೪. ಸಿಡಿಮದ್ದಿನಲ್ಲಿ ಬಳಕೆಯಾಗುವ ರಾಸಾಯನಿಕ ಯಾವುದು?
೫. ಇಂಗ್ಲೆಂಡನ್ನು ‘ಸೂರ್ಯ ಮುಳುಗದ ನಾಡು’ ಎನ್ನುತ್ತಾರೆ, ಹಾಗೆ ‘ಸೂರ್ಯೋದಯದ ನಾಡು’ ಎನಿಸಿರುವ ದೇಶ ಯಾವುದು?
೬. ‘ಕೈಪಿಲ್ಲಿ ಶಂಕರ ಭಟ್ಟಾದ್ರಿಪಾದ’ – ಇದು ಯಾರ ಹುಟ್ಟುಹೆಸರು?
೭. ‘ಮಾರಿ ಕುಣಿತ’ ಹೆಚ್ಚಾಗಿ ಯಾವ ಜಿಲ್ಲೆಗಳಲ್ಲಿ ಪ್ರಚಲಿತವಾಗಿದೆ?
೮. ಕೇಂದ್ರಸರ್ಕಾರದ ಮೊತ್ತಮೊದಲ ಮಹಿಳಾಸಚಿವೆ ಯಾರು?
೯. ‘ಭುವನ ವಿಜಯ’ – ಇದು ಯಾವುದರ ಹೆಸರು?
೧೦. ಬೆಂಗಳೂರಿನಿಂದ ೫೮ ಕಿ.ಮೀ. ದೂರದಲ್ಲಿರುವ ಸಾವನದುರ್ಗ ಯಾರ ಅಡಗುದಾಣವಾಗಿತ್ತು?
ಉತ್ತರಗಳು
೧. ಅವಿಚ್ಛಿನ್ನವಾಗಿ ೧೯೫ ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದ ಮಹಿಳೆ.
೨. ಸತತವಾಗಿ ನೀರು ಅಪ್ಪಳಿಸುತ್ತಿರುವುದರಿಂದ.
೩. ಹುಟ್ಟಿದ ಕ್ಷಣದಿಂದಲೇ!
೪. ಪೊಟ್ಯಾಸಿಯಂ ನೈಟ್ರೇಟ್.
೫. ಜಪಾನ್.
೬. ಆದಿಶಂಕರಾಚಾರ್ಯ.
೭. ಮಂಡ್ಯ, ಮೈಸೂರು.
೮. ವಿಜಯಲಕ್ಷ್ಮಿ ಪಂಡಿತ್.
೯. ಕೃಷ್ಣದೇವರಾಯನ ಆಸ್ಥಾನ.
೧೦. ಕೆಂಪೇಗೌಡ.
Comments are closed.