ಉತ್ಥಾನ ಮೇ 2017
Month : June-2017 Episode : Author :
Month : June-2017 Episode : Author :
Month : May-2017 Episode : Author : ಆರತಿ ಪಟ್ರಮೆ
ಮನೆಗೊಂದು ಮಗು ಬರುವ ಸಮಯ ಬಹು ಅಮೂಲ್ಯವಾದದ್ದು. ಒಡಲೊಳಗೆ ಜೀವವೊಂದು ಮಿಸುಕಾಡುವ ಆ ಕ್ಷಣ ಹೆಣ್ಣಾದವಳಿಗೆ ಅನಿರ್ವಚನೀಯ. ಆ ದಿನಗಳ ಸಂತೋಷ, ಅರ್ಥವಾಗದ ಒತ್ತಡ, ಹೊಮ್ಮುವ ಭಾವಗಳ ಒರತೆ… ಎಲ್ಲವೂ ಅನುಭವಿಸಿಯೇ ತಿಳಿಯಬೇಕು. ಮಗುವೊಂದು ಆರೋಗ್ಯಪೂರ್ಣವಾಗಿ ಬೆಳೆಯುವಲ್ಲಿ ಮನೆಮಂದಿಯೆಲ್ಲರ ಹೊಣೆಗಾರಿಕೆಯಿದೆ ಎಂಬುದು ಮಾತ್ರ ಬೆಳಕಿನಷ್ಟು ಸತ್ಯ. ಆದರೆ ತಾಯಿ ಹೆತ್ತದ್ದು ಹೆಣ್ಣುಮಗುವಾದರೆ ಅವಳನ್ನೇ ದೂಷಿಸಿ ಅನಿಷ್ಟವೆಂದು ಕಾಣುವ ವಾತಾವರಣ ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಿರುವಾಗ ಮುದ್ದಾದ ಮಗುವೊಂದು ಜನಿಸುವುದರಲ್ಲಿ ತಂದೆಯ ಪಾತ್ರವೂ ಬಹಳ ಮುಖ್ಯ ಎಂಬುದನ್ನು ಮನದಟ್ಟುಮಾಡಿಕೊಡಬೇಕಾದ್ದು […]
Month : May-2017 Episode : Author : ಎಚ್ ಮಂಜುನಾಥ ಭಟ್
`ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಎನ್ನುವುದು ನಮ್ಮ ಒಂದು ಗಾದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬರುವ ನವ್ಯಪಂಥದ ಬಗ್ಗೆ ಯೋಚಿಸುವಾಗ ಈ ಮಾತಿನಲ್ಲಿ ಬಹಳಷ್ಟು ಸತ್ಯವಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ನವ್ಯಪ್ರಜ್ಞೆಯ ಮೂಲಪುರು?ರು ಕವಿ ಪ್ರೊ| ಎಂ. ಗೋಪಾಲಕೃಷ್ಣ ಅಡಿಗರು. ೧೯೫೪ರಲ್ಲಿ ಪ್ರಕಟಗೊಂಡ ಅವರ ’ಚಂಡೆಮದ್ದಳೆ’ ಕವನಸಂಗ್ರಹದಿಂದ ನವ್ಯಪಂಥವು ಅಧಿಕೃತವಾಗಿ ಅನಾವರಣಗೊಂಡಿತು ಎನ್ನಬಹುದು. ಅವರ ’ಭೂಮಿಗೀತ’ ಕವನಸಂಗ್ರಹ (ಪ್ರಕಟಣೆ-೧೯೫೯) ಕನ್ನಡದಲ್ಲಿ ನವ್ಯತೆಯನ್ನು ದೃಢಪಡಿಸಿತು. ಮಾತ್ರವಲ್ಲ, ಅಡಿಗರಿಂದ ಪ್ರೇರಿತರಾಗಿ ಇದೇ ಪಂಥದಲ್ಲಿ ಹಲವರು ಕಾವ್ಯವಲ್ಲದೇ, ಕಥೆ, ಕಾದಂಬರಿ, ನಾಟಕ, […]
Month : May-2017 Episode : Author :
ದಶಕಗಳುದ್ದಕ್ಕೂ ಬೆಳೆಸಿರುವ ಗಲೀಜುಗಳು ಏಕಾಏಕಿ ನಿವಾರಣೆಯಾಗಲಾರವು. ಆದರೆ ಈಚಿನ ಚುನಾವಣೆಗಳ ಫಲಿತ ಆಶಾಸ್ಪದವಾಗಿದೆಯೆಂಬುದನ್ನು ಅಲ್ಲಗಳೆಯುವಂತಿಲ್ಲ. ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳ ಫಲಿತಗಳಲ್ಲಿ ಹಲವು ಕೌತುಕಗಳು ತುಂಬಿವೆ. ಮೊತ್ತಮೊದಲನೆಯದಾಗಿ ಚುನಾವಣೆಗಳಿಗೆ ಕೆಲವೇ ದಿನಗಳ ಹಿಂದೆ ’ತಜ್ಞ’ರನೇಕರು ನುಡಿದಿದ್ದ ಭವಿ?ವಾಣಿಗಳು ಈಗ ನಗೆಪಾಟಲೆನಿಸಿವೆ. ಭವಿಷ್ಯವಾಣಿಗಳಿಗೂ ವಾಸ್ತವ ಫಲಿತಗಳಿಗೂ ಇರುವ ಅಗಾಧ ಅಂತರವನ್ನು ಕುರಿತು ಯೋಚಿಸುವಾಗ ಅನೇಕ ಸಮೀಕ್ಷಕರು ತಾವು ಏನೇನೋ ಕಾರಣಗಳಿಂದ ಬಯಸುವ ಪರಿಣಾಮಗಳಿಗೆ ಸಾಧ್ಯತೆಯ ಗವುಸನ್ನು ಹೊದಿಸಿ ಮತದಾರರಿಗೆ ’ಮಾರ್ಗದರ್ಶನ’ ಮಾಡಲೆಳಸುತ್ತಾರೆಯೇ – ಎಂಬ ಶಂಕೆ ಮೂಡುತ್ತದೆ. […]
Month : May-2017 Episode : Author :
ಆಸುರೀಶಕ್ತಿಗಳ ಪ್ರಾಬಲ್ಯದಿಂದ ಧರೆಯನ್ನು ರಕ್ಷಿಸುವುದು ಎಷ್ಟು ದುರ್ಗಮವೆಂಬುದನ್ನು ಸಾಕ್ಷ್ಯಪಡಿಸಿರುವ ಒಂದು ಇತ್ತೀಚಿನ ಪ್ರಕರಣವೆಂದರೆ ಎಂಡೋಸಲ್ಫಾನ್ ವಿರುದ್ಧ ಜನರು ನಡೆಸಬೇಕಾಗಿಬಂದ ದೀರ್ಘಸಮರ. ಈ ಕೀಟನಾಶಕ ಎಷ್ಟು ಮಾರಕವೆಂಬುದು ಈಗ್ಗೆ ಇಪ್ಪತ್ತು ವರ್ಷ ಹಿಂದೆಯೇ ಮನವರಿಕೆಯಾಗಿತ್ತು. ಇದರಿಂದ ಜನ್ಯವಾದ ವಿಷವು ನೆಲಜಲಮೂಲಗಳನ್ನೆಲ್ಲ ವ್ಯಾಪಿಸಿ ಜನರ ಮೆದುಳಿನ ಜೋಗರಿಕೆ, ದೈಹಿಕ-ಮಾನಸಿಕ ಮಾಂದ್ಯ, ಅಪಸ್ಮಾರ, ಪಿತ್ತಕೋಶದ ಮತ್ತು ರಕ್ತದ ಕ್ಯಾನ್ಸರ್, ಆಸ್ತಮಾ, ಸಂತಾನಹೀನತೆ ಮೊದಲಾದ ಹಲವಾರು ವ್ಯಾಧಿಗಳಿಗೆ ಎಂಡೋಸಲ್ಫಾನ್ ಕಾರಣವಾಗುವುದೆಂಬುದು ಸಿದ್ಧಪಟ್ಟಿದೆ. ಈ ಹಿನ್ನೆಲೆಯಿದ್ದರೂ – ವಿಶೇಷವಾಗಿ ದಕ್ಷಿಣಕನ್ನಡ, ಕಾಸರಗೋಡು, ಕೇರಳ ಭಾಗಗಳಲ್ಲಿ […]
Month : May-2017 Episode : ರಾಗಮಾಲ ಕೃತಿಗಳು-6 Author : ಮಹೇಂದ್ರ ಡಿ.
ಜೀವನದಲ್ಲಿ ನಾವು ಗೆಲ್ಲಬಹುದು, ಸೋಲಬಹುದು; ಆದರೆ ಪಕ್ವವಾಗುವುದೇ ಜೀವನಸಾಫಲ್ಯ. ಶಾರೀರಿಕ ಅಚ್ಚುಕಟ್ಟು ಮತ್ತು ಶಿಸ್ತುಬದ್ಧ ವ್ಯಾಯಾಮ ಒಂದು ಗಟ್ಟಿತನದ ಮನಸ್ಥಿತಿಯನ್ನು ತಂದೊಡ್ಡುತ್ತವೆ. ದೇಶಖೊವ್ ರಾಗದ ಉದ್ದೇಶವೂ ಇದೇ ಆಗಿದೆ. ದೇಶಖೊವ್ ರಾಗಿಣಿಯ ಕುರಿತಾದ ಕಲಾಕೃತಿಯನ್ನು ಮೊದಲಿಗೆ ನೋಡಿದಾಗ ರಾಗಕ್ಕೂ ಕುಸ್ತಿ ಪೈಲ್ವಾನ್ ಅಖಾಡಾಕ್ಕೂ ಎಲ್ಲಿಯ ಸಂಬಂಧ ಎಂದು ಕ್ಷಣಕಾಲ ನಾವು ಅಚ್ಚರಿಗೊಳ್ಳಬಹುದು. ಆದರೆ ದೇಶಖೊವ್ ರಾಗದ ಆಂತರ್ಯವನ್ನು ಗಮನಿಸುತ್ತ ಹೋದರೆ ಈ ದೃಶ್ಯರೂಪಕವು ನಮ್ಮನ್ನು ದಂಗುಬಡಿಸಿಬಿಡುತ್ತದೆ. ಅದಕ್ಕೆ ಕಾರಣ ದೇಶಖೊವ್ ರಾಗವೇ ನಮ್ಮ ತನು-ಮನಗಳನ್ನು ನವಿರೇಳಿಸುವಂತೆ ಮಾಡಿಬಿಡುವುದು. […]
Month : May-2017 Episode : Author : ಎಚ್ ಮಂಜುನಾಥ ಭಟ್
ಒಟ್ಟಾಗಿ ಹಾಡುವಂತೆಯೆ ಅಣ್ಣ ಆರ್.ಎನ್. ತ್ಯಾಗರಾಜನ್ ಮತ್ತು ತಮ್ಮ ಡಾ|| ಆರ್. ಎನ್. ತಾರಾನಾಥನ್ (ನೋಡಿ – ’ಉತ್ಥಾನ’ ಏಪ್ರಿಲ್ ೨೦೧೭ರ ಸಂಚಿಕೆ) ಅವರಿಗೆ ಸಂಬಂಧಿಸಿದ ಹಲವು ವಿಷಯಗಳು ಸಮಾನವಾಗಿಯೇ ಇವೆ. ಆದರೂ ಸ್ವಂತಿಕೆ ಇರುವವರಲ್ಲಿ ಸ್ವಲ್ಪ ಭಿನ್ನವೆನಿಸುವ ವೈಶಿಷ್ಟ್ಯಗಳಿರುವುದು ಸಹಜವಲ್ಲವೆ? ತ್ಯಾಗರಾಜನ್ ಅವರು ಕೂಡ ನಮ್ಮೊಂದಿಗೆ ತಮ್ಮ ನಿವಾಸದಲ್ಲಿ ಸವಿವರವಾಗಿ ಮಾತನಾಡಿದರು. ಪತ್ನಿ ರಮಾ ಅವರೊಂದಿಗೆ ಅವರು ಅಲ್ಲಿ ವಾಸವಿದ್ದಾರೆ. ವಿಶೇಷ ಪರಿಶ್ರಮದ ಮೂಲಕ ದಶಕಗಳಿಂದ ಸಂಗ್ರಹಿಸಿಕೊಂಡು ಬಂದ ಅಮೂಲ್ಯ ಫೋಟೊಗಳಿರುವ ತಮ್ಮ ಆಲ್ಬಮನ್ನೂ ತೋರಿಸಿದರು. […]
Month : May-2017 Episode : Author : ಡಾ|| ಕೆ. ಜಗದೀಶ ಪೈ
ಮನುಷ್ಯನ ಕ್ರಿಯೆ ಆಲೋಚನೆಯಿಂದ ಬರುತ್ತದೆ. ಆಲೋಚನೆ ಭಾವನೆಯಿಂದ ಹುಟ್ಟುತ್ತದೆ. ಪ್ರತಿಯೊಂದು ಆಲೋಚನೆಯ ಹಿಂದೆಯೂ ಒಂದು ಭಾವನೆ ಇರುತ್ತದೆ. ವಿಷಾದ ಭಾವನೆಯ ಬೀಜಬಿತ್ತಿ ಅಮೃತದ ಫಲವನ್ನು ಎಂದೂ ಪಡೆಯಲು ಸಾಧ್ಯವಿಲ್ಲ. ಜೀವನದಲ್ಲಿ ಸತ್ಫಲಗಳು ಸಿಗಬೇಕಾದರೆ ಸದ್ಭಾವನೆಯ ಬೀಜಗಳನ್ನು ಮನಸ್ಸಿನಲ್ಲಿ ಬಿತ್ತಿಕೊಳ್ಳಬೇಕು. ಬದುಕಿನ ಬಗ್ಗೆ ಹಲವರು ಹಲವು ರೀತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಕೆಲವರಿಗೆ ಬದುಕಿನಲ್ಲಿ ನೋವೇ ಕಂಡುಬಂದರೆ, ಇನ್ನು ಕೆಲವರಿಗೆ ನಲಿವೇ ಕಂಡುಬರುತ್ತದೆ. ಕೆಲವರಿಗೆ ಈ ಬದುಕೊಂದು ಆಕಸ್ಮಿಕವಾಗಿ ಕಂಡುಬಂದರೆ, ಇನ್ನು ಕೆಲವರಿಗೆ ಪೂರ್ವಯೋಜಿತವಾಗಿ ಕಂಡುಬರುತ್ತದೆ. ಕೆಲವರಿಗೆ ವ್ಯರ್ಥವಾಗಿ ಕಂಡುಬಂದರೆ, ಮತ್ತೆ […]
Month : May-2017 Episode : ಸಹಸ್ರಾಬ್ದ ಲೇಖನ -1 Author : ಡಾ|| ಎಸ್.ಆರ್. ರಾಮಸ್ವಾಮಿ
ಭಾರತೀಯ ಪ್ರಜ್ಞಾಪರಂಪರೆಯಲ್ಲಿ ಆಚಾರ್ಯ ಅಭಿನವಗುಪ್ತರ ಹಿರಿಮೆ ಸಾವಿರ ವರ್ಷಗಳಿಂದಲೂ ಜನಮಾನಸದಲ್ಲಿ ಉಳಿದುಬಂದಿದೆ. ಹತ್ತನೇ ಶತಮಾನದ ಕೊನೆಯ ಭಾಗದಲ್ಲಿ ಕಾಶ್ಮೀರದಲ್ಲಿ ಜೀವಿಸಿದ್ದ ಅಭಿನವಗುಪ್ತಪಾದರು ಶಿವನ ಅವತಾರವೆಂದೇ ಪ್ರಸಿದ್ಧರು. ಕಲಾಮೀಮಾಂಸೆ, ಭಾಷೆ, ತಂತ್ರಶಾಸ್ತ್ರಗಳಲ್ಲದೆ ಕಾಶ್ಮೀರ ಶೈವದ ಅಂಗವಾದ ಪ್ರತ್ಯಭಿಜ್ಞಾದರ್ಶನಕ್ಕೆ ಮೆರುಗುಕೊಟ್ಟವರು. ಜಗತ್ತಿನ ಹತ್ತು ಮಂದಿ ಶ್ರೇಷ್ಟ ಚಿಂತಕರಲ್ಲಿ ಸೇರತಕ್ಕವರು ಅಭಿನವಗುಪ್ತರು ಎಂಬ ಪರಾಮರ್ಶನೆಯೂ ಉಂಟು. ಭಾರತೀಯ ಬೌದ್ಧಿಕ ವಾರಸಿಕೆಯು ಆಧುನಿಕತೆಯ ಬಿರುಗಾಳಿಗಳಿಗೆ ಸಿಲುಕಿ ನಲುಗುತ್ತಿರುವ ಈಗಿನ ಸಂದರ್ಭದಲ್ಲಿ ಅಭಿನವಗುಪ್ತರಂಥ ಪ್ರತಿಭಾಶಾಲಿಗಳ ವಾರಸಿಕೆಯ ಅನುಸಂಧಾನ ಅತ್ಯಂತ ಅವಶ್ಯವಾಗಿದೆ. ಇದು ಭಾರತೀಯ ಪ್ರಜ್ಞಾಪರಂಪರೆಯ […]
Month : April-2017 Episode : Author :