
ಕರ್ನಾಟಕದ ಪರಿಸರದ ವಲಯಗಳಲ್ಲಿ ಅ.ನ. ಯಲ್ಲಪ್ಪರೆಡ್ಡಿ ಅವರದ್ದು ಆಗಾಗ ಕೇಳಿಬರುವ ಹೆಸರು. ವಿಷಯತಜ್ಞರಾಗಿ ಹಲವು ಸಂದರ್ಭ-ಸನ್ನಿವೇಶಗಳಲ್ಲಿ ಅವರು ದಿಟ್ಟಪಾತ್ರವಹಿಸಿದ್ದಾರೆ. ಹತ್ತು-ಹಲವು ಉನ್ನತಮಟ್ಟದ ಸಮಿತಿ-ಆಯೋಗಗಳಲ್ಲಿದ್ದು ಕಾರ್ಯನಿರ್ವಹಿಸಿದ್ದಾರೆ. ಅವರ ಆತ್ಮಕಥೆಯ ಶೀರ್ಷಿಕೆ – ’ಹಸಿರುಹಾದಿ’. ರಾಜ್ಯ ಅರಣ್ಯ ಇಲಾಖೆಯ ಉನ್ನತ ಹುದ್ದೆಗಳ ಹಸಿರುಹಾದಿಯಲ್ಲಿದ್ದ ಅವರು ನಿವೃತ್ತಿಯ ನಂತರವೂ ’ಹಸಿರು ಹಾದಿ’ಯಲ್ಲೇ ಇದ್ದಾರೆ. ನಾಡಿನ ಭವಿಷ್ಯಕ್ಕೆ ಪರಿಸರ ಸಂರಕ್ಷಣೆ ಎಷ್ಟೊಂದು ಅವಶ್ಯ ಎಂಬುದನ್ನು ಸದಾ ಧ್ಯಾನಿಸುತ್ತಾ, ಸಮಾನ ಮನಸ್ಕರಲ್ಲಿ ಹಂಚಿಕೊಳ್ಳುತ್ತಾ ಇಳಿವಯಸ್ಸಿನಲ್ಲೂ ಅವರ ಉತ್ಸಾಹ ಎಣೆಯಿಲ್ಲದ್ದು. ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಅವರು […]