ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2020

ಪ್ರಕೃತಿಯ ಸೇಡು

ಸಂಪಾದಕೀಯ ವಿಜ್ಞಾನ-ತಂತ್ರಜ್ಞಾನಗಳು ಮಾನವತೆಯ ಹಾಗೂ ಇಡೀ ಜೀವರಾಶಿಯ ಹಿತದ ಸಾಧನೆಗಾಗಿ ಮಾತ್ರ ನಡೆಯುವುದು ಆಪೇಕ್ಷಣೀಯ ಎಂದು ಹೇಳುವುದು ಚರ್ವಿತಚರ್ವಣವಾದೀತು. ಆದರೆ ಇಂದು ತದ್ವಿರುದ್ಧ ಸ್ಥಿತಿಯೇ ಇದೆ. ವೈಜ್ಞಾನಿಕ ಸಂಶೋಧನೆಯ ಸಿಂಹಪಾಲು ಸಮರಸಂಬಂಧಿತ ಆವಿಷ್ಕರಣಗಳಿಗೇ ಮೀಸಲಾಗಿರುತ್ತದೆ. ಎಲ್ಲ ಪ್ರಬಲ ದೇಶಗಳಲ್ಲಿಯೂ ಇದೇ ಸ್ಥಿತಿ ಇದೆ. ಸಮರೋಪಯೋಗಿ ಶೋಧಗಳು ಮುಂದುವರಿದಂತೆ ಸ್ವಯಂ  ವಿಜ್ಞಾನಿಗಳಲ್ಲಿಯೂ ಅವುಗಳ ಪಶ್ಚಾತ್ಪರಿಣಾಮಗಳನ್ನು ನಿಯಂತ್ರಿಸುವ ಶಕ್ತಿ ಉಳಿದಿರುವುದಿಲ್ಲ. ವಿಜ್ಞಾನ-ತಂತ್ರಜ್ಞಾನ ನಿರತರು ಸಾಮಾಜಿಕ ಹೊಣೆಗಾರಿಕೆಯನ್ನು ಆಧಾರಮೌಲ್ಯವಾಗಿ ಸ್ವೀಕರಿಸಿ ವರ್ತಿಸುವುದನ್ನು ಬಿಟ್ಟು ಬೇರೆ ಪರಿಹಾರ ಇರದು; ‘ಮಹತೀವಿನಷ್ಟಿಃ’ ಎಂಬ ದುಷ್ಪರಿಣಾಮಸರಣಿಯಿಂದ […]

ಬೀದಿ ರಂಪಾಟ ಮತ್ತು ಸಾಂವಿಧಾನಿಕತೆ

ಬೀದಿ ರಂಪಾಟ ಮತ್ತು ಸಾಂವಿಧಾನಿಕತೆ

ಕಳೆದೆರಡು ತಿಂಗಳಲ್ಲಿ ಕೊರೋನಾದಷ್ಟೆ ವ್ಯಾಪಕವಾಗಿ ಸುದ್ದಿ ಮಾಡಿರುವ ಘಟನೆಯೆಂದರೆ ರಾಷ್ಟ್ರ ರಾಜಧಾನಿಯಲ್ಲಿನ ಶಹೀನ್‍ಬಾಗ್ ರಸ್ತೆತಡೆ. ಅದು ಅಷ್ಟು ದೀರ್ಘಕಾಲ ನಡೆಯಿತೆಂಬುದೇ ಅದು ಯಾರಿಂದಲೋ ಪೋಷಣೆ ಪಡೆಯುತ್ತಿದ್ದಿರಬೇಕೆಂಬ ಊಹೆಗೆ ಅವಕಾಶ ಮಾಡಿಕೊಟ್ಟೀತು; ಅದು ಹಾಗಿರಲಿ. ಈ ತಥಾಕಥಿತ ‘ಪ್ರತಿಭಟನೆ’ ನಡೆದ ರೀತಿಯು ಗೌರವ ತರುವಂತಹದಲ್ಲ. ರಸ್ತೆತಡೆಗೆ ಅದರ ಪ್ರವರ್ತಕರು ನೀಡಿದ ಕಾರಣ ತಾವು ನಾಗರಿಕತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಪ್ರತಿರೋಧ ತೋರುತ್ತಿದ್ದೇವೆಂಬುದು. ಆದರೆ ಪ್ರತಿಭಟನಕಾರರಲ್ಲಿ ಕಾಯ್ದೆಯ ಯಾವುದೇ ಊಹಿತ ಅಡ್ಡಪರಿಣಾಮಗಳಿಂದ ಬಾಧಿತರಾಗಿದ್ದೇವೆನ್ನಬಲ್ಲವರು ಕಾಣಲಿಲ್ಲವೆಂಬುದೊಂದು ವೈಚಿತ್ರ್ಯ. ಹೀಗಾಗಿ ಇಡೀ ಘಟನೆಯನ್ನು […]

ದೀಪ್ತಿ

ಮನೋ ಧಾವತಿ ಸರ್ವತ್ರ ಮದೋನ್ಮತ್ತ ಗಜೇಂದ್ರವತ್ | ಜ್ಞಾನಾಂಕುಶಸಮಾ ಬುದ್ಧಿಃ ತಸ್ಯ ನಿಶ್ಚಲತೇ ಮನಃ || – ಸುಭಾಷಿತ ರತ್ನಭಾಂಡಾಗಾರ “ಮನಸ್ಸಿನ ಸ್ವಭಾವ ಉನ್ಮಾದಕ್ಕೊಳಗಾದ ಆನೆಯಂತೆ ಎತ್ತೆತ್ತಲೋ ಓಡುತ್ತಿರುವುದು. ಬುದ್ಧಿಯಾದರೋ ಜ್ಞಾನದ ಅಂಕುಶವಿದ್ದಂತೆ; ಅದರಿಂದ ಮನಸ್ಸು ಸ್ತಿಮಿತಕ್ಕೆ ಬರುತ್ತದೆ.” ಮನಸ್ಸಿನ ಚಂಚಲತೆಯನ್ನು ಅರಿತಿದ್ದರೂ ಅನೇಕ ಸಮಯಗಳಲ್ಲಿ ಅದರ ಸೂಚನೆಗಳನ್ನು ಪರೀಕ್ಷಣೆಗೊಳಪಡಿಸದೆ ಯಾಂತ್ರಿಕವಾಗಿ ಅನುಸರಿಸುವುದು ಒಂದು ಮಾನವದೌರ್ಬಲ್ಯ. ಅದರಿಂದ ಎಷ್ಟೋ ಸಂದರ್ಭಗಳಲ್ಲಿ ಹಾನಿಯಾಗುವ ಸಂಭವವಿರುತ್ತದೆ. ಅದು ಜೀವದ ಆಂತರಿಕ ಪಯಣಕ್ಕೂ ಅಪಕರ್ಷಕವಾದೀತು. ಮನೋನಿಯಂತ್ರಣದ ಅಭ್ಯಾಸವು ಅಧ್ಯಾತ್ಮಸಾಧನೆಯ ಒಂದು ಮುಖ್ಯ […]

Qualidade e Testes de Software: Teoria e Prática

• Avaliar se são necessários testes adicionais ou se o critério de saída especificado deve ser alterado. Estabelecer suas causas (por exemplo, defeito no código, em algum dado específico de teste, na documentação de teste ou uma execução de inadequada do teste). • Revisar a base de testes (como requisitos, arquitetura, modelagem, interfaces). Planejamento de […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ