
ಗಾಂಧಿಯವರು ತಮ್ಮನ್ನು ಒಬ್ಬ ಶ್ರಮಿಕ, ಕಾರ್ಮಿಕ ಎಂದು ಸಂತೋಷದಿಂದ ಕರೆದುಕೊಂಡಿದ್ದಾರೆ. ಇದು ಶ್ರಮಿಕರ ಬಗ್ಗೆ ಅವರಿಗಿರುವ ಪ್ರೇಮ, ಗೌರವಾದರಗಳನ್ನು ತಿಳಿಸುತ್ತದೆ. ಅವರು ಹೇಳುತ್ತಾರೆ – “ನಾನು ಒಬ್ಬ ಕಾರ್ಮಿಕ, ನಾನು ನನ್ನನ್ನು ಒಬ್ಬ ಭಂಗಿ, ನೇಯುವವ, ನೂಲುವವ, ಮತ್ತು ಒಬ್ಬ ರೈತ ಎಂದು ಕರೆದುಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ. ಶ್ರಮಿಕವರ್ಗದ ಜೊತೆಗೆ ನನ್ನನ್ನು ಗುರುತಿಸಿಕೊಳ್ಳಲು ನನಗೆ ಹರ್ಷವಾಗುತ್ತದೆ. ಏಕೆಂದರೆ ಶ್ರಮವಿಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ.” ಅನ್ನಕಾಯಕದ ಬಗ್ಗೆ ಹಾಗೂ ಯಂತ್ರಗಳ ಬಳಕೆಯ ಬಗ್ಗೆ ಗಾಂಧಿಯವರಿಗಿದ್ದ ಅಭಿಪ್ರಾಯಗಳನ್ನು ಅರ್ಥಮಾಡಿಕೊಂಡರೆ […]