
ರಾಮಾಯಣವನ್ನು ಎಷ್ಟು ಬಾರಿ ಹೇಗೆ ಓದಿಕೊಂಡರೂ, ಯಕ್ಷಗಾನ, ತಾಳಮದ್ದಳೆಗಳಲ್ಲಿ ಸಂಭಾಷಣೆಗಳನ್ನು ಆಲಿಸಿದರೂ, ಅತ್ಯಂತ ಗೊಂದಲಕ್ಕೋ ಸಂಕಟಕ್ಕೋ ನಮ್ಮನ್ನು ದೂಡುವ ಪ್ರಸಂಗ ಸೀತಾ ಪರಿತ್ಯಾಗ. ಸಾಕ್ಷಾತ್ ಶ್ರೀಲಕ್ಷ್ಮಿಯೇ ಅವಳೆಂದು ತಿಳಿದಿದ್ದರೂ, ಅಗ್ನಿಪರೀಕ್ಷೆಯಲ್ಲಿ ಅವಳು ಪುನೀತೆಯಾಗಿ ಬಂದಿದ್ದರೂ ತುಂಬುಗರ್ಭಿಣಿಯಾದ ಸೀತೆಯನ್ನು ಕೇವಲ ಅಗಸನೊಬ್ಬನ ಮಾತಿಗೆ ಬೆಲೆಕೊಟ್ಟು ಶ್ರೀರಾಮ ಕಾಡಿಗಟ್ಟಿದನೇ? ನಿರಪರಾಧಿ, ನಿರ್ದೋಷಿಯಾದ ಸೀತೆಗೆ ಅಂತಹ ಹೇಯವಾದ ಶಿಕ್ಷೆ ನೀಡಿ ಪ್ರಪಂಚಕ್ಕೆ ರಾಮ ನೀಡಿದ ಪಾಠವಾದರೂ ಏನು? – ಎಂಬುದು ಸಾಮಾನ್ಯವಾಗಿ ನಮಗೆ ಉತ್ತರ ದೊರೆಯದ, ನಾವು ಸುಲಭವಾಗಿ ಸಮರ್ಥಿಸಿಕೊಳ್ಳಲಾಗದ ವಿಷಯ. […]