ಉತ್ಥಾನ ಜುಲೈ 2020
Month : July-2020 Episode : Author :
Month : July-2020 Episode : Author :
Month : July-2020 Episode : Author : ಎಸ್.ಆರ್. ರಾಮಸ್ವಾಮಿ
ತಿಲಕರ ನಿಧನದ ನೂರನೇ ವರ್ಷ ನಿಮಿತ್ತ ಸ್ಮರಣಲೇಖನ ಹತ್ತೊಂಬತ್ತನೇ ಶತಮಾನದ ಕೊನೆಯ ದಶಕದಿಂದ ಆರಂಭಿಸಿ ಮೂರು ದಶಕಗಳ ಕಾಲ ಭಾರತದ ಹೃದಯಸಮ್ರಾಟರೂ ರಾಷ್ಟ್ರನಾಯಕರಲ್ಲಿ ಅಗ್ರಣಿಗಳೂ ಆಗಿದ್ದವರು ತಿಲಕರೆಂಬುದೂ ಸ್ವರಾಜ್ಯಾಭಿಮುಖ ಸಂಘರ್ಷದಲ್ಲಿ ಸಕ್ರಿಯತೆ ತಂದವರು ಅವರೆಂಬುದೂ ವಿವಾದಾತೀತ. ಸ್ವಾತಂತ್ರ್ಯೇತಿಹಾಸಕ್ಕೆ ನಿರ್ಣಾಯಕ ತಿರುವನ್ನು ನೀಡಿದವರು ಅವರು. ಇದು ಸಾಧ್ಯವಾದದ್ದು ಅವರ ನಿಶಿತ ಪ್ರತಿಭೆ, ತೀಕ್ಷ್ಣ ವೈದುಷ್ಯ, ಅಸೀಮ ನಿಃಸ್ವಾರ್ಥ ಮೊದಲಾದ ವ್ಯಕ್ತಿಗುಣಗಳಿಂದ. ಧ್ಯೇಯಸಾಧನೆಗಾಗಿ ಅವರಂತೆ ಸರ್ವಸ್ವಾರ್ಪಣೆ ಮಾಡಿದವರ ನಿದರ್ಶನಗಳು ಇತಿಹಾಸದಲ್ಲಿ ವಿರಳವಾಗಷ್ಟೆ ದೊರೆಯುತ್ತವೆ. ಸಮಾಜೋಜ್ಜೀವನ ಪಶ್ಚಿಮಭಾರತದಲ್ಲಿ ‘ಆಧುನಿಕ’ ಶಿಕ್ಷಣವ್ಯವಸ್ಥೆ 19ನೇ […]
Month : July-2020 Episode : Author : ಡಾ| ಮನಮೋಹನ್ ವೈದ್ಯ
ಕೊರೋನಾ ವೈರಸ್ ಇಡೀ ಜಗತ್ತನ್ನು ನಿಶ್ಚೇಷ್ಟಿತಗೊಳಿಸಿದ ಸಂದರ್ಭವನ್ನು ನಾವು ಗಮನಿಸಿದೆವು; ಮುಂದೆ ಯಾವ ದಿಕ್ಕಿನಲ್ಲಿ ಸಾಗಬೇಕೆಂದು ಇಡೀ ಜಗತ್ತು ಈಗ ಚಿಂತಿತವಾಗಿದೆ ಎಂದರೆ ತಪ್ಪಲ್ಲ. ಇಂತಹ ಸನ್ನಿವೇಶದಲ್ಲಿ ಭಾರತವು ಒಂದು ಹೆಜ್ಜೆ ಮುಂದಿಟ್ಟು ಜಗತ್ತಿಗೆ ಸಾಂತ್ವನ ಮತ್ತು ಭರವಸೆಗಳನ್ನು ನೀಡಬಹುದೆ? ‘ಹೌದು’ ಎನ್ನುವುದೇ ಇದಕ್ಕೆ ಉತ್ತರ. ಕೊರೋನಾ ವೈರಸ್ ತಂದ ಆಪತ್ತಿನಿಂದಾಗಿ ಭೂಮಿ ತಿರುಗುವುದನ್ನು ಬಿಟ್ಟು ಉಳಿದೆಲ್ಲವೂ ನಿಶ್ಚೇಷ್ಟಿತಗೊಂಡವು. ತಲೆಯ ಮೇಲೆ ಕರ್ಕಶ ಸದ್ದಿನೊಂದಿಗೆ ಜೆಟ್ ವಿಮಾನಗಳ ಹಾರಾಟ ಇರಲಿಲ್ಲ. ರೈಲುಗಳು ತಮ್ಮ ನಿರಂತರ ಓಡಾಟವನ್ನು ನಿಲ್ಲಿಸಿದ್ದವು. […]
Month : July-2020 Episode : Author :
ಬೆಳೆದು ಬೆಳಗಲಿ ಭಾರತ | ನನ್ನಾತ್ಮನಿರ್ಭರ ಭಾರತ || ಅಂಕೆ ಸೂತ್ರವ ಮರೆತ ಮಾನವ ಮೆರೆದ ಹಮ್ಮಿನ ಜಾಲದಿ ಅಗೋಚರ ಕ್ರಿಮಿಯೊಂದದು ಕೆಡವಿತವನನು ಮಾಯದಿ | ದುಡಿದು ತಿನ್ನುವ ಕೈಗಳೆಲ್ಲವು ಬೇಡಿ ಬದುಕುವ ಕಾಲವು ಕಾಲ್ನಡಿಗೆಗೆ ದಾರಿ ಸವೆದು ಸೊರಗಿಹೋದವು ಕಂಗಳು || ಬೆಳೆದು ಬೆಳಗಲಿ ಭಾರತ | ನನ್ನಾತ್ಮನಿರ್ಭರ ಭಾರತ || ಜಗವೆ ತಲ್ಲಣಗೊಂಡ ವೇಳೆಗೆ ಭಾರತಾಂಬೆ ಕಣ್ತೆರೆದಳು ಬಂದಿಯಾಗುತ ಬೇಲಿಯೊಳಗೆ ತಾನೆ ಸಾವನು ಗೆದ್ದಳು | ಆದರಿದು ವಿಶೇಷವಲ್ಲವು ಮುಂದೆ ಇರುವುದೇ ಸಾಹಸ ಬದುಕು […]
Month : July-2020 Episode : Author : ದತ್ತಾತ್ರೇಯ ಹೊಸಬಾಳೆ
ಸಮರ್ಥ ಭಾರತವನ್ನು ಕಟ್ಟಬೇಕಾದರೆ ಅಂತಹ ಭಾರತದ ಚಿತ್ರ ಹೇಗಿರಬೇಕು ಎಂಬ ಕನಸನ್ನು ನಾವು ನಮ್ಮ ಮುಂದಿಟ್ಟುಕೊಳ್ಳಬೇಕು. ಸ್ವಾಮಿ ವಿವೇಕಾನಂದರು, ಗಾಂಧಿಯವರು (ಈ ಕುರಿತು ‘ಮೇರೇ ಸಪ್ನೋಂ ಕಾ ಭಾರತ್’ ಎಂಬ ಗಾಂಧಿಯವರ ಪುಸ್ತಕವಿದೆ.) ಸೇರಿದಂತೆ ಅನೇಕ ಮಹಾಪುರುಷರು ಬೇರೆಬೇರೆ ಸಂದರ್ಭಗಳಲ್ಲಿ ಭಾರತದ ಬಗೆಗಿನ ತಮ್ಮತಮ್ಮ ಚಿತ್ರಣಗಳನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಸಮರ್ಥ ಭಾರತವೆಂದರೆ ಅದು ಒಗ್ಗಟ್ಟಿನ ಏಕಾತ್ಮ ಭಾರತ. ಅನೇಕ ರಾಜ್ಯಗಳು, ಭಾಷೆಗಳು, ಮತ ಪಂಥ ಸಂಪ್ರದಾಯಗಳು, ಹೀಗೆ ವಿಭಿನ್ನ ರೀತಿಯಲ್ಲಿರುವ ವೈವಿಧ್ಯಮಯ ದೇಶ ಭಾರತ. ಇಲ್ಲಿ […]
Month : June-2020 Episode : Author :
ಟಿಪ್ಪು ಸುಲ್ತಾನ್ ದೇಶಪ್ರೇಮಿಯೋ ಅಲ್ಲವೋ? ಆತ ನಡೆಸಿದ್ದು ಸ್ವಾತಂತ್ರ್ಯ ಹೋರಾಟವೋ ಅಲ್ಲವೋ ಎನ್ನುವುದು ನಮ್ಮಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ನಮ್ಮಲ್ಲಿ ಸಾಮಾನ್ಯವಾಗಿ ಕಾಣುವಂತೆ ಇದನ್ನು ಎರಡೂ ಕಡೆಯಿಂದ ಬಹಳ ಶಕ್ತಿಶಾಲಿಯಾಗಿ ವಾದಿಸಲಾಗುತ್ತದೆ. ಕೆಲವರದ್ದು ಕೇವಲ ವಾದಕ್ಕಾಗಿ ವಾದ ಅನ್ನಿಸಿದರೂ ಕೂಡ ಒಂದಷ್ಟು ಜನರಲ್ಲಿ ಇದರಿಂದ ಪೂರ್ತಿ ಗೊಂದಲ ಉಂಟಾಗುವುದಂತೂ ಸತ್ಯ. ವಿವಾದದ ಸ್ವರೂಪವನ್ನು ಪಡೆಯುವ ಈ ಚರ್ಚೆ, ವಾದಗಳಿಂದ ನಿಜವಾದ ದೇಶಪ್ರೇಮಿಗಳೂ ಸ್ವಾತಂತ್ರ್ಯ ಯೋಧರೆಂದು ಕರೆಯಿಸಿಕೊಳ್ಳಲು ಸರ್ವಥಾ ಅರ್ಹರೂ ಆದ ಅದೆಷ್ಟೋ ಜನರಿಗೆ ಯಾವಾಗಲೂ ಅನ್ಯಾಯ […]
Month : June-2020 Episode : Author : ಎಸ್.ಆರ್. ರಾಮಸ್ವಾಮಿ
ಸ್ವದೇಶೀ, ಪರಿಸರಸ್ವಾಸ್ಥ್ಯ, ಸರಳಜೀವನ – ಈ ವಿಷಯಗಳ ಬಗೆಗೆ ಐವತ್ತರವತ್ತು ವರ್ಷದಿಂದ ಮಾತನಾಡಿದ್ದೇನೆ, ಬರೆದಿದ್ದೇನೆ. ಈಗಲೂ ಇವುಗಳ ಬಗೆಗೆ ನಾಲ್ಕು ಮಾತುಗಳನ್ನಾಡಬೇಕೆಂದು ಸೂಚಿಸಿದ್ದಾರೆ, ಇರಲಿ. ಈ ಅವಧಿಯಲ್ಲಿ ಉಸಿರು ಸಹಕರಿಸುವಷ್ಟು ಸಮಯದಲ್ಲಿ ನಾನು ಸ್ವದೇಶೀ, ಪರಿಸರ – ಇವುಗಳನ್ನು ಕುರಿತ ನಮ್ಮ ಚಿಂತನೆಯ ಹಿನ್ನೆಲೆಯ ತಾತ್ತ್ವಿಕತೆ ಏನು ಎಂದು ಸಂಕ್ಷಿಪ್ತವಾಗಿ ತಿಳಿಸಲು ಯತ್ನಿಸುತ್ತೇನೆ. ಆ ದರ್ಶನವನ್ನು ಗ್ರಹಿಸಿದರೆ ನಿಮ್ಮ ನಿಮ್ಮ ಚಿಂತನೆಯನ್ನು ನೀವೇ ರೂಪಿಸಿಕೊಳ್ಳಬಹುದು. ನಾನು ’ಇದು ಸ್ವದೇಶೀ’, ’ಇದು ಸ್ವದೇಶೀ ಅಲ್ಲ’ ಎಂದು ಪಟ್ಟಿಮಾಡುವುದು ಪ್ರಯೋಜನಕರವಾಗುವುದಿಲ್ಲ. […]
Month : June-2020 Episode : Author :
ಈಗ್ಗೆ ಹದಿಮೂರು ತಿಂಗಳ ಹಿಂದೆ (30 ಮೇ 2019) ಎರಡನೇ ಬಾರಿಗೆ ಭಾಜಪಾ ನೇತೃತ್ವದ ಎನ್.ಡಿ.ಎ. ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ರಾಷ್ಟ್ರಜೀವನದ ಚಹರೆಯೇ ಬದಲಾಗಿದೆಯೆಂದರೆ ಹೆಚ್ಚು ಹೇಳಿದಂತಾಗಲಿಲ್ಲ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ 370ನೇ ವಿಧಿಯ ರದ್ಧತಿ, ನೆರೆಯ ರಾಷ್ಟ್ರಗಳಲ್ಲಿ ಅವರ್ಣನೀಯ ಕಿರುಕುಳಗಳಿಗೊಳಗಾಗಿದ್ದ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಿಕೆ ಮೊದಲಾದ ಕ್ರಮಗಳು ಇತಿಹಾಸಾರ್ಹ. ಬಹುತೇಕ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸೌಕರ್ಯ, ಬಡವರಿಗೆ ಸವಲತ್ತುಗಳ ನೇರ ವರ್ಗಾವಣೆ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಪ್ರೋತ್ಸಾಹನ ಮತ್ತು ಅದರ […]
Month : June-2020 Episode : Author :
ಉತ್ಥಾನ ಮಾಸಪತ್ರಿಕೆ ಕಳೆದ 6 ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಸಂಶೋಧನಾ ಪ್ರಬಂಧವನ್ನು ನಡೆಸುತ್ತಿದ್ದು, ಈ ವರ್ಷ ಜಲಸಂರಕ್ಷಣೆ : ಏಕೆ? ಹೇಗೆ ಎಂಬ ವಿಷಯದ ಕುರಿತು ನಡೆದ ಸ್ಪರ್ಧೆ ನಡೆಯಿತು. ಫಲಿತಾಂಶ ಹೀಗಿದೆ. ಪ್ರಥಮ ಬಹುಮಾನ : ವಿನಯ ಆರ್. ಭಟ್, ದ್ವಿತೀಯ ಎಂ.ಕಾಂ. , ಸ್ನಾತಕೋತ್ತರ ಅಧ್ಯಯನ ಕೇಂದ್ರ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ದ್ವಿತೀಯ ಬಹುಮಾನ: ಪವಿತ್ರಾ ಮಹಾದೇವಪ್ಪ ಹೂಗಾರ , ಬಿ.ಕಾಂ. ಅಂತಿಮ ವರ್ಷ, ಶ್ರೀ ಜಗದ್ಗುರು ಫಕೀರೇಶ್ವರ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ, ಶಿರಹಟ್ಟಿ. ತೃತೀಯ ಬಹುಮಾನ : ಶ್ರೀದೇವಿ […]
Month : May-2020 Episode : Author : ಸಿ.ಎ.ಆರ್. ಸುಂದರಮ್
ಕೊರೋನಾದಿಂದ ಆರ್ಥಿಕತೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಹೊರಬರಲು ಮತ್ತು ಅನಂತರ ಅಭಿವೃದ್ಧಿಯ ಒಂದು ಪಥವನ್ನು ಹಿಡಿಯುವ ಸಲುವಾಗಿ ಅನುಸರಿಸಬಹುದಾದ ನಮ್ಮದಾದ ಸ್ವದೇಶೀ ಮಾದರಿಗಳ ಬಗ್ಗೆ ವಿವರಿಸುವುದು ಈಗ ಅಗತ್ಯವೆನಿಸಿದೆ. ಈ ನಿಟ್ಟಿನಲ್ಲಿ ನನ್ನ ಚಿಂತನೆಯನ್ನು ಇಲ್ಲಿ ವಿವರಿಸಬಯಸುತ್ತೇನೆ. 1. ಕೋವಿಡ್-19ನ್ನು ಒಂದು ತಲೆಮಾರಿಗೊಮ್ಮೆ ಬರಬಹುದಾದ Black Swan Event ಎಂದು ಬಣ್ಣಿಸಲಾಗಿದ್ದು, ಕಳೆದ ನಾಲ್ಕು ತಿಂಗಳುಗಳಲ್ಲಿ ಇದು ಇಡೀ ಜಗತ್ತನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ; ಮತ್ತು ಇದರಿಂದ ನಮ್ಮ ದೇಶ ಕೂಡ ಬಚಾವಾಗಿಲ್ಲ. ಆದರೆ ದೊಡ್ಡ ಸಮಾಧಾನ ಕೊಡುವ […]