
* ಸಂತ ಜ್ಞಾನೇಶ್ವರ ಮಹಾರಾಜರು ವೃಕ್ಷಗಳಿಗೆ ಫಲಗಳುಂಟಾಗಲು, ಅವುಗಳ ವಯಸ್ಸಿಗಿಂತ ವಸಂತನ ಕೃಪೆಯೇ ಕಾರಣವಾಗಿದೆ. ಅದರಂತೆ ವಯಸ್ಸಿನಿಂದ ವಿರಾಗಿಯು ಚಿಕ್ಕವನಾದಾಗ್ಯೂ ವೈರಾಗ್ಯರೂಪವಾದ ವಸಂತನ ಭರದಿಂದ ಸೋಹಂಭಾವವೆಂಬ ಮಗ್ಗೆಯಿಂದ ತೀರ ಬಾಗಿರುವನು ಎಂದರೆ, ಈತನಲ್ಲಿ ತೀವ್ರ ಬಯಕೆಯಿದೆ. ಆದ್ದರಿಂದ ಫಲಪ್ರಾಪ್ತಿಯಾಗಲು ಈತನಿಗೆ ತಡವಾಗದು. ಈತನು ಪೂರ್ಣ ವಿರಕ್ತನಾಗಿರುವನೆಂದು ಭಗವಂತನು ಮನಗಂಡನು. ದೇವನು “ಈತನು ಮಾಡುವ ಪ್ರತಿಯೊಂದು ಅನುಷ್ಠಾನಕ್ಕೆ ತೀವ್ರವೇ (ಶೀಘ್ರವೇ) ಫಲವು ದೊರಕುವುದು. ಆದ್ದರಿಂದ ಇವನಿಗೆ ಹೇಳಿದ ಅಭ್ಯಾಸವು ವ್ಯರ್ಥವಾಗದು” ಎಂದು ಹೇಳಿದನು. ಅರ್ಜುನನಿಗೆ: “ಅರ್ಜುನ! ಶ್ರೇಷ್ಠ ಮಾರ್ಗವಾದ […]