
ಹೀಗೆ ದಕ್ಕಿಸಿಕೊಳ್ಳಬಹುದಾದ ಕರ್ನಾಟಕ ಸ್ವಾತಂತ್ರ್ಯಕಥನ ಜನಪ್ರಿಯ ಹಿಂದಿ ಚಲನಚಿತ್ರ ‘ಲಗಾನ್’ ನೆನಪಿದೆಯಲ್ಲ? ಬ್ರಿಟಿಷರಿಗೆ ತೆರಿಗೆ ನೀಡಲಾಗದ ಹಳ್ಳಿಯೊಂದರ ಹೋರಾಟದ ಕಥೆ. ಸೆಪ್ಟೆಂಬರ್ ೨೮, ೧೯೪೨ ಅವತ್ತು ಕರ್ನಾಟಕದ ಹಳ್ಳಿಯೊಂದರಲ್ಲಿ ‘ಲಗಾನ್’ದೃಶ್ಯಗಳು ಇನ್ನೂ ಗಂಭೀರವಾಗಿ ತೆರೆದುಕೊಂಡಿದ್ದವು. ಅಲ್ಲಿ ಬ್ರಿಟಿಷರೊಡನೆ ಚೆಂಡುದಾಂಡು ಆಡಿ ತೆರಿಗೆ ನಿಷ್ಕರ್ಷೆ ಮಾಡುವ ಪ್ರಸ್ತಾವವೇ ಇರಲಿಲ್ಲ. ನಾವು ಬ್ರಿಟಿಷರಿಗೆ ತೆರಿಗೆ ಕೊಡೊಲ್ಲ ಅಂದರೆ ಕೊಡೊಲ್ಲ ಅಷ್ಟೆ. ಹಾಗಂತ ಶಿಕಾರಿಪುರದ ಬಳಿಯಿರುವ ಈಸೂರು ಜನರೆಲ್ಲ ಒಂದುಗೂಡಿ ನಿರ್ಧರಿಸಿದರು. ಗ್ರಾಮದ ಎದುರು ಸ್ವರಾಜ್ಯ ಸರ್ಕಾರ ಎಂದು ಬೋರ್ಡು ಹಾಕಿ […]