‘ದ್ವಾತ್ರಿಂಶತ್ ಪುತ್ತಲಿಕಾ ಸಿಂಹಾಸನಮ್’ ಕಥೆಗಳು ವಿಕ್ರಮನನ್ನು ನೋಡಿ ಕಾಮಧೇನು ಆರ್ತನಾದ ಮಾಡಿತು. ಆ ಶಬ್ದವನ್ನು ಕೇಳಿ ಕರುಣೆಯಿಂದ ಹತ್ತಿರಕ್ಕೆ ಬಂದ ವಿಕ್ರಮನು ಅದನ್ನು ಕೆಸರಿನಿಂದ ಎತ್ತಲು ಪ್ರಯತ್ನ ಮಾಡಿದನು. ಆಗಲೇ ಸೂರ್ಯಾಸ್ತ್ತವಾಗಿತ್ತು. ಪುನಃ ಭೋಜರಾಜನು ಸಿಂಹಾಸನವನ್ನು ಏರಲು ಬಂದಾಗ ಮತ್ತೊಂದು ಗೊಂಬೆಯು ಅವನನ್ನು ತಡೆದು “ರಾಜನ್! ವಿಕ್ರಮನ ಸದೃಶವಾದ ಔದಾರ್ಯಾದಿಗುಣಗಳು ನಿನ್ನಲ್ಲಿದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು. ಅದನ್ನು ಕೇಳಿ ಭೋಜರಾಜನು “ಗೊಂಬೆಯೇ, ಅವನ ಔದಾರ್ಯಾದಿ ಗುಣಗಳ ಬಗ್ಗೆ ತಿಳಿಸು”ಎಂದಾಗ ಗೊಂಬೆಯು ಕಥೆಯನ್ನು ಆರಂಭಿಸಿತು. ಒಮ್ಮೆ ಸ್ವರ್ಗದಲ್ಲಿ […]










