
ಅಪ್ಪಯ್ಯ ತೋಟದಲ್ಲಿ ಎಲ್ಲಾದರೂ ಒಂದೆರಡು ದೊಡ್ಡ ಜೇನುನೊಣಗಳನ್ನು ನೋಡಿದರೆ ಅವುಗಳನ್ನು ಹಿಂಬಾಲಿಸಿ ಹೋಗಿ ಅವುಗಳ ಗೂಡಿರುವ ಜಾಗ ಪತ್ತೆ ಹಚ್ಚುತ್ತಿದ್ದರು. ಅಮವಾಸ್ಯೆಗೆ ಎದುರಾಗಿ (ಹುಣ್ಣಿಮೆಗೆ ಎದುರಾಗಿ ಸರಿಯಾಗಿ ನೆನಪಿಲ್ಲ) ಜೇನುತಟ್ಟಿ ತೆಗೆದರಷ್ಟೇ ಪೂರ್ತಿ ತುಪ್ಪವಿರುವ ರಸಭರಿತ ಜೇನು ಸಿಗುವುದೆಂಬ ಲೆಕ್ಕಾಚಾರ ಹಿಂದಿನವರಿಗೆ ತಿಳಿದಿತ್ತು. ಪ್ರಕೃತಿಯ ಬಗ್ಗೆ ಕಣಕಣದ ಮಾಹಿತಿಕಣಜ ಕೆದಕುವ ಮನವುಳ್ಳವರು ಪೂರ್ಣಚಂದ್ರ ತೇಜಸ್ವಿಯವರು ಬರೆದ ಪುಸ್ತಕಗಳ ಪ್ರಿಯರಾಗಿರುತ್ತಾರೆ. ಪ್ರಕೃತಿಯ ಒಂದು ಸಪ್ಪಳವನ್ನೂ ಹಪ್ಪಳ ತಿನ್ನುವಾಗ ಬರುವ ಸಶಬ್ಧ ರುಚಿಯಂತೆ ಚಿತ್ರಿಸುವ ಕಲೆ ಪೂರ್ಣಚಂದ್ರರಿಗೆ ಒಲಿದಿದೆ. ಒಲಿದಿದೆ […]