
ಇಲ್ಲಿಯವರೆಗೆ… ಮಹೇಶ್ ಮಿಸ್ತ್ರಿ ದೇಶದಲ್ಲಿಯೆ ದೊಡ್ಡ ಉದ್ಯಮಪತಿ ಎನಿಸಿದ್ದ. ಎಂದೂ ಹಣಕ್ಕೆ ಕೊರತೆಯಾಗದ ರಕ್ಷಣಾ ಇಲಾಖೆಯ ಪ್ರಮುಖ ಕಾಂಟ್ರಾಕ್ಟುಗಳನ್ನೆಲ್ಲ ತೆಕ್ಕೆಗೆ ಹಾಕಿಕೊಂಡಿದ್ದ. ಭವಿಷ್ಯದಲ್ಲಿ ಇಡೀ ಜಗತ್ತನ್ನೇ ತನ್ನ ಕೈಗೊಂಬೆಯಾಗಿಸಬಲ್ಲ ಮಟ್ಟದ ಅತಿ ಪ್ರೌಢ ಪ್ರಯೋಗಗಳಿಗಾಗಿ ನಾಗಪುರದ ಸಮೀಪದಲ್ಲಿ ಸಯನ್ಸ್ ಸಿಟಿಯೊಂದನ್ನು ನಿರ್ಮಿಸಿದ್ದ. ಅಲ್ಲಿ ಪ್ರಯೋಗನಿರತರಾಗಿದ್ದ ಮೇಧಾವಿ ಅವಧೂತ್ ಕೊನೆಯ ಹಂತದಲ್ಲಿ ಅದೇಕೊ ಜಿಹಾಸೆ ತಳೆದು ಸಂಶೋಧನೆಯನ್ನು ಮುಂದುವರಿಸಲಾರೆನೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡರು. ಶೋಧಕಾರ್ಯವನ್ನು ಪೂರ್ಣಗೊಳಿಸಲು ದೆಹಲಿ ಐ.ಐ.ಟಿ.ಯ ಪ್ರತಿಭಾವಂತ ವಿದ್ಯಾರ್ಥಿ ಮಯಾಂಕ್ನನ್ನು ಕ್ಯಾಂಪಸ್ ಇಂಟರ್ವ್ಯೂನಲ್ಲಿ ಮಿಸ್ತ್ರಿ ಆಯ್ಕೆ […]