ಕರುನಾಡಿನಲ್ಲಿ 1857ರ ದಾವಾನಲ
Month : November-2022 Episode : Author :
Month : November-2022 Episode : Author :
Month : November-2022 Episode : Author : ಎಚ್ ಮಂಜುನಾಥ ಭಟ್
ಪಶ್ಚಿಮಘಟ್ಟದ ಸಂರಕ್ಷಣೆಯ ಅಗತ್ಯವನ್ನು ಮನಗಂಡ ಸುಪ್ರೀಂಕೋರ್ಟಿನ ಹಸಿರುಪೀಠ ಮತ್ತು ಕೇಂದ್ರಸರ್ಕಾರಗಳು ಈ ಸಂಬಂಧವಾಗಿ ಚಾಲನೆಗೊಂಡ ಉಪಕ್ರಮಗಳನ್ನು ಗುರಿಮುಟ್ಟಿಸಬೇಕೆಂದು ನಿರಂತರವಾಗಿ ಶ್ರಮಿಸುತ್ತಿವೆ. ಆದರೆ ಸಂಬಂಧಪಟ್ಟ ರಾಜ್ಯಗಳಲ್ಲಿ ಅಂತಹ ಉತ್ಸಾಹ ಕಾಣಿಸುತ್ತಿಲ್ಲ. ಕಸ್ತೂರಿರಂಗನ್ ಸಮಿತಿಯು ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು ಸದ್ಯದ ಅಗತ್ಯವಾಗಿದೆ. ಕೇರಳದಂತಹ ಕೆಲವು ರಾಜ್ಯಗಳು ಈ ನಿಟ್ಟಿನಲ್ಲಿ ಸ್ವಲ್ಪವಾದರೂ ಕಾರ್ಯಪ್ರವೃತ್ತವಾಗಿ ತಮ್ಮಿಂದ ಎಷ್ಟು ಸಾಧ್ಯ ಎಂಬುದನ್ನಾದರೂ ಹೇಳಿವೆ. ಕರ್ನಾಟಕ ರಾಜ್ಯದ ವಿವಿಧ ಸರ್ಕಾರಗಳು ಪಕ್ಷಭೇದವಿಲ್ಲದೆ “ನೀವು ಏನು ಬೇಕಾದರೂ ಮಾಡಿಕೊಳ್ಳಿ. ನಮ್ಮಲ್ಲಿ ಜಾರಿ ಅಸಾಧ್ಯ” ಎಂದೇ ಹೇಳುತ್ತ ಬಂದಿವೆ; […]
Month : November-2022 Episode : Author : ಬಿ.ಪಿ. ಪ್ರೇಮಕುಮಾರ್
ಡಾ. ವಿ.ಡಿ. ದಿವೇಕರ್ ಅವರು ತಮ್ಮ ಕೃತಿ ‘ಸೌತ್ ಇಂಡಿಯ ಇನ್ 1857 ವಾರ್ ಆಫ್ ಇಂಡಿಪೆಂಡೆನ್ಸ್’ನಲ್ಲಿ ಸಾಕಷ್ಟು ವಿವರಗಳನ್ನು ಶೋಧಿಸಿ ಪ್ರಕಟ ಮಾಡಿದ್ದಾರೆ. (ಈ ಕೃತಿಯನ್ನು ದು.ಗು. ಲಕ್ಷ್ಮಣರವರು ಕನ್ನಡಕ್ಕೆ ಅನುವಾದಿಸಿದ್ದಾರೆ.) ಈ ದಾವಾನಲದ ಬಿಸಿ ಕನ್ನಡ ನಾಡಿಗೂ ತಟ್ಟಿದ್ದುದರಲ್ಲಿ ಆಶ್ಚರ್ಯವಿಲ್ಲ. ಈ ‘ವಿದ್ರೋಹ’ದಲ್ಲಿ ಕರುನಾಡಿನ ಮೈಸೂರು ಸಂಸ್ಥಾನ ಹೆಚ್ಚಿನ ಕೊಡುಗೆಯನ್ನು ನೀಡದಿದ್ದರೂ ಬೆಂಗಳೂರಿನ ದಂಡುಪ್ರದೇಶ, ಜಮಖಂಡಿ, ಬಿಜಾಪುರ, ಬೆಳಗಾವಿ, ಕಾರವಾರ ಮೊದಲಾದ ಪ್ರದೇಶಗಳಲ್ಲಿ ಇದರ ಬಿಸಿ ತಟ್ಟಿದ್ದುದು ಗಮನಾರ್ಹವಾಗಿದೆ. 1857ರ ಮೇ ಹತ್ತರಂದು ಮೀರಠ್ನ […]
Month : November-2022 Episode : Author : ಡಾ.ನಾ.ಮೊಗಸಾಲೆ
ವಿಶೇಷ ಲೇಖನ -ಡಾ. ನಾ. ಮೊಗಸಾಲೆ ಇಂಗ್ಲಿಷಿನ ಮೂಲಕ ಕನ್ನಡಕ್ಕೆ ಬಂದ ಕಾವ್ಯ ಪ್ರಕಾರವನ್ನು ನಮ್ಮ ಜನ ‘ಕಾವ್ಯ’, ‘ಕವನ’, ‘ಪದ್ಯ’, ‘ಗೀತೆ’ ಮೊದಲಾದ ಹೆಸರಿನಲ್ಲಿ ಸ್ವೀಕರಿಸಿದರು. 1955ರ ಸುಮಾರಿಗೆ ಕನ್ನಡದಲ್ಲಿ ನವ್ಯಸಾಹಿತ್ಯ ಸೃಷ್ಟಿಯಾದ ಸಂದರ್ಭದಲ್ಲಿ ಯಾವುದನ್ನು ಕಾವ್ಯ, ಕವನ, ಗೀತೆ, ಪದ್ಯ ಎಂದು ಕರೆಯಬೇಕೆಂಬ ವಿಚಾರ ಮುನ್ನೆಲೆಗೆ ಬಂತು. ನವೋದಯ ಪ್ರಕಾರದಲ್ಲಿ ಬಂದವುಗಳನ್ನೆಲ್ಲ ವಿಮರ್ಶೆಯ ಸುಖಕ್ಕಾಗಿ ವಿಮರ್ಶಕರು ಪದ್ಯ, ಗೀತೆ ಎಂಬುದಾಗಿ ಕರೆದರು. ಅದೇ ಹೊತ್ತಿಗೆ ಮುಕ್ತಛಂದದಲ್ಲಿ ಬರುತ್ತಿದ್ದ ಕವಿತೆಗಳನ್ನೂ ಕವಿತೆ, ಕವನ, ಕಾವ್ಯ ಎಂದು […]
Month : November-2022 Episode : Author : ಹರ್ಷವರ್ಧನ ವಿ. ಶೀಲವಂತ
ಪ್ರವಾಸ ಕಥನ ಮಹರ್ಷಿ ಅರವಿಂದರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 15ರಿಂದ ಅವರ ತಪೋನುಷ್ಠಾನದಿಂದ ಪುನೀತವಾದ ಪುಣ್ಯಭೂಮಿ ಪುದುಚೇರಿಯ ಅರವಿಂದೊ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳು ಸಪ್ತಾಹಪೂರ್ತಿ ಏರ್ಪಾಡಾಗಿದ್ದವು. ಮಹರ್ಷಿ ಅರವಿಂದರು 21 ವರ್ಷಗಳ ಕಾಲ ಕರ್ಮಸಿದ್ಧಾಂತ ಬೋಧಿಸಿದ ಮತ್ತು ಅಧ್ಯಾತ್ಮ ಸಾಧನೆಗೈದ ಶ್ರಮದÀ ಸಾಧನಾ ಕೊಠಡಿಯನ್ನು ಸಂದರ್ಶಕರಿಗಾಗಿ ತೆರೆದಿರಿಸಲಾಗಿತ್ತು. ಪ್ರಥಮ ಬಾರಿಗೆ ಪಾಂಡಿಚೇರಿಗೆ ಬಂದಾಗ ಅರವಿಂದರು 4.6 ತಿಂಗಳು ಉಳಿದುಕೊಂಡ ಶಂಕರಚೆಟ್ಟಿ ಅವರ ಮನೆ ಸೇರಿ, 40 ವರ್ಷಗಳಲ್ಲಿ 7 ನಿವಾಸಗಳನ್ನು ಬದಲಿಸುತ್ತಾರೆ. ಎಲ್ಲವೂ ಶ್ರದ್ಧಾಳುಗಳಿಗೆ […]
Month : November-2022 Episode : Author : ಟಿ.ಎ. ಪಿ. ಶೆಣೈ
ಮುಖಪುಟ ಲೇಖನ -1- 908ರ ಅಲಿಪುರ ಬಾಂಬ್ ಪ್ರಕರಣದಲ್ಲಿ (ಅದನ್ನು ಮಾಣಿಕತಲಾ ಬಾಂಬ್ ಪ್ರಕರಣವೆಂದೂ ಕರೆಯುತ್ತಾರೆ) ಅರವಿಂದ ಘೋಷರೂ ಆರೋಪಿಗಳಾಗಿದ್ದರು. ಅವರ ಮೇಲೆ ರಾಜದ್ರೋಹ ಮತ್ತು ಒಳಸಂಚಿನ ಆರೋಪವಿದ್ದಿತು. ಆ ಪ್ರಕರಣದಲ್ಲಿ ಅರವಿಂದರ ಪರವಾಗಿ ವಾದಿಸಿದವರು ಬಂಗಾಳದ ಜನನಾಯಕರೆಂದು ಹೆಸರಾದ ಚಿತ್ತರಂಜನ್ ದಾಸ್ ಅವರು. ಅವರು ತಮ್ಮ ವಾದದ ಸಾರಾಂಶವೆಂಬಂತೆ ನ್ಯಾಯಾಧೀಶರಿಗೆ ಮಾಡಿದ ಕೊನೆಯ ಮನವಿಯು ಹೃದಯಸ್ಪರ್ಶಿಯಾಗಿದ್ದಿತು. ಆರೋಪಿಯಾದ ಅರವಿಂದರ ಬಗ್ಗೆ ವಿವರಿಸುತ್ತ ಅವರು “ಈವರೆಗೆ ಎದ್ದ ಎಲ್ಲ ವಾದ-ವಿವಾದಗಳೂ ಕೊನೆಗೊಂಡು ಹಲವು ವರ್ಷಗಳೇ ಕಳೆದಮೇಲೆ ನಡೆಯುತ್ತಿರುವ […]
Month : November-2022 Episode : Author : ಡಿ.ವಿ. ಬಡಿಗೇರ
ಸಿಹಿ ಇರಲಿ ಕಹಿ ಇರಲಿ ಏನೇ ಇರಲಿ ನಿಲುಕದ ದ್ರಾಕ್ಷಿಗೆ ಕೈಚಾಚದಿರಬೇಕು ಹಿತ್ತಲದ ಮದ್ದು ಹಿತವೆಂದು ಬಗೆದು ಅದನುಂಡು ನೆಮ್ಮದಿಯಿಂದ ಇರಬೇಕು. ಬದುಕಿನ ಗಾಣದಲಿ ಕಬ್ಬಾಗಿ ನುರಿದು ಸಿಹಿ ಹಂಚಿ ಕಹಿ ನುಂಗಿ ನಗಬೇಕು ವಿಷವನುಂಡು ಸಾಕ್ಷಾತ್ ಪರಶಿವನು ವಿಷಕಂಠನಾದುದನು ಮರೆಯದಿರಬೇಕು. ನೆರಳು ನೀಡುವ ಮರ ದಾಹ ನೀಗುವ ಜಲ ಪರಹಿತದಿ ಸಂತೃಪ್ತಿ ಕಾಣುವ ತೆರದಲಿ ಒಳಿತಿಗಾಗಿಯೆ ಮತಿಯ ಮಥಿಸುತಿರಬೇಕು ಹಿರಿತನಕೆ ಮಣಿದು ಘನತೆಯ ಮೆರೆಯಬೇಕು. ಬದುಕಿನ ಕದನದಲಿ ಹೋರಾಟಕಂಜದೆ ನೋವು-ನಲಿವಿಗೆ ಎದೆಯೊಡ್ಡಿ ನಿಲ್ಲಬೇಕು ಸೋಲನ್ನು ಮೆಟ್ಟಿ […]
Month : November-2022 Episode : Author : -ಎಸ್.ಆರ್.ಆರ್.
ಈಗ್ಗೆ ಹತ್ತು ವರ್ಷಗಳ ಹಿಂದೆ (2011-12) ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ‘ಇಂಡಿಯಾ ಎಗೆನ್ಸ್ಟ್ ಕರಪ್ಶನ್’ ಘೋಷಣೆಯೊಡಗೂಡಿ ಅಣ್ಣಾ ಹಜಾರೆಯವರ ಮಾರ್ಗದರ್ಶನದಲ್ಲಿ ಸಂಘಟನೆ ಆರಂಭವಾದಾಗ ಇಂತಹದೊಂದು ಜನಾಧಾರಿತ ಆಂದೋಲನ ಅತ್ಯಂತ ಆವಶ್ಯಕವಾಗಿತ್ತೆಂದು ಇಡೀ ದೇಶ ಭಾವಿಸಿತ್ತು. ಆದರೆ ಅಲ್ಪಕಾಲದಲ್ಲಿ ಅಣ್ಣಾ ಹಜಾರೆಯವರನ್ನೇ ಮೂಲೆಗುಂಪು ಮಾಡಿ ಕೇಜ್ರಿವಾಲ್ ನೇರ ರಾಜಕಾರಣಕ್ಕೇ ಇಳಿದರು. ಬಹುಮಟ್ಟಿಗೆ ಅಣ್ಣಾ ಹಜಾರೆಯವರ ವ್ಯಕ್ತಿತ್ವಪ್ರಭಾವದಿಂದ ನಿರ್ಮಾಣಗೊಂಡಿದ್ದ ಸದಭಿಪ್ರಾಯವೇ ಕೇಜ್ರಿವಾಲ್ರ ರಾಜಕೀಯಾಕಾಂಕ್ಷೆಗೆ ಮುಖ್ಯ ಬಂಡವಾಳವಾಗಿ ಕೆಲಸ ಮಾಡಿತ್ತು. ಅವರು ದೆಹಲಿಯ ಮುಖ್ಯಮಂತ್ರಿಯೂ ಆದರು. ನಮ್ಮ ದೇಶಕ್ಕೆ ಭ್ರಮನಿರಸನ ಹೊಸ […]
Month : November-2022 Episode : Author :
ಸಂಪಾದಕೀಯ ಆರೂಢ ಸರ್ಕಾರದ ಎಲ್ಲ ಕ್ರಮಗಳನ್ನೂ ವಿರೋಧಿಸುತ್ತಿರಬೇಕೆಂಬ ಏಕಾಂಶ ನೀತಿ ತಳೆದಿರುವ ವಿಪಕ್ಷಗಳು ‘ಅಗ್ನಿಪಥ್’ ಬಗೆಗೂ ಕೊಂಕು ತೆಗೆಯಹೊರಟಿದ್ದರೂ, ಅವುಗಳ ಕುತ್ಸಿತ ಟೀಕೆಗಳ ಪೊಳ್ಳುತನವನ್ನು ಜನತೆಯಿಂದ ಬಂದ ಅಪೂರ್ವ ಸ್ಪಂದನವೇ ಬಯಲು ಮಾಡಿದೆ. ದೇಶದ ಭದ್ರತೆಗೆ ಸವಾಲುಗಳು ಹೆಚ್ಚುತ್ತಿರುವ ಸನ್ನಿವೇಶದಲ್ಲಿ ದೇಶದಲ್ಲಿ ಶೇ. 18ಕ್ಕೂ ಮಿಗಿಲಾಗಿರುವ ಯುವಜನತೆಗೆ ಸೇನೆಯೊಡನೆ ಸಹಕರಿಸುವ ಅವಕಾಶವನ್ನು ‘ಅಗ್ನಿಪಥ್’ ಕಲ್ಪಿಸಿರುವುದು ಅಭೂತಪೂರ್ವವೂ ಪ್ರಶಂಸನೀಯವೂ ಆಗಿದೆ. ಸೇನೆಯ ಆಧುನಿಕೀಕರಣ, ರಕ್ಷಣೋಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಸಾಧನೆ ಮೊದಲಾದ ಕ್ರಮಗಳ ಜೊತೆಗೆ ಯುವಜನರ ಅಲ್ಪಾವಧಿ ನೇಮಕಾತಿ ವ್ಯವಸ್ಥೆಯನ್ನು […]
Month : November-2022 Episode : Author :
ಅಯಮುತ್ತಮೋsಯಮಧಮೋ ಜಾತ್ಯಾ ರೂಪೇಣ ಸಂಪದಾ ವಯಸಾ | ಶ್ಲಾಘ್ಯೋýಶ್ಲಾಘ್ಯೋ ವೇತ್ಥಂ ನ ವೇತ್ತಿ ಭಗವಾನನುಗ್ರಹಾವಸರೇ || – ಪ್ರಬೋಧಸುಧಾಕರ “ಜಾತಿ, ರೂಪ, ಸಂಪತ್ತು, ವಯಸ್ಸು – ಇಂತಹ ಅಂಶಗಳನ್ನು ಗಣಿಸಿ ಈ ವ್ಯಕ್ತಿ ಉತ್ತಮ, ಇವನು ಅಧಮ, ಇವನು ಎತ್ತರದವನು, ಇವನು ಕೆಳಗಿನವನು ಎಂದು ಭಗವಂತನು ಅನುಗ್ರಹ ಕರುಣಿಸುವ ಸಮಯದಲ್ಲಿ ಲೆಕ್ಕಾಚಾರ ಮಾಡುವುದಿಲ್ಲ.” ಭಕ್ತಿಯ ಮತ್ತು ಭಗವದನುಗ್ರಹದ ಸಾಮ್ರಾಜ್ಯವು ವ್ಯಾವಹಾರಿಕರೀತಿಯ ಮೇಲು-ಕೀಳು ಎಂಬ ಪರಿಗಣನೆಗಳಿಂದ ಅತೀತವಾದ್ದು ಎಂದು ಬೋಧಿಸುವ ಪೌರಾಣಿಕ-ಜಾನಪದ ಪ್ರಸಂಗಗಳು ಹೇರಳವಾಗಿವೆ. ಅಂತಹ ಒಂದು ದಾರ್ಶನಿಕ […]