ಅವನನ್ನು ನೋಡಿದರೆ ಆತ ಒಂದೆರಡು ದಿನ ಸ್ನಾನ ಮಾಡದೆ ಇದ್ದ ಹಾಗೆ ಇದ್ದ. ಕೆದರಿದ ತಲೆಕೂದಲು, ಎಣ್ಣೆ ಹಚ್ಚಿಕೊಂಡ ಥರ ಇರುವ ಮುಖ, ಬಾಯಿ ತೆರೆದರೆ ಕಾಣುವ ಒಂದು ಹಲ್ಲು ಕಿತ್ತುಹೋದ ಸ್ಥಳ, ಒರಟಾದ ತುಟಿ, ಬಲಿಷ್ಠವಾದ ಕಾಲುಗಳು ಮತ್ತು ಅವನೇನಾದರೂ ಕೈಯೆತ್ತಿ ಬಾರಿಸಿದರೆ ಎಂಥವನನ್ನೂ ಆಯತಪ್ಪಿ ಬೀಳಿಸಬಹುದೆನ್ನುವಂಥ ಬಾಹುಗಳು ಅವನಿಗಿದ್ದುವು. ಅಂಥ ಅವನು ಕುಳಿತ ಭಂಗಿ, ಅಂದರೆ ಎಡದ ಕಾಲನ್ನು ಮಡಚಿ ಬಲದ ತೊಡೆಯ ಮೇಲಿಟ್ಟ ರೀತಿ ಅವರಿಗೆ ವಿಚಿತ್ರವೆನ್ನಿಸಿತ್ತು. ಆದರೆ ಆತ ತನ್ನಲ್ಲಿ ಏನೂ […]













