‘ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು.’ ಅದಕ್ಕೆ ಮಾತು ಮನುಷ್ಯನಿಗೇ ಸೀಮಿತ. ನಾಯಿ ಬೆಕ್ಕು ದನಗಳಿಗಲ್ಲ. ಹಾಗಾದರೆ ಅವುಗಳಿಗೆ ಮಾತು ಬೇಡವೇ, ಬೇಕಲ್ಲಾ? ನಮ್ಮಂತೆಯೇ ಸುಖ ಕಷ್ಟ ಅವುಗಳಿಗಿಲ್ಲವೇ, ಅವುಗಳದನ್ನು ಹೇಳಿಕೊಳ್ಳುವುದಿಲ್ಲವೇ? ಯಾರಲ್ಲಿ ಹೇಳಿಕೊಳ್ಳುವುದು? ಅವುಗಳಿಗೇನು ಬಂಧುವೇ ಬಳಗವೇ?

ಬೇಗಬೇಗ, ಹೆಜ್ಜೆಹಾಕು ಪುಣ್ಯಕೋಟಿ. ನಾನು ನಿನ್ನ ಜೊತೆ ನಿಧಾನವಾಗಿ ನಡೆಯುವುದು ಬಲು ಕಷ್ಟ?’
‘ಹೇಗೆ ಬೇಗ ನಡೆಯುವುದೆಂದರೆ? ನಾನೇನು ನಿನ್ನಂತೆ ಬಡಕಲು ಶ್ವಾನವೇ? ಇಷ್ಟ ದೊಡ್ಡ ಹೊಟ್ಟೆ, ತಲೆ, ಕೊಂಬು, ಬಾಲ ನಿನಗೂ ಇದ್ದಿದ್ದರೆ ಆಗ ನಿಧಾನ ಹೆಜ್ಜೆಯ ಬೆಲೆ ಗೊತ್ತಾಗುತ್ತಿತ್ತು.’
‘ಅದಕ್ಕೇ ಅಲ್ಲವೇ ನಿನಗ? ಬೆಲೆ; ನಮ್ಮದು ನಾಯಿ ಪಾಡು.’
‘ನಾವು ಪ್ರತಿಭಟಿಸುತ್ತಿಲ್ಲ, ಅದಕ್ಕೇ ನಮಗೆ ಬೆಲೆ.’
‘ನಿಮಗೆ ಈ ಕೊಂಬುಗಳಿರುವುದೇತಕ್ಕೆ? ಕೊಲ್ಲಲು ಬಂದಾಗ ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ ಎಂದು ಯಾರಾದರೂ ಹೇಳಿದ್ದಾರೆಯೇ?’
‘ನಿನಗೆ ಹೇಳಲು ಸುಲಭವಾದೀತು. ಅದೊಂದು ಭಯಾನಕ ಪ್ರಪಂಚ. ಈಗೀಗ ನಿಮ್ಮನ್ನೂ ಬಳಸಿಕೊಳುತ್ತಿದ್ದಾರಲ್ಲಾ, ಬೌ ಬೌ ಬಿರಿಯಾನಿಗೆ. ನಿಮಗೆ ಇ?ಂದು ದೊಡ್ಡ ಕೋರೆ ಹಲ್ಲುಗಳಿವೆ, ನೀವೂ ಕಚ್ಚಬಾರದೇಕೆ?’
‘ಹ್ಞುಂ. ಅದೂ ಸರಿಯೆ. ಮನು?ನ ಮಾಂಸದಾಹಕ್ಕೆ ಎಲ್ಲರೂ ಬಲಿಯಾಗಬೇಕಲ್ಲವೇ- ಅದು ಪ್ರಾಣಿಗಳಾದರೂ ಸರಿಯೇ. ಮನುಷ್ಯರಾದರೂ ಸರಿಯೆ.’
‘ಪಶು ಪಕ್ಷಿ ಮನುಷ್ಯರೆಲ್ಲಾ ಬೆಲೆಯೇ ಇಲ್ಲದೆ ಬದುಕುವಂತಾಗಿದೆ. ಆದರೆ ಮನು?ರಿಗೆ ಅವರಿಗಲ್ಲದಿದ್ದರೆ ಅವರಲ್ಲಿರುವ ದುಡ್ಡಿಗಾದರೂ ಬೆಲೆ ಇದೆ.’
‘ಗಾದೆಯೇ ಇದೆ; ದುಡ್ಡು ಹೇಳಿತಂತೆ, ಹತ್ತು ಅಗುವವರೆಗೆ ನನ್ನನ್ನು ನೋಡಿಕೊ. ಆಮೇಲೆ ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು. ಅದೇ ಅಗುತ್ತಿರುವುದು.’
‘ನಾವೆಂಥ ಮೂರ್ಖರು ನೋಡು. ನಮ್ಮನ್ನು ಸಾಕುವ ಮನೆ ಯಜಮಾನನಿಗೆ ಏನೇ ಆಪತ್ತು ಬರುವುದಾದರೂ ನಮಗೆ ಬರಲಿ ಎಂದೇ ಆಶಿಸುತ್ತೇವೆ. ಮನೆಯವರ ಸಾವು ನೋವಿಗೆ ನಾವು ಬಲಿಯಾಗುತ್ತೇವೆ. ನಮ್ಮನ್ನು ಬಲಿಕೊಡುವಾಗ ಮಾತ್ರ ಯಾರಿಗೂ ಹೃದಯ ಆರ್ದ್ರವಾಗುವುದೇ ಇಲ್ಲ. ಜೊತೆಯಲ್ಲಿಯೇ ಉಂಡು ತಿಂದು ಬೆಳೆದವರನ್ನು ಇನ್ನು ಬೇಡದವರಂತೆ ಕಸಾಯಿಖಾನೆಗೆ ಕೊಂಡೊಯ್ಯುವಾಗ ನಮ್ಮ ಜೀವ ಬಾಯಿಗೆ ಬಂದಿರುತ್ತದೆ. ಪುಣ್ಯಕೋಟಿಯ ವಂಶ ನಮ್ಮದು. ಸಾವಿಗೆ ಹೆದರುವವರಲ್ಲ. ಆದರೂ ಆ ತಾಯಿ ಮಗುವನ್ನು ಬಿಟ್ಟು ಹೋಗುವಾಗ ಅಲ್ಲಿದ್ದವರೆಲ್ಲಾ ಎಷ್ಟು ಸಂಕಟಪಟ್ಟರು. ಜಗತ್ತಿನಲ್ಲಿ ಸಾವು ಎನ್ನುವುದು ಎಲ್ಲರಿಗೂ ಒಂದೇ. ಮನುಷ್ಯ ಮಾಡುವುದು ಕಂಡರೆ ಅವನಿಲ್ಲಿ ಶಾಶ್ವತವೇ ಅಂದುಕೊಂಡಿರಬೇಕು.’
ಹುಚ್ಚರ ಸಹವಾಸ
‘ನಮ್ಮಷ್ಟು ನಿಯತ್ತಿನವರಿಲ್ಲ ಎಂದು ಬೀಗುವವರು ನಾವು. ಆದರೇನು ಸುತ್ತಮುತ್ತ ಎಲ್ಲಿಯಾದರೂ ಒಂದು ಹುಚ್ಚುನಾಯಿ ಕಂಡರೆ ಸಾಕು. ನಮ್ಮನ್ನೂ ಹೊಡೆದು ಸಾಯಿಸುತ್ತಾರೆ.’
‘ಯಾವದಾದರೂ ಆಗಲಿ. ಹುಚ್ಚು ಮಾತ್ರ ಹಿಡಿಯಬಾರದು. ಮೊನ್ನೆ ಆ ತುಂಗೆಯ ಕಥೆ ನೋಡಿದೆಯಲ್ಲಾ; ಹುಚ್ಚು ಎಂದು ಗೊತ್ತಾದ ತಕ್ಷಣ ತೋಟದೊಳಗೆ ಕಟ್ಟಿದವರು ಮತ್ತೆ ಆ ಕಡೆಗೆ ಯಾರಾದರೂ ತಲೆಹಾಕಿದ್ದರೇ? ನಮಗೂ ಅಸಹಾಯತೆ. ಮೈದಡವಿ ಸಾಂತ್ವನ ಹೇಳೋಣವೆಂದರೆ ಎಲ್ಲಿ ನಮಗೂ ಹುಚ್ಚು ಹಿಡಿಯುವುದೆಂಬ ಭಯ. ಯಾರಿಗೂ ಬೇಡದ ಯಮಯಾತನೆ. ತುಂಗೆಯಂತೂ ಹುಚ್ಚು ಕೆದರಿ ತನ್ನ ಹೊಂಡವನ್ನು ತನ್ನ ಹಲ್ಲಿನಿಂದಲೇ ತೋಡಿಕೊಂಡಿದ್ದಳು. ಅಲ್ಲ, ನನಗೆ ಆಶ್ಚರ್ಯವೆಂದರೆ ಮನು?ರು ಹುಚ್ಚರಾದರೂ ಹೇಗೆ ಜೊತೆಜೊತೆಗೆ ಬದುಕುತ್ತಾರೆ ಎಂದು!’
‘ಅ… ಅದರಲ್ಲಿ ಆಶ್ಚರ್ಯವೇನಿದೆ; ಎಲ್ಲರೂ ಹುಚ್ಚರೇ ಆದ್ದರಿಂದ ಯಾರಿಗೂ ಏನೂ ಅನ್ನಿಸುವುದಿಲ್ಲ. ಹಹಹ…’
‘ಎಲ್ಲವೂ ವಿಪರೀತವೇ. ದಾಹ ದಾಹ ದಾಹ. ಒಂದು ರೀತಿಯಲ್ಲಿ ನೋಡಿದರೆ ನಮಗೆ ಬಾಯಿ ಬರದಿದ್ದುದೇ ಒಳ್ಳೆಯದಾಯಿತು. ಮಾತಿನ ಕ?ವೇ ಅಂಥದ್ದು. ಅನ್ನಿಸಿದ್ದನ್ನು ಹೇಳಲೇಬೇಕು. ಹೇಳದೇ ಇದ್ದರೆ ಅದು ಅನಿಸಿಕೆ ಆಗಲಾರದು.’
‘ನಿಮಗಿತ್ತು ಮಾತನಾಡುವ ಅವಕಾಶ. ನೀವೆ ತಾನೆ ಕಳೆದುಕೊಂಡದ್ದು?’
ಮಾತುಕಸಿದ ಪರಿಹಾರ
‘ಏನು ಮಾಡಲು ಸಾಧ್ಯ? ಮನೆಯವರ ಸಾವು ನೋವು ನಮಗೆ ಬರಲಿ ಎಂದು ನಾವು ಬಯಸಿದ್ದೆವೆ? ಅದು ದೇವರ ಶಾಪ.’
‘ಹ್ಞೂಂ… ಏನೋ ನಿಮ್ಮ ಪೂರ್ವಜರ ಕಾಲದಲ್ಲಿ ನಡೆದ ಕತೆಯನ್ನು ನಮ್ಮಜ್ಜಿ ಹೇಳಿದ್ದಳು. ಆ ಮುದುಕ ಸತ್ತಿದ್ದರೆ ಆಗುವ ನ?ವಾದರೂ ಏನಿತ್ತು? ನಿಮ್ಮ ಪೂರ್ವಜರಿಗೆ ಅಧಿಕಪ್ರಸಂಗ ಹೆಚ್ಚಾಯಿತು ಬಿಡು.’
‘ಅದೂ ಸರಿಯೇ. ನಮಗೆ, ನಮ್ಮ ಮನೆಯವರಿಗೆ ನಾಳೆ ಹೀಗೊಂದು ಆಪತ್ತು ಬರುವುದು ಎಂಬುದಾದರೂ ಯಾಕೆ ಮೊದಲೇ ತಿಳಿಯಬೇಕು? ಹಾಗೆ ತಿಳಿದ ಮೇಲೆ ಸುಮ್ಮನಿರುವುದು ಎಷ್ಟು ಸರಿ? ಅದಕ್ಕಾಗಿಯೇ ನಮ್ಮ ಕಾಮಧೇನು ಆ ಅಜ್ಜಿಯನ್ನು ಕರೆದು ಹೇಳಿದ್ದು – ಒಡತೀ, ನಿನ್ನ ಒಡೆಯನಿಗೆ ನಾಳೆಯೇ ಮರಣ ಬರಲಿದೆ. ಯಮಧರ್ಮರಾಯನೇ ಬಂದು ಕರೆದೊಯ್ಯಲಿದ್ದಾನೆ – ಎಂದು.’
‘ವಿಷಯ ತಿಳಿಸಿದ್ದೇನೋ ಸರಿ. ಅದಕ್ಕೆ ಪರಿಹಾರ ಯಾಕೆ ಹೇಳಬೇಕಿತ್ತು?’
‘ಅದೇ ಹೇಳಿದೆನಲ್ಲಾ – ಮನೆಯವರೆಂಬ ಮಮಕಾರ. ಸುದ್ದಿ ಕೇಳಿ ಅಜ್ಜಿ ತಲೆ ಮೇಲೆ ಕೈ ಹಚ್ಚಿ ಕುಳಿತಳು. ಊಟ ನಿದ್ರೆ ಬಿಟ್ಟು ಚಿಂತೆಯಲ್ಲಿ ಮುಳುಗಿದ ಅಜ್ಜಿಗೆ ಕಾಮಧೇನುವೇ ಸಾಂಪ್ರದಾಯಿಕ ಪರಿಹಾರ ಹೇಳಿದಳಂತೆ.’
‘ಏನದು ಸಾಂಪ್ರದಾಯಿಕ ಪರಿಹಾರ?’
‘ನಮ್ಮಲ್ಲಿ ಬೆಳಗ್ಗೆ ಎದ್ದು ಹೊಸ್ತಿಲು ಬರೆಯುವುದು ಸಂಪ್ರದಾಯ. ಬರೆಯುವ ಹೊತ್ತಿಗೆ ಯಾರೂ ಒಳಗಿಂದ ಹೊರಗೆ ಹೋಗುವಂತಿಲ್ಲ. ಹೊರಗಿನಿಂದ ಒಳಗೆ ಬರುವಂತಿಲ್ಲ. ಸರಿ, ಅಜ್ಜಿ ಮುಂಜಾನೆಯೇ ಎದ್ದು ಹೊಸ್ತಿಲು ಉಜ್ಜಿ ಬರೆಯತೊಡಗಿದಳು. ಅಜ್ಜ ಮನೆಯೊಳಗಿದ್ದ. ಯಮಧರ್ಮರಾಯ ಬಂದ. ಹೊಸ್ತಿಲು ಬರೆಯುವ ಅಜ್ಜಿಯನ್ನು ನೋಡಿದ. ಸಂಪ್ರದಾಯದಂತೆ ಹೊರಗೆಯೇ ನಿಂತು ಕಾಯತೊಡಗಿದ. ಅಜ್ಜಿಯೋ ಉಜ್ಜುತ್ತಿದ್ದಳು ಬರೆಯುತ್ತಿದ್ದಳು. ಈ ಬರೆಯುವ ಅಳಿಸುವ ಕೆಲಸ ಎ? ಹೊತ್ತಾದರೂ ಮುಗಿಯುವುದೇ ಇಲ್ಲ. ಸೂರ್ಯ ನೆತ್ತಿಗೆ ಬಂದ.’
‘ಆ ಯಮನಿಗೇನು ಮಾಡಲು ಬೇರೆ ಕೆಲಸವಿಲ್ಲವೇ? ಸೂರ್ಯ ನೆತ್ತಿಗೆ ಬರುವವರೆಗೂ ಕಾಯುವುದೆಂದರೆ? ಆ ದಿನ ಈ ಅಜ್ಜನೊಬ್ಬನೇ ಗಿರಾಕಿಯೋ ಏನೋ?’
’ಉಳಿದ ಕಡೆ ಅವನ ಕಿಂಕರರು ಹೋಗಿರಬಹುದು. ಸೂರ್ಯನ ಬಿಸಿಗೆ ಯಮನ ಒಡಲೂ ಬೇಯತೊಡಗಿತು. ಆಗ ಯೋಚಿಸಿದನಂತೆ. ಆಗ ಅವನ ದೃಷ್ಟಿ ಬಿದ್ದದ್ದೇ ಕಾಮಧೇನುವಿನ ಕಡೆಗೆ. ಸಾವಿನ ವಿ?ಯ ತಿಳಿಸಿದ್ದಲ್ಲದೆ ಅದಕ್ಕೆ ಪರಿಹಾರವನ್ನೂ ತಿಳಿಸಿದೆಯಾ? – ಎಂದವನೇ ಕಾಮಧೇನುವಿನ ಮುಂದೆ ಕೈಯ್ಯೆತ್ತಿ ಶಾಪ ನೀಡಿದ. ಇಂದಿನಿಂದ ನಿಮಗೆ ಮಾತು ಮರೆತು ಹೋಗಲಿ. ಮೂಕಪ್ರಾಣಿಗಳಾಗಿಯೇ ಬದುಕಿರಿ. ಕಾಮಧೇನು ಕಣ್ಣೀರುಗರೆದರೂ ಉಪಯೋಗವಾಗಲಿಲ್ಲ. ಅವಳು ಅಂದು ಮಾಡಿದ ತಪ್ಪಿಗೆ ನಾವು ಇವತ್ತು ಅನುಭವಿಸುವಂತಾಗಿದೆ.’
’ಅಪ್ಪ ಅಮ್ಮ ಮಾಡಿದ್ದನ್ನು ಮಕ್ಕಳು ಉಣ್ಣುತ್ತಾರಂತೆ. ನಾವೋ ಅವರಿಗಿಂತಲೂ ಹಿಂದಿನವರು ಮಾಡಿದ್ದನ್ನೂ ತಿನ್ನುತ್ತಿದ್ದೇವೆ. ಧರ್ಮರಾಯನೊಂದಿಗೆ ಸ್ವರ್ಗದ ಹಾದಿ ತುಳಿದವರು ನಾವು. ಈಗ ಅಲ್ಲಿಯೂ ಇಲ್ಲ, ಇಲ್ಲಿಯೂ ಸಲ್ಲ ಎಂದಾಗಿದೆ.’
ಹಕ್ಕೊತ್ತಾಯ
‘ದಾಸರು ನಿನ್ನಜ್ಜನ ಬೆನ್ನ ಹಿಂದೆ ಬಂದಿದ್ದರಂತೆ, ರೊಟ್ಟಿಗೆ ತುಪ್ಪ ಸವರಿಕೊಂಡು! ದಾಸರೇ ಪೂಜ್ಯರು. ಗೋವುಗಳ ಕಾಯವ ಗೋಪಾಲಕನಿಗೆ ಆ ಹೆಸರು ಬಂದದ್ದೇ ನಮ್ಮಿಂದಲ್ಲವೇ? ಬೀದಿ ನಾಯಿಗಳ ಬಗ್ಗೆ ಏನೋ ಸುದ್ದಿ ಕೇಳಿದಂತಿತ್ತಲ್ಲಾ? ಪುನರ್ವಸತಿಗೆ ಏನಾದರೂ ವ್ಯವಸ್ಥೆ ಮಾಡುತ್ತಾರಂತೇನು?
‘ಪುನರ್ವಸತಿ ಬಿಡು. ಕಾಟ ತಡೆಯಲಾರದೆ ಕೊಂದು ಬಿಸಾಡುತ್ತಾರಂತೆ. ನಿಮಗೋ ಕಸಾಯಿಖಾನೆಯೆ ಗತಿ…’
‘ತೊಟ್ಟಿಯಲ್ಲಿ ಇವರು ಮಗುವನ್ನು ಬಿಸಾಡುವುದು ತಪ್ಪಲ್ಲ. ಅದನ್ನು ನೀವು ಎತ್ತಿಕೊಂಡು ಹೋದದ್ದು ತಪ್ಪು.’
‘ಗಲ್ಲಿಗೊಂದು ಸಾರಾಯಿ ಅಂಗಡಿ ಮಾಡಿ ಕುನ್ನಿಗಳ ಕಾಟಕ್ಕೆ ಹೆದರಿದೊಡೆ ಎಂತಯ್ಯಾ – ಎಂದ ಹಾಗಾಯ್ತು. ನಮ್ಮವರಿಗೆ ಇಂಥ ಮಾಂಸದ ರುಚಿ ಕಲಿಸಿದವರು ಯಾರು? ಇವರೇ ಅಲ್ಲವೇ? ಒಳಚರಂಡಿ ವ್ಯವಸ್ಥೆ ಇಲ್ಲದೆ ಮಾಂಸದೂಟ ಬಡಿಸಲು ಹೊರಟರೆ ಬೀದಿಯನ್ನು ನಾವೇ ತಾನೆ ಸ್ವಚ್ಛಗೊಳಿಸಬೇಕು? ಅದಕ್ಕೇನಾದರೂ ಬೆಲೆ ಇದೆಯಾ?’
‘ಅದಕ್ಕೆಲ್ಲ ಹೇಗೆ ಬೆಲೆ ಬರಬೇಕು? ಸ್ವಚ್ಛವಿರುವ ಬೀದಿಯಲ್ಲಿ ಕಸ ತಂದು ಹಾಕಿ ಹಿಡಿಸೂಡಿ ಹಿಡಿದು ಗುಡಿಸಿ ಫೋಟೋ ತೆಗಿಸಿಕೊಂಡರೆ ಅದಕ್ಕೊಂದು ಬೆಲೆ ಇದೆ. ಅಲ್ಲವೇ?’
‘ದೇಶದಲ್ಲಿ ಜಾರಿಗೊಳಿಸಬಹುದಾದ ಕಾನೂನುಗಳು ಯಾವುದೂ ಇಲ್ಲವೆನಿಸುತ್ತಿದೆ. ಇನ್ನಾದರೂ ಹೊಸ ಕಾನೂನುಗಳನ್ನು ಸೃಷ್ಟಿಸಿಯಾರೆ?’
‘ಕಾನೂನು ತಯಾರಕರು ನಮ್ಮನ್ನೂ ಒಂದು ಮಾತು ಕೇಳಿದರಾಗುತ್ತಿತ್ತು. ಮನು?ರಿಗೆಲ್ಲ ಅಂಗವಿಕಲರಿಗೆ ಅನಾಥರಿಗೆ ವಯಸ್ಸಾದವರಿಗೆ ಅಂತ ಕೊನೆಗಾಲಕ್ಕೆ ಅ? ಇ? ಸರಕಾರವೇ ಕಳುಹಿಸುವುದಂತೆ. ನಮಗೂ ಹಾಗೆಯೇ ಕೊಟ್ಟರಾಗುತ್ತಿತ್ತು. ಈ ಪ್ರಾಣಿಸಂಗ್ರಹಾಲಯಗಳಿಗೆ ಗೋಶಾಲೆಗಳಿಗೆ ಸರಕಾರವೇ ಆಸಕ್ತಿವಹಿಸುತ್ತಿದ್ದರೆ ಗಾಂಧಿಯವರ ಅಹಿಂಸೆಯ ತತ್ತ್ವ ನಿಜವಾದ ಅರ್ಥದಲ್ಲಿ ಸಾಕಾರಗೊಳ್ಳುತ್ತಿತ್ತು.’
‘ಅದೆಲ್ಲಾ ಈ ಕಲಿಯುಗದಲ್ಲಿ ಆಗುವಂಥದ್ದಲ್ಲ. ಸಧ್ಯಕ್ಕೆ ಈ ಹುಲ್ಲುಗಾವಲಿನಲ್ಲಿ ನೀನು ಮೇಯುತ್ತಿರು. ನಾನು ಇಲ್ಲಿಯೇ ನನ್ನ ಗೆಳೆಯ ಗೆಳತಿಯರ ಜೊತೆಗೆ ಹರಟೆ ಹೊಡೆದು ಹೊಟ್ಟೆಪಾಡನ್ನು ನೋಡಿಕೊಂಡು ಬರುತ್ತೇನೆ. ಆಗದೇ?
ಲೇಖಕಿ ಕನ್ನಡ ಭಾಷಾ ಪ್ರಾಧ್ಯಾಪಕಿ
ಮೌನ ಮಾತದಾಗ ಲೇಖನ ಚೆನ್ನಾಗಿದೆ.ನಿಮ್ಮಗೆ ತುಂಬಾ ಧನ್ಯವಾದಗಳು ಮೇಡಂ