ಖ್ಯಾತ ಹೋಮಿಯೋಪತಿ ವೈದ್ಯ ಡಾ. ಬಿ.ಟಿ. ರುದ್ರೇಶ್ ಅವರು ಬರೆದಿರುವ ’ಡಾ. ಬಿ.ಟಿ. ರುದ್ರೇಶ್ ಡೈರಿ’ಯಲ್ಲಿ ಹೋಮಿಯೋಪತಿ ಚಿಕಿತ್ಸೆಯ ಮೂಲಕ ಯಶಸ್ಸು ಕಂಡ ಆಯ್ದ ಹದಿನಾರು ಅಪೂರ್ವ ಪ್ರಕರಣಗಳನ್ನು ದಾಖಲಿಸಲಾಗಿದೆ. ಬೇರೆಲ್ಲ ಪ್ರಖ್ಯಾತ ಅಲೋಪತಿ ನುರಿತ, ತಜ್ಞ ವೈದ್ಯರು ’ಸಾಧ್ಯವೇ ಇಲ್ಲ’ ಎಂದು ಕೈಚೆಲ್ಲಿದ ಪ್ರಕರಣಗಳನ್ನೇ ಕುತೂಹಲದಿಂದ ಸವಾಲಾಗಿ ಸ್ವೀಕರಿಸಿ ಚಿಕಿತ್ಸೆ ನೀಡಿ, ಆ ರೋಗಿಗಳ ಕತ್ತಲೆಯ ಬದುಕಿಗೆ ಬೆಳಕು ನೀಡಿದ ಕಥನಗಳು ಇಲ್ಲಿವೆ. ಇವುಗಳಲ್ಲಿ ಕೆಲವನ್ನು ಅವರು ವೀಡಿಯೋ ಚಿತ್ರೀಕರಣದ ಸಾಕ್ಷ್ಯಾಧಾರಗಳ ಸಹಿತ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಾಗಾರಗಳಲ್ಲಿ ಮಂಡಿಸಿಯೂ ಇದ್ದಾರೆ. ಡಾ. ರುದ್ರೇಶ್ ಅವರ ’ಡೈರಿ’ಯಲ್ಲಿ ದಾಖಲಾಗಿರುವ ಪ್ರಕರಣಗಳು ಪವಾಡವೂ ಅಲ್ಲ, ಕಟ್ಟುಕತೆಗಳೂ ಅಲ್ಲ. ಆದರೆ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಯಾರ ಹೆಸರನ್ನೂ ಅವರು ಬಹಿರಂಗಪಡಿಸಿಲ್ಲ. ವೃತ್ತಿಧರ್ಮದ ಬಗೆಗೆ ಅವರಿಗಿರುವ ಬದ್ಧತೆಗೆ ಇದು ಸಂಕೇತ, ಅಷ್ಟೆ.
ಹೋಮಿಯೋಪತಿ ಚಿಕಿತ್ಸಾಪದ್ಧತಿಯಲ್ಲಿ ಮನು?ನನ್ನು ಬಿಡಿಬಿಡಿಯಾಗಿ ನೋಡದೆ ಇಡಿಯಾಗಿ ನೋಡಲಾಗುತ್ತದೆ. ಇಲ್ಲಿ ರೋಗಿಗೆ ಚಿಕಿತ್ಸೆಯೇ ಹೊರತು ರೋಗಕ್ಕಲ್ಲ. ’ವೈದ್ಯ ಹೇಗಿರಬೇಕು ಎಂಬ ಹತ್ತುಹಲವು ಕಟ್ಟುಪಾಡುಗಳನ್ನು, ಮಾನವೀಯ ಮೌಲ್ಯಗಳನ್ನು ಹೋಮಿಯೋಪತಿ ನಮಗೆ ಕಲಿಸಿಕೊಟ್ಟಿದೆ’ ಎನ್ನುವ ಡಾ. ರುದ್ರೇಶ್ ಅವರ ಮಾತುಗಳಲ್ಲೇ ಹೋಮಿಯೋಪತಿ ವೈದ್ಯಪದ್ಧತಿಯ ಸಾರ್ಥ್ಯಕ್ಯದ, ಯಶಸ್ಸಿನ ಹೊಳಹುಗಳಿವೆ.
೨೦ ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ, ೨೦೦೦ ಸಂತಾನಹೀನತೆ ಪ್ರಕರಣಗಳ ಯಶಸ್ವೀ ಪರಿಹಾರದ ವಿಶ್ವದಾಖಲೆ; ಹಲವಾರು ವೈದ್ಯಕೀಯ ಕೃತಿಗಳ ಪ್ರಕಟಣೆ; ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್ನಿಂದ ಹಿಡಿದು ನಾಡೋಜವರೆಗೆ ಅವಾಗಿಯೇ ಅರಸಿಬಂದ ಸಾಲುಸಾಲು ಪುರಸ್ಕಾರಗಳು; ಪತ್ರಿಕೆಗಳಲ್ಲಿ ಭರಪೂರ ಲೇಖನಗಳು; ಟಿವಿ ವಾಹಿನಿಗಳಲ್ಲಿ ಅಸಂಖ್ಯಾತ ಸಂದರ್ಶನಗಳು – ಇವೆಲ್ಲ ಡಾ. ಬಿ.ಟಿ. ರುದ್ರೇಶ್ ಅವರ ಸಾಧನೆಗಳಿಗೆ ಹಿಡಿದ ಕನ್ನಡಿ. ಎಲ್ಲರೂ ಕೈಚೆಲ್ಲಿದ ಪ್ರಕರಣಗಳನ್ನೆತ್ತಿಕೊಂಡು ಔ?ಧಿ ಕೊಟ್ಟು ಗುಣಮುಖರನ್ನಾಗಿಸುವುದ? ಅಲ್ಲದೆ, ಅಂತಹ ಪ್ರಕರಣಗಳನ್ನು ಸರಳವಾಗಿ ಸ್ವಾರಸ್ಯವಾಗಿ ಓದಿಸಿಕೊಂಡು ಹೋಗುವಂತೆ ಅಕ್ಷರರೂಪಕ್ಕೆ ಇಳಿಸುವುದರಲ್ಲೂ ಡಾ. ರುದ್ರೇಶ್ ಸಿದ್ಧಹಸ್ತರು ಎನ್ನುವುದಕ್ಕೆ ಈ ಕೃತಿ ನಿದರ್ಶನ. ವೈದ್ಯಕೀಯಸಾಹಿತ್ಯದಲ್ಲಿ ಇದೊಂದು ಸಂಗ್ರಾಹ್ಯ ಕೃತಿ. ವೈದ್ಯಸಾಹಿತ್ಯವೆಂದರೆ ಸೃಜನಶೀಲವಲ್ಲ, ಬರಿದೇ ಕೇಸ್ ಹಿಸ್ಟರಿಗಳ ಒಣ ವರದಿ ಎನ್ನುವವರು ಈ ಕೃತಿಯನ್ನೊಮ್ಮೆ ಓದಲೇಬೇಕು.
– ದು.ಗು. ಲಕ್ಷ್ಮಣ